ದೂರದಿಂದಲೇ ದರ್ಶನ ನೀಡುತ್ತಿತ್ತು ನಮ್ಮೂರಿನ ಶೆಟ್ಟರ ಮನೆಯ ಕನ್ನಡ ದೂರದರ್ಶನ ಟಿ.ವಿ ವಾರಕ್ಕೊಮ್ಮೆ ಚಲನಚಿತ್ರ ಬರುತ್ತಿತ್ತು. ಭಾನುವಾರ ಬಂತೆಂದರೆ ನಮಗೆಲ್ಲ ಓಣಿಯ ತುಂಬೆಲ್ಲಾ ಹಬ್ಬದ ವಾತಾವರಣ ಸಾಯಂಕಾಲ ೪ ಗಂಟೆಯಾದರೆ ಸಾಕು ಊರ ಮಂದಿಯೆಲ್ಲ ಶೆಟ್ಟರ ಮನಿ ಕಟ್ಟೆಗೆ ಸೇರಿ ಕರೆಂಟ ಬರೋದನ್ನೇ ಕಾಯುತ್ತಿದ್ದರು ಸಿನಿಮಾ ಯಾವುದೇ ಇರಲಿ ಖುಷಿಯಿಂದ ನೋಡಿ ಸಂತಸ ಪಡುತ್ತಿದ್ದೇವು. ಆಗೆಲ್ಲ black and Whit TV ಯದೇ ಸದ್ದು ಶುಕ್ರವಾರಕ್ಕೊಮ್ಮೆ ಚಿತ್ರ ಮಂಜರಿ ಅದೇ ನಮಗೆ ದೊಡ್ಡ ಖುಷಿಯ ವಿಚಾರವಾಗಿತ್ತು. ವಾಸಿಂಗ ಪೌಡರ್ ನಿರ್ಮಾ ಜಾಹಿರಾತು ಪೇಮಸ್ ಆಗಿತ್ತು. ರವಿವಾರ ಬೆಳಿಗ್ಗೆ ಶ್ರೀಕೃಷ್ಣ ಧಾರಾವಾಹಿ ರಾತ್ರಿಯಲ್ಲಿ ಜೈ ಹನುಮಾನ್ ಜೈಮಾತಾಕಿ ಇವುಗಳಲ್ಲೇ ನಮ್ಮ ಬಾಲ್ಯ ಜೀವನ ಕಳೆಯಿತು. ಇಷ್ಟೆಲ್ಲಾ ನೋಡೋಕೆ ಸ್ವಾಮಿಗಳ ಶ್ರೀಶೈಲ ಅಂತ ಇದ್ದ ಇವನು ಬಾಗಿಲು ಬಳಿ ನಿಂತ ಎಲ್ರು ಹತ್ರ ೫ ಪೈಸೆ ಇಸ್ಗೊತಿದ್ದ.. ಚಿಗುರು ಧಾರಾವಾಹಿ ನನ್ನ ಪೆವರೆಟ್ ಆಗಿತ್ತು. ಅಪ್ಪನ ಹತ್ರ ಅತ್ತು ದುಡ್ಡು ಇಸ್ಗೊಂಡ ಇದ್ನ ತಪ್ಪದೇ ನೋಡ್ತಿದ್ದೆ..ಇವಾಗೆಲ್ಲ ಬರೀ ನೆನಪು ಮಾತ್ರ. ನನ್ನ ಬಾಲ್ಯ #yqjogi#ykannada#ramesh h