Nojoto: Largest Storytelling Platform

ತರಹೀ ಗಝಲ್: ನಯನ ಅವರ ಊಲಾ ಮಿಸ್ರ *********************

ತರಹೀ ಗಝಲ್: ನಯನ ಅವರ ಊಲಾ ಮಿಸ್ರ
*******************************
ಹೃದಯದೂರಲಿ ನೆನಪುಗಳ ನಂದಾದೀಪ ನಿಡುಸುಯ್ದ ಉಸಿರಿಗೆ ಯಾರು ಹೊಣೆ
ತೆರೆದು ತೋರಿಸಿದ ನಿಷ್ಕಲ್ಮಶ ಪ್ರೀತಿಯ ಆಳವನರಿಯದ ನಿಲುವಿಗೆ ಯಾರು ಹೊಣೆ

ಕಾಲ ಗರ್ಭದಲ್ಲಿ ಲೀನವಾಯಿತು ನೀನೆದೆಯೊಳಗೆ ಎರಕ ಹೊಯ್ದ ಪ್ರೀತಿಯ ಎಸಕ
ಕನಿಕರವಿಲ್ಲದೆ ಮನದ ಕದವ ಮುಚ್ಚಲು ಅಸುನೀಗಿದ ಭಾವಗಳಿಗೆ ಯಾರು ಹೊಣೆ

ಮುತ್ತಾಗಿದೆ ಸ್ವಾತಿ ಮಳೆಯ ಹನಿಯಂತೆ ನೀ ಕಿವಿಯಲ್ಲಿ ಉಲಿದ ಒಲವಿನ ಪಲ್ಲವಿ
ಅಂತರಾಳದಲ್ಲಿ ಭೋರ್ಗರೆಯುತ್ತಿರುವ ನನಸಾಗದ ಕನಸುಗಳಿಗೆ ಯಾರು ಹೊಣೆ

ಚಿತ್ತದಲ್ಲಿ ಚಿರಂತನವಾಗಿದೆ ಅಸುನೀಗಿದ ಸುಮಧುರ ಕ್ಷಣಗಳ ಚಿರಸ್ಥಾಯಿ ರೂಪ
ಭರವಸೆಯನ್ನು ಬರಿದಾಗಿಸಿ ಚಿತೆಯೇರಿಸುವ ಚಿಂತೆಯ ನೋವಿಗೆ ಯಾರು ಹೊಣೆ

ಅನುಮಾನ ಅವಮಾನಗಳ ಕೊಂಕು ನುಡಿಗಳೇ ವಿಜಯ ಶಿಖರದ ಮೆಟ್ಟಿಲುಗಳು
ಹಣೆಬರಹವನ್ನು ಹೊಣೆಯಾಗಿಸಿ ಸಾಧಿಸದೆ ಮುಗಿಸಿದ ಬದುಕಿಗೆ ಯಾರು ಹೊಣೆ ಎಸಕ : ಕಾಂತಿ, ಸೊಬಗು, ವೈಭವ, ಪ್ರತಾಪ

ತರಹೀ ಎನ್ನುವ ಶೀರ್ಷಿಕೆಯನ್ನೇನೋ ಕೊಟ್ಟಿದ್ದೇನೆ. ಆದ್ರೆ ಮೂಲ ಬರಹದ ತರಹ ಇದೆ ಎನ್ನುವ ಖಾತರಿಯಿಲ್ಲ.

ಆತ್ಮೀಯತೆಯಿದ್ದಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮನ್ನಿಸುವ ಹೃದಯ ವೈಶಾಲ್ಯತೆ ಕೂಡ ಇರುತ್ತೆ. ಅದೇ ಧೈರ್ಯದ ಮೇಲೆ ನಯನ ಭಟ್ ಜಿ.ಎಸ್❣️ ಅವರ ಗಝಲ್ ಗೆ ತರಹೀ ಬರೆಯುವ ಸಾಹಸಕ್ಕೆ ಕೈ ಹಾಕಿದ್ದು.

ಸಮಯದ ಅಭಾವದಿಂದ ನಿಮ್ಮೆಲ್ಲರ ಬರಹಗಳನ್ನು ಓದಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ಕ್ಷಮೆಯಿರಲಿ. ನಿಮ್ಮೆಲ್ಲರ ಪರಿಶ್ರಮಕ್ಕೆ, ಕಲಾ ಸೇವೆಗೆ ನನ್ನ ಮೆಚ್ಚುಗೆ, ಹಾರೈಕೆಗಳು ಸದಾ ಇರುತ್ತವೆ.