ಮುಂಜಾನೆಯ ಮುಸುಕು. ಕಡಲು ಮೊದಲಿನಂತೆ ಶಾಂತವಾಗಿತ್ತು. ಆಕೆ ಎಂದಿನಂತೆ ತನ್ನವನ ಬರುವಿಕೆಯ ನಿರೀಕ್ಷೆಯಲ್ಲಿ ಕಡಲತಡಿಯಲ್ಲಿ ನಿಂತು ದಿಗಂತವನ್ನೇ ದಿಟ್ಟಿಸುತ್ತಿದ್ದಳು. ಆಕೆಯ ಭುಜದಲ್ಲಿ ಮಗುವು ನಿದ್ರಿಸುತ್ತಿತ್ತು. ಆಗ ಕಂಡಳವಳು! ಕಡಲತಡಿಯಲ್ಲಿ ನೌಕೆಯೊಂದರ ಅವಶೇಷಗಳು. ಅದರತ್ತ ಬೆವರುತ್ತಾ ಭಯದ ಹೆಜ್ಜೆಯಿಕ್ಕಿದಳು. ಹೌದು! ಅದು ಅವನೇ! ಓಡಿಹೋಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವನ ತಲೆಯನ್ನು ತನ್ನ ಮಡಿಲಲ್ಲಿರಿಸಿ ಎಚ್ಚರಿಸಲು ಪ್ರಯತ್ನಿಸಿದಳು. ನಿಧಾನಕ್ಕೆ ಕಣ್ಣು ತೆರೆದನಾತ. ಆಗ ಎಚ್ಚೆತ್ತ ಮಗು ಅವನನ್ನು ಕಂಡು ತನ್ನ ಬೊಚ್ಚು ಬಾಯಿ ಬಿಟ್ಟು ನಗುತ್ತಿತ್ತು. ಸಂತಸದಲಿ ಕಡಲ ತೆರೆಗಳು ದಡವನ್ನಪ್ಪುತ್ತಿದ್ದವು. ಮುಂಜಾನೆಯ ಆಗಸದಲಿ ಇದಕ್ಕೆ ಸಾಕ್ಷಿಯೆಂಬಂತೆ ಹೊಳೆಯುತ್ತಿತ್ತು ಧ್ರುವ ತಾರೆ! #ಧ್ರುವತಾರೆ-೪ #ಸಣ್ಣಕಥೆ #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada #ಕನ್ನಡ_ಪ್ರೀತಿ