ಜಗವಿಮೋಚಕ - ೧೮೭ ========================== ಹೆಣ್ಣು ಹೊನ್ನು ಮಣ್ಣು ಮಾಯೆಯೆಂದರು ಧರ್ಮ ಕರ್ಮ ಪಾಪ ಪುಣ್ಯ ದಯೆಯೆಂದರು ನಾನು ನೀನು ನಾವು ನೀವು ನಶ್ವರವೆಂದರು ಪ್ರೀತಿ ಸ್ನೇಹ ನಂಬಿಕೆ ವಿಶ್ವಾಸ ಬೆಳಕೆಂದರು ಮೋಸ ದ್ರೋಹ ವಂಚನೆ ಇರುಳೆಂದರು ಗೆಲುವು ಸೋಲು ಜಯಾಪಜಯ ಕ್ಷಣಿಕವೆಂದರು ಮಾತೇ ಮುತ್ತು ದ್ವೇಷ ಆಪತ್ತು ಮುಟ್ಟದಿರೆಂದರು ನಡೆ ನುಡಿ ದೃಷ್ಟಿ ಸೃಷ್ಟಿ ಸಕಲಕೂ ಶರಣೆಂಬುವರು ಕ್ಷಣವೊಂದು ಮರಳಿ ಬೆಳಗರೆದ ಇರುಳೊಳಗೆ ಎಲ್ಲಾ ಮರೆತು ಮೆರಯಲು ಹಪಾಹಪಿಸೊ ಮನುಜ ನೀ ನಿನ್ನಂತೆ ನೀ ಬಾಳದಿರೆ ಸೂತಕ ದೆದರೂ ನೀ ಸೋಲುವವರಗೆ ಬದುಕೆಲ್ಲಾ ಬರಿ ಬಡಿದಾಟವೋ ಬ್ರಹ್ಮಲಿಪಿಯಂ ನಂಬಿ ಹೊರಟರೆ ಅಂತ್ಯವೆಲ್ಲಿದೆಯೋ ಅನಾಚಾರಕೆ.. ಜಗವಿಮೋಚಕ - ೧೮೭ #ಜಗವಿಮೋಚಕ #yqdvkrddots #ಹೆಣ್ಣು #ಹೊನ್ನು #ಮಣ್ಣು #ಸತ್ಯ #ಜೀವನ #ಬದುಕು