Nojoto: Largest Storytelling Platform

ಇಬ್ಬನಿ🌨 ಗಾಳಿಯೊಳಗೆ ನೀರೊ, ನೀರೊಳಗೆ ಗಾಳಿಯೊ ಮುಂಜಾನೆಯ

ಇಬ್ಬನಿ🌨

ಗಾಳಿಯೊಳಗೆ ನೀರೊ, ನೀರೊಳಗೆ ಗಾಳಿಯೊ
ಮುಂಜಾನೆಯ ನೋಟಕೆ ಹಾಕಿದ ಪರದೆ
ಅದಾವ ಜಾದೂಗಾರನ ಸೆಲೆಯೊ,ಕಲೆಯೊ
ಹೊಂಗಿರಣದ ಸುಳಿವಿಲ್ಲ ಸಂಚಾರ ಸಾಗಿದೆ (೧)

ಮೈ ಕೊರೆಯೊ ತಂಪು ಮೈಗೆ ತಾಗುತಿರಲು
ಜಡನಿದ್ದೆಗು ಕುತೂಹಲಕು ಜಗಳಾಟ
ಪರದೆಯೊಳು ನುಸುಳಿ ಮುನ್ನುಗ್ಗುತಿರಲು
ನಿಸರ್ಗದ ಅರಮನೆಯದೆ ಕಣ್ಣೋಟ         (೨)

ಮರ ಹೂಬಳ್ಳಿಗೆ ಸೊಗಸಾಗಿ ಆವರಿಸಿ
ಬಲೆ ಬೀಸುತಿಹೆ ನಿತ್ಯ ನಿಸರ್ಗಕೆ
ಕೋಗಿಲೆ ಗುಂಪಲಿ ನನ ಧ್ವನಿಗೂಡಿಸಿ
ಹಾಡುವೆ ರಾಗತಾಳವು ಇನ್ನೇತಕೆ               (೩)

ಉಲ್ಲಾಸವ ಎರವಲು ಕೊಡೆಯಾ
ಇಬ್ಬನಿಯೇ ನಾ ನಿನಗೆ ಆಭಾರಿ
ನನ್ನೊಡನೆ ಒಪ್ಪಂದ ಮಾಡುವೆಯಾ
ನಾನುಳಿಯುವೆ ಎಂದೆಂದಿಗೂ ಸಂಚಾರಿ    (೪) #ಕನ್ನಡ #ಕನ್ನಡಕವನ #ಕವಿಹೖದಯ #ಇಬ್ಬನಿ #ಮುಂಜಾನೆ #kannadapoem #foggymorning #mycomposition
ಇಬ್ಬನಿ🌨

ಗಾಳಿಯೊಳಗೆ ನೀರೊ, ನೀರೊಳಗೆ ಗಾಳಿಯೊ
ಮುಂಜಾನೆಯ ನೋಟಕೆ ಹಾಕಿದ ಪರದೆ
ಅದಾವ ಜಾದೂಗಾರನ ಸೆಲೆಯೊ,ಕಲೆಯೊ
ಹೊಂಗಿರಣದ ಸುಳಿವಿಲ್ಲ ಸಂಚಾರ ಸಾಗಿದೆ (೧)

ಮೈ ಕೊರೆಯೊ ತಂಪು ಮೈಗೆ ತಾಗುತಿರಲು
ಜಡನಿದ್ದೆಗು ಕುತೂಹಲಕು ಜಗಳಾಟ
ಪರದೆಯೊಳು ನುಸುಳಿ ಮುನ್ನುಗ್ಗುತಿರಲು
ನಿಸರ್ಗದ ಅರಮನೆಯದೆ ಕಣ್ಣೋಟ         (೨)

ಮರ ಹೂಬಳ್ಳಿಗೆ ಸೊಗಸಾಗಿ ಆವರಿಸಿ
ಬಲೆ ಬೀಸುತಿಹೆ ನಿತ್ಯ ನಿಸರ್ಗಕೆ
ಕೋಗಿಲೆ ಗುಂಪಲಿ ನನ ಧ್ವನಿಗೂಡಿಸಿ
ಹಾಡುವೆ ರಾಗತಾಳವು ಇನ್ನೇತಕೆ               (೩)

ಉಲ್ಲಾಸವ ಎರವಲು ಕೊಡೆಯಾ
ಇಬ್ಬನಿಯೇ ನಾ ನಿನಗೆ ಆಭಾರಿ
ನನ್ನೊಡನೆ ಒಪ್ಪಂದ ಮಾಡುವೆಯಾ
ನಾನುಳಿಯುವೆ ಎಂದೆಂದಿಗೂ ಸಂಚಾರಿ    (೪) #ಕನ್ನಡ #ಕನ್ನಡಕವನ #ಕವಿಹೖದಯ #ಇಬ್ಬನಿ #ಮುಂಜಾನೆ #kannadapoem #foggymorning #mycomposition