Nojoto: Largest Storytelling Platform

ನೆನ್ನೆಗಳ ನೆನೆದು ಕೊರಗುವೇಕೆ ಮನವೇ ನೆನೆಯದವರ ನೆನಪಲ್ಲಿ

ನೆನ್ನೆಗಳ ನೆನೆದು 
ಕೊರಗುವೇಕೆ ಮನವೇ

ನೆನೆಯದವರ ನೆನಪಲ್ಲಿ 
ನರಳುವೇಕೆ ಮನವೇ 

ನಿಂದಿಸಿದವರ ನೆನೆದು 
ಮರುಗುವೇಕೆ ಮನವೇ 

ನೆನ್ನೆಗಳು ನಿನ್ನದಲ್ಲ 
ನಾಳೆಗಳು ನಿಜವಲ್ಲ 

ಇಂದಿಗಿಂದಿಗೆ ;

ಬದುಕಿಬಿಡು ಮನವೇ
ಬದುಕಿದೋ ಶಾಶ್ವತವಲ್ಲ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
  #adventure