ಯುಗ ಪುರುಷ ಬಸವಣ್ಣ ನಮ್ಮೊಳಗಿನ ಆತ್ಮಚೈತನ್ಯವೇ ದೇವರೆಂದು ತಿಳಿಸಿ ಇತರರಲ್ಲೂ ದೇವರನ್ನು ಕಾಣುವ ದಾರಿ ತೋರಿದ ಮಹಾನ್ ಗುರು ನೀನು.. ಅಂತರಂಗದ ವ್ಯಕ್ತಿತ್ವಕ್ಕೊಂದು ಸಂವಿಧಾನವ ರೂಪಿಸಿ ವ್ಯಕ್ತಿತ್ವ ವಿಕಾಸವಾಗದ ಹೊರತು ಸಮಾಜದ ವಿಕಾಸ ಸಾಧ್ಯವಿಲ್ಲವೆಂದು ಸಾರಿ ಸಾರಿ ಹೇಳಿದ ತತ್ವಜ್ಞಾನಿ ನೀನು.. ಮಾಡು ಕಾರ್ಯದಲ್ಲಿ ಉಚ್ಚ ನೀಚ ವೆಂಬ ಭಾವನೆಯ ತೊಲಗಿಸಿ ಪ್ರತೀ ಕಾಯಕವೂ ಸರ್ವಶ್ರೇಷ್ಠವೆಂದು ಸಾರಿದ ಮಹಾನ್ ಮಾನವತಾವಾದಿ ನಿನಲ್ಲವೆ... ಕಲ್ಪನೆಯ ಕೂಸಾಗಿದ್ದ ಸಮಾನತೆಯನ್ನು ವಾಸ್ತವ ಜಗತ್ತಿಗೆ ಪರಿಚಯಿಸಿ ಅನುಷ್ಠಾನಗೊಳಿಸಿ ಮಾತಿಗಿಂತ ಕೃತಿ ಮೇಲು ಎಂದು ಸಾರಿದ ಮಹಾನ್ ಕ್ರಾಂತಿಕಾರಿ ನೀನು...... ಅರಿವೇ ಗುರುವೆಂಬಂತೆ ಸಾಮಾನ್ಯರಿಗೆ ಆಡುಭಾಷೆಯಲ್ಲಿ ಅನುಭವಗಳ ಸಾರ ತಿಳಿಸುವ ಅನುಭವ ಮಂಟಪವೆಂಬ ಗುರು ಶರಣರ ವೇದಿಕೆ ನಿರ್ಮಿಸಿದ ಗುರುಗಳ ಗುರು ಸದ್ಗುರು ನೀನಗೆ ಶರಣು ಶರಣಾರ್ಥಿಗಳು.... ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು. Basava Jayanthi