ಹೊಳೆಯುವ ಕಂಗಳು ಒಲವಿನ ಆಗರ, ಸುಗುಣ, ಸುನಡತೆಯ ಸಾಗರ! ಅವಳೊಂದಿಗೆ ಕಳೆಯುವ ಕ್ಷಣಗಳು ಮಧುರ, ಅವಳು ಜೊತೆಗಿದ್ದರೆ ಬದುಕೇ ಸುಂದರ! ಅವಳ ಸ್ನೇಹ ಸಂಪಿಗೆಯ ಕಂಪು, ಅವಳ ಒಡನಾಟ ಬೆಳದಿಂಗಳಿನ ತಂಪು! ಸವಿಯಾದ ನುಡಿ ಸಂಗೀತದಂತೆ ಇಂಪು, ಒಮ್ಮೆ ತಲೆಗೇರಿದರೆ ಬಿಡದು ಅವಳ ಪ್ರೀತಿಯ ಜೊಂಪು! ದೇವಲೋಕದಿಂದ ಇಳಿದಳೇನೋ ಚೆಲುವೆ, ಮಂದಸ್ಮಿತೆ ಅವಳು, ನಗುವೇ ಅವಳೊಡವೆ! ಮನಗಳ ನಡುವೆ ಸ್ನೇಹ ಬೆಸೆಯುವ ಸೇತುವೆ , ಇಂತಹ ಸೃಷ್ಟಿ ಜಗದಿ ಅಪರೂಪವೆ! ಮಮತಾಮಯಿ, ವಾತ್ಸಲ್ಯ ತುಂಬಿದ ದೇವತೆ, ನೀ, ತುಂತುರಲ್ಲಿ ಮಿಂದ ಹೃದಯ ಸಂತಸದಿ ಹಾಡುವ ಕವಿತೆ! This beautiful bg reminded me of you only. Sumana heroine this is for you. 😜❤️❤️ Bear with this quick one tho 😁 Bg credit- Rest Zone