ಭಾಮಿನೀ ಷಟ್ಪದಿ: ಮೊದಲ ಪ್ರಯತ್ನ °°°°°°°°°°°°°°°°°°°°°°°°°°°°°° ಒಲವು ತುಂಬಿದ ಕಣ್ಣಿನಿಂದಲಿ ಚೆಲುವು ಸೂಸುತ ಸೆಳೆದು ನನ್ನನು ಗೆಲುವು ತಂದಳು ಜೊತೆಗೆ ನಿಲ್ಲುತ ಬಾಳ ಪಯಣದಲಿ | ಸಲುಗೆಯಿಂದಲಿ ಮನವ ಗೆದ್ದಳು ಬಲವನಿತ್ತಳು ಬಳಸಿ ತೋಳಲಿ ಛಲದಿ ನಡೆವ ಪರಿಯನರುಹಿದಳು ಜಗದ ಸಂತೆಯಲಿ || ದಿನವು ಕಾಡುವ ಸೊಬಗು ಅವಳದು ಜನುಮ ಜನುಮದ ಬಂಧ ನಮ್ಮದು ತನುವಿನೊಳಗಿನ ಜೀವವಾದಳು ಗೆಳತಿಯಾಗುತಲಿ | ಮನವು ಮೆಚ್ಚಿದ ಮಡದಿಯಾದಳು ಮನೆಯ ಬೆಳಗುವ ದೀಪವಾದಳು ಕೊನೆಯ ತನಕ ಇರುವೆನು ಎಂದಳು ಬದುಕ ಯಾತ್ರೆಯಲಿ || ಭಾಮಿನೀ ಷಟ್ಪದಿ: ಮೊದಲ ಪ್ರಯತ್ನ ಷಟ್ಪದಿಯ ಈ ಪ್ರಕಾರಕ್ಕೆ ಭಾಮಿನೀ ಷಟ್ಪದಿ ಎಂದು ಕರೆಯುತ್ತಾರೆ. ಷಟ್ಪದಿಯ ಆರು ಪಾದಗಳಲ್ಲಿ ಕೆಳಗಿನಂತೆ ಗಣವಿಂಗಡನೆಯನ್ನು ಮಾಡಲಾಗುತ್ತದೆ. ೩|೪|೩|೪ ೩|೪|೩|೪ ೩|೪|೩|೪|೩|೪|- ೩|೪|೩|೪