ತೊರೆಯಬಾರದೇ ನನಗಾಗಿ ಮುನಿಸು ನಗು ಮೊಗವು ಎಷ್ಟೊಂದು ಸೊಗಸು ಪ್ರತಿ ರಾತ್ರಿಯು ನಿನ್ನದೊಂದೇ ಕನಸು ||1|| ನಿನ್ನ ಪಡೆಯಲು ಮಾಡುತ್ತಿರುವೆ ತಪಸ್ಸು ಪ್ರೇಮ ಸತ್ರದಲ್ಲರ್ಪಣೆ ಕಾಳಜಿಯ ಹವಿಸ್ಸು ಪ್ರಸನ್ನಳಾಗಿ ಒಪ್ಪಿಗೆಯ ವರವ ಕರುಣಿಸು ತನುಮನದಲ್ಲಿ ಪ್ರಜ್ವಲಿಸುವುದು ವರ್ಚಸ್ಸು ||2|| ಮನೋಮಂದಿರದಲ್ಲಿ ಶಾಶ್ವತವಾಗಿ ನೆಲೆಸು ಒಂಟಿ ಜೀವಕ್ಕೆ ಒಲವಾಮೃತ ಅನುಗ್ರಹಿಸು ಜೊತೆಯಿದ್ದರೇ ಬಾಳಿಗೆ ಹೊಸ ಹುಮ್ಮಸ್ಸು ಕಾರ್ಯಗಳಿಗೆ ದೊರಕುವುದಧಿಕ ಓಜಸ್ಸು||3|| ನೀನೇ ನನಗೆಲ್ಲ. #ಮನಸ್ಸು #yqjogi #yqkannada #collab #amargude #collabwithjogi #YourQuoteAndMine Collaborating with YourQuote Jogi