Nojoto: Largest Storytelling Platform

ನೈತಿಕತೆ ಕಲಿಸದ ಶಿಕ್ಷಣ ನೈತಿಕತೆ ಇಲ್ಲದೆ ಗಳಿಸಿದ ಆದಾಯ ರಾ

ನೈತಿಕತೆ ಕಲಿಸದ ಶಿಕ್ಷಣ
ನೈತಿಕತೆ ಇಲ್ಲದೆ ಗಳಿಸಿದ ಆದಾಯ
ರಾಷ್ಟ್ರಕ್ಕೆ ಎಂದೆಂದೂ ಮಾರಕವೇ...
Read in CAPTION... ಇಂದು ಕರ್ನಾಟಕ ಸರ್ಕಾರ Casino ಎಂಬ ಜೂಜುಕೋರ ದಂದೆಕೋರ ಆಟವನ್ನು Tourism Development or Promotion ಎಂಬ ಆಶಯದಡಿಯಲ್ಲಿ ಕರಾವಳಿ ತೀರದ ಪ್ರದೇಶಗಳಲ್ಲಿ ತರಲು ಪ್ರಸ್ತಾವನೆಯನ್ನು ಸಲ್ಲಿಸಿದೆ. ಇದಕ್ಕೆ ಸಂಬಂದಿಸಿದಂತೆ ವಿವಿಧ ಮಾಧ್ಯಮಗಳು ವಿವಿಧ ವರ್ಗದ ಜನರು ತಮ್ಮ ತಮ್ಮದೇಯಾದ ರೀತಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆ. 
ಮಹಾತ್ಮ ಗಾಂಧಿಯವರ ಹೇಳಿಕೆಯಂತೆ ಮಾನವನ ನೈತಿಕ ಮೌಲ್ಯಗಳನ್ನು ರೂಪಿಸದ ಶಿಕ್ಷಣ ಅದು ಶಿಕ್ಷಣವೇ ಅಲ್ಲ ಎಂದಂತೆ ರಾಜ್ಯ ಸರ್ಕಾರ ಕೇವಲ ಆದಾಯದ ಬೊಕ್ಕಸ ತುಂಬಿಸಿಕೊಳ್ಳಲು ಇಂತಹ ಅನೈತಿಕ ಮಾರ್ಗಗಳನ್ನು ಅನುಸರಿಸುತ್ತಿರುವುದು ಖೇದಕರವಾದುದು. ಪ್ರವಾಸೋದ್ಯಮದ ಅಭಿವೃದ್ಧಿ ಕೇವಲ ಕರಾವಳಿ ತೀರದ ಪ್ರದೇಶದಕ್ಕಷ್ಟೆ ಸೀಮಿತವಾದುದೇನಲ್ಲ. ಕರಾವಳಿ ಪ್ರದೇಶಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಮಾಡಬೇಕಾದರೆ ಅದು ಕೇವಲ CASINO ಆಟದಿಂದ ಮಾಡಬೇಕೆಂಬುದು ಮೂರ್ಖತನದ ಪರಮಾವಧಿ ಎಂದು ಹೇಳುವುದರಲ್ಲಿ ಯಾವುದೇ ಉದ್ದಟತನವಲ್ಲ. ಕರಾವಳಿ ತೀರದ ಪ್ರದೇಶಗಳಲ್ಲಿ ಕಂಡುಬರುವ ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಸಹಾಯಕವಾಗುವಂತಹ ಯೋಜನೆಗಳನ್ನು ಹಮ್ಮಿಕೊಂಡರೆ ಆ ಭಾಗದ ಜನರು ನೆಮ್ಮದಿಯಿಂದ ಬದುಕಬಲ್ಲರು. ಆದರೆ ಈ CASINO ಆಟದಿಂದ ಕರಾವಳಿ ತೀರದ ಪ್ರದೇಶಗಳಲ್ಲಿ ಹೆಚ್ಚು ಆದಾಯ ಬಂದರೂ ಆ ಭಾಗದ ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಲ್ಲಿ ಅನೈತಿಕ ಅನಾಚಾರ ಸಮಾಜವೇ ತಲೆತಗ್ಗಿಸುವಂತಹ ಚಟುವಟಿಕೆಗಳ ತಾಣವಾಗುವುದರಲ್ಲಿ ಸಂಶಯವಿಲ್ಲ. ಇದು ಮುಂದುವರೆದ ಅಲ್ಲಿನ ಜನರ ಜೀವನಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ಇದಕ್ಕೆ ಒಂದು ತಾಜಾ ಉದಾಹರಣೆಗೆ ಹಿಂದೆ ಕೆಲವೇ ವರ್ಷಗಳಲ್ಲಿ ಒಂದಂಕಿ ಲಾಟರಿ ಆಟದಿಂದ ಎಷ್ಟೊ ಮುಗ್ದ ಜೀವಗಳು ತಮ್ಮ ಮನೆ‌ ಜಮೀನುಗಳನ್ನು ಕಳೆದುಕೊಂಡುದಲ್ಲದೆ ತಮ್ಮ ಜೀವವನ್ನು ಒತ್ತೆಯಿಟ್ಟಾಗ ಅವರನ್ನು ನಂಬಿಕೊಂಡಿದ್ದ ಎಷ್ಟೋ ಕುಟುಂಬಗಳು ಬೀದಿಪಾಲಾದವು.‌ 
CASINO ಆಟ ಆಡಲು ಬೇರೆ ಬೇರೆ ರಾಜ್ಯಗಳಿಗೆ / ರಾಷ್ಟ್ರಗಳಿಗೆ ಆಡಲೂ ಜನರು ಹೊರಹೋಗಿ ತಮ್ಮ
ಹಣವನ್ನು ದುಂದುವೆಚ್ಚವನ್ನು ಮಾಡುತ್ತಾರೆ ಆದರಿಂದ ನಮ್ಮ ರಾಜ್ಯದ ಆದಾಯವು ಬೇರೆ ರಾಜ್ಯ / ರಾಷ್ಟ್ರಗಳಿಗೆ ವರ್ಗಾವಣೆಯಾಗುತ್ತಿದೆ‌. ಅದಕ್ಕೆ ಬದಲಾಗಿ ನಮ್ಮ ರಾಜ್ಯದ ವಿವಿಧ ಪ್ರದೇಶದಲ್ಲಿ CASINO ಆಟವನ್ನು ಜಾರಿಗೆ ತಂದರೆ ನಮ್ಮ ಜನರ ಆದಾಯದ ಜೊತೆಗೆ ಇತರ ಜನರ ದುಂದುವೆಚ್ಚವು ನಮ್ಮ ರಾಜ್ಯದ ಆದಾಯದ ಬೊಕ್ಕಸ ಸೇರುತ್ತದೆ ಎಂಬುದು ಪ್ರಸ್ತಾವನೆ ಸಲ್ಲಿಸಿರುವ ಮಂತ್ರಿಯ ಆಂಬೋಣ. ಆದರೆ ಇದು ಒಪ್ಪುವಂತದಲ್ಲ.‌ ಬೇರೆ ಬೇರೆ ರಾಜ್ಯ, ರಾಷ್ಟ್ರಗಳಿಗೆ ಹೋಗಿ CASINO ಆಡಿ ಬರುವ ಜನರು ಕಪ್ಪು ಹಣವನ್ನು ಹೆಥೇಚ್ಚವಾಗಿ ಹೊಂದಿರುವಂತಹ ಜನಗಳು. ಅವರ ಹೋಲೈಕೆಗಾಗಿ ಸುಂದರ ಕರಾವಳಿ ತೀರದ‌  ಪ್ರದೇಶಗಳಲ್ಲಿ ಇಂತಹ ಅನೈತಿಕ ಚಟುವಟಿಕೆಗಳ ತಾಣವನ್ನಾಗಿ ಮಾಡಿ ಹಾಳು ಮಾಡಲು ಹೊರಟಿರುವುದು ಹೇಯಕರವಾದುದು. 
ಸರ್ಕಾರದ ಉದ್ದೇಶ ಕೇವಲ ಆದಾಯ ಗಳಿಸುವುದೊಂದೆ ಗುರಿಯಲ್ಲ.‌ಆ ಪ್ರದೇಶದ ಜನರ ಸರ್ವೋತೋಮುಖ ಅಭಿವೃದ್ಧಿಗೆ ಅವಶ್ಯಕವಾದಂತಹ ಯೋಜನೆಗಳನ್ನು ರೂಪಿಸುವುದು. ಸಮಾಜದ ವಿವಿಧ ವರ್ಗದ ಜನರ ಆಸೆ‌ ಆಶೋತ್ತರಗಳಿಗೆ ಸ್ಪಂದಿಸಿ‌ ಅವರನ್ನು‌ ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕಾಗಿರುವುದು ರಾಜ್ಯದ ಆದ್ಯ ಕರ್ತವ್ಯ. ಅದನ್ನು ಮೂಲೆಗುಂಪು ಮಾಡಿ ಕೇವಲ ರಾಜ್ಯದ ಆದಾಯದ ದೃಷ್ಟಿಯಿಂದ ಸಮಾಜದ ವಿವಿಧ ವರ್ಗದ ಜನರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವಂತ ಚಟುವಟಿಕೆಗಳನ್ನು ಜಾರಿಗೆ ತರಲು ಪ್ರಯತ್ನಿಸುವುದು ಖಂಡನೀಯವಾದುದು.‌ಇನ್ನಾದರೂ ಸರ್ಕಾರ ಮುಂದಾಲೋಚಿಸಿ ಅದರ ಆಗು ಹೋಗುಗಳ ಬಗ್ಗೆ ವಿವಿಧ ಜನರ‌ ಅಭಿಪ್ರಾಯ ಪಡೆದು ಅದನ್ನು ನಿರ್ಬಂದಿಸದೆ ಹೋದರೆ ಮುಂದಿನ‌ ದಿನಗಳಲ್ಲಿ ಕರಾವಳಿ ತೀರದ ಪ್ರದೇಶಗಳಲ್ಲಿ ನಡೆಯುವ ಎಲ್ಲ ರೀತಿಯ‌ ಅನಾಹುತಗಳಿಗೂ ಚಟುವಟಿಕೆಗಳಿಗೂ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ಇರಲಿರಲಿ ಎಚ್ಚರ..
#yqkannada
#yqkannadaquotes
#yqquote

divakard3020

DIVAKAR D

New Creator