ನನ್ನ ಹಸಿರು ಭೂಮಿಗೆ ನಿನ್ನ ನೀಲಾಗಸದ ಚುಂಬಕ ಗಾಢಾಲಿಂಗನ, ಮರ್ತ್ಯದಿಂದ ಮೇಲೇರಿ ಗಂಧರ್ವತ್ವದ ದಿಗಂತದೆಡೆಗಿನ ಜೋಡಿ ಪಯಣ, ಒಲವಿನ ಅಮೃತದ ಹಿಂಗದ ದಾಹದಲ್ಲಿ ಸಿಲುಕೋಣ ಪುನರಾವರ್ತನೆಯ ಚಕ್ರದಲ್ಲಿ, ನಿನಗೆ ಭುವಿಗಿಳಿಯಲಾಗದಿದ್ದರೆ ಹೇಳು ಭೇಟಿಯಾಗೋಣವಲ್ಲೇ, ಗಡಿಯಿರದ ಅಸೀಮ ನಭನೀಲಿಯಲ್ಲಿ; ಕರಗಿ ಒಂದಾಗಿ ಹಗುರಾದ ಹನಿಯಾಗಿ, ಒಟ್ಟಾಗಿ ಸುರಿದು ಇಳೆಗೆ ಇಳಿಯೋಣ ಮಳೆಯಾಗಿ! #ದಿಗಂತ #ಪ್ರೀತಿ #ಮಳೆ #yqjogi_kannada #yqjogikannada #yqbaba #yqjogi #photocreditgoogle