Nojoto: Largest Storytelling Platform

C2-E1 ಒಂದು ವರ್ಷದ ಹಿಂದೆ ನಡೆಯುವ ಕಥೆ. ಆಫೀಸ್ಗೆ ಬಂದು

C2-E1

ಒಂದು ವರ್ಷದ ಹಿಂದೆ ನಡೆಯುವ ಕಥೆ. 
ಆಫೀಸ್ಗೆ ಬಂದು ಅರ್ಧ ಗಂಟೆ ಆಗಿತ್ತು, ಇನ್ನೂ ಯಾರು ಬಂದಿರಲಿಲ್ಲ, ಮಾತಾಡದೆ ನನಗೆ ಇರಕ್ಕಾಗಲ್ಲ. ಸುಮ್ಮನೆ ಕೂತ್ಕೊಂಡು ರೆಸ್ಟ್ ಲಾಂಜ್ನಲ್ಲಿ ಟೀವೀ ನೋಡ್ತಇದ್ದೆ, ಅಷ್ಟರಲ್ಲೇ ಒಂದು ಶಬ್ದ ಕೇಳಿಸಿತು, "ರೂಮ್ ಕ್ಲೀನ್ ಮಾಡ್ಬೇಕು ಸ್ವಾಮಿ, ವಸಿ ಆಚೆ ಕೂತ್ಕ್ಯಳಿ." ತಿರುಗಿ ನೋಡಿದರೆ ಒಬ್ಬ 55-60 ವರ್ಷದ ಸಾಧಾರಣ ಮನುಷ್ಯ. "ಎನ್ ಅಂಕಲ್, ಆಫೀಸ್ ಟೈಂನಲ್ಲಿ ಯಾಕ ಕ್ಲೀನ್ ಮಾಡ್ತೀರಾ? ಬೆಳಗ್ಗೆ ಬೇಗ ಬರಬಹುದಲ್ಲ," ಅಂತ ಕೇಳ್ದೆ. "ಬೆಳಗ್ಗೆ ಕ್ಯಾಂಟೀನ್ ಕ್ಲೀನ್ ಮಾಡ್ತೀವಿ, ಮಧ್ಯಾನ ಕ್ಯಾಬಿನ್ ಕ್ಲೀನ್ ಮಾಡ್ತೀವಿ" ಅಂತ ಹೇಳಿದ. ಆಮೇಲೆ ನಾನು ನನ್ನ ಕ್ಯಾಬಿನ್ಗೆ ಮರಳಿದೆ. ಸ್ವಲ್ಪ ಸಮಯದ ನಂತರ ಬಂದು ಅವನು ಕೇಳಿದ, "ನೀವು ಕನ್ನಡದವರ ಬುದ್ಧಿ?" ಕೇಳಿ ಆಶ್ಚರ್ಯವೂ ಆಯಿತು, ದುಖ್ಖವು ಆಯಿತು. ಹೌದು ಅಂತ ಉತ್ತರಿಸಿದೆ. "ಈ ಆಫೀಸ್ನಲ್ಲಿ ಕನ್ನಡ ಮಾತಾಡಿದ್ದೆ ಕೇಳೋದು ಅಪರೂಪ ದಣಿ, ಬೆಂಗಳೂರು ಕರ್ನಾಟಕದಲ್ಲೇ ಇದೀಯ ಅಂತ ಕೆಲವಮ್ಮೆ ಅನುಮಾನ ಬರುತ್ತೆ," ಅಂತ ಅಂದ. "ನಿಮ್ಮ ಹೆಸರೇನು ಅಂಕಲ್" ಅಂತ ನಾನು ಕೇಳಿದೆ, ಅದಕ್ಕೆ ಅವನು ತುಂಬಾ ವಿಸ್ತೃತವಾದ ಇಂಟ್ರೊ ಕೊಟ್ಟ. "ನನ್ನ ಹೆಸರು ಚನ್ನಯ್ಯ ಅಂತ ಸ್ವಾಮಿ, ನಮ್ದು ಮಂಡ್ಯದ ಹತ್ರ ಹೊಸಹಳ್ಳಿ ಅಂತ ಊರು. ನಾವು ಕುರುಬರು, ಎರಡು ಎಕ್ರೆ ಜಮೀನ್ ಇದೆ, ಆದ್ರೆ ನೀರಿಲ್ಲ, ಸಾಲಗಾರರ ಕಾಟ ತಾಳಲಾರದೆ ಇಲ್ಲಿ ಹೊಪಸೀಕಿಂಗ್ ಕೆಲಸ ಮಾಡ್ತಾ ಇದ್ದೀವಿ, ಅಲ್ಲಿ ದೂರ ನಿಂತವಳಲ್ಲ ಅವಳು ನಮ್ ಹೆಣ್ಣರು. ಮಗಳು ಮಾಲ್ ನಲ್ಲಿ ಹೋಪಸೀಕಿಂಗ್ ಕೆಲಸ ಮಾಡ್ತಾಳೆ." ಅವನು ತಿಳಿಯದೆ ಹೌಸ್ ಕೀಪಿಂಗನ್ನ ಹೋಪಸೀಕಿಂಗ್ ಅಂದ, ಕಣ್ಣಲ್ಲಿ ಕಣ್ಣೀರು, ಮನಸಲ್ಲಿ ಗೌರವ ಉಕ್ಕಿ ಬಂತು.  "ಚನ್ನ-ಪಟ್ಟಣ"
ಅಧ್ಯಾಯ:2-ಭಾಗ:1
ಚನ್ನಯ್ಯ
"Channa-Pattana"
Chapter:2-Part1
Channayya
ಒಬ್ಬ ರೈತ ಹಾಗೂ ಒಬ್ಬ ಎಂಜಿನೀರ್ ನ ವ್ಯಥೆಯ ಕಥೆ. ದಾರಿಗಳು ಬೇರೆ ಬೇರೆ ಆಗಿದ್ದರೂ ಕೂಡ, ಇಬ್ಬರ ಗುರಿ ಒಂದೇ, ಅದೇ ಜೀವನ.  #Series #Fiction #Kannada #YQBaba #YQJogi #YQKannada #Farmer  #YQFilms

anekanthb6557

Anekanth B

New Creator