Nojoto: Largest Storytelling Platform

ಗಝಲ್ ಅಕ್ಕರೆಯಿಂದ ಅಡಿಯಿರಿಸಿದ್ದ ಅಕ್ಷರದ ಮಹಲು ಕುಸಿಯುತ್ತ

ಗಝಲ್
ಅಕ್ಕರೆಯಿಂದ ಅಡಿಯಿರಿಸಿದ್ದ ಅಕ್ಷರದ ಮಹಲು ಕುಸಿಯುತ್ತಿದೆ
ಭಾವನೆಗಳಿಗೆ ಬಣ್ಣಹಚ್ಚಿದ ಬರಹದ ಹೊನಲು ಬತ್ತಿಹೋಗುತ್ತಿದೆ

ಕಲೆತು ಕಲಿತು ಬಯಸಿ ಬರೆಯುತಲಿದ್ದೆ ಬಹು ದಿನಗಳಿಂದಲೂ
ಪುಟವಿಲ್ಲವೆಂದು ಪ್ರತಿಯೊಂದು ಪದವೂ ಬಲು ಹಠಮಾಡುತ್ತಿದೆ

ಬರೆವ ತುಡಿತಕೆ ಮಿಡಿದ ವೇದಿಕೆ ಉಳಿಸಿ ಹೋಗುತ್ತಿದೆ ವೇದನೆ
ತೆರೆದು ಕದವನು ತೊರೆದು ಹೋಗಿರೆಂದೆನಲು ಮನಕರಗುತ್ತಿದೆ

ಸೇರಿ ಹೋಗುತ್ತಿದೆ ಅರಿವಿನ ಅರಮನೆಯು ನೆನಪಿನ ಪುಟವನ್ನು
ಮನ ಸೂರೆಗೊಳ್ಳುತಿದ್ದ ಬರಹಗಳ ಘಮಲು ಮರೆಯಾಗುತ್ತಿದೆ

ಸಾಗುತ್ತಿರಿ ಕವಿ ಹೃದಯಗಳೆಲ್ಲಾ ಸಾಹಿತ್ಯದ  'ವಿಜಯ' ಪಥದಲ್ಲಿ
ವಿದಾಯ ಗೀತೆಯನು ಬರೆದು ನಡೆದು ಬಿಡಲು ನೋವಾಗುತ್ತಿದೆ ಹೀಗೊಂದು ಗಝಲ್ ಬರೆಯಬೇಕಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಬಿಡುವಾದಾಗ ಬಂದು ಓದಿ ಖುಷಿಪಡುವ ಹಲವು ಬರಹಗಳು ಇನ್ಮೇಲೆ ಕಾಣಿಸುವುದಿಲ್ಲ ಎನ್ನುವ ಬೇಸರವಿದೆ.

ಬರಹದ ಚೌಕಟ್ಟಿನಲ್ಲೇ ಆಗಿದ್ದರೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಹಲವರನ್ನು ಮಿಸ್ ಮಾಡಿಕೊಳ್ಳುತ್ತೇನೆ.🤐

ಯಾವುದೇ ಕಾರಣಕ್ಕೂ ನಿಮ್ಮ ಸಾಹಿತ್ಯಾಸಕ್ತಿಗೆ ವಿದಾಯ ಹೇಳಬೇಡಿ. ಆತ್ಮತೃಪ್ತಿಗಾಗಿ, ನೆಮ್ಮದಿಗಾಗಿಯಾದ್ರೂ ಯಾವುದಾದ್ರೂ ವೇದಿಕೆಯಲ್ಲಿ ಬರೆಯುತ್ತಿರಿ.

ವೈಕ್ಯೂ ನಲ್ಲಿ ನನ್ನಿಂದ ಯಾರಿಗಾದ್ರೂ ಬೇಸರವಾಗಿದ್ದರೆ ಕ್ಷಮೆಯಿರಲಿ..🙏🏻