ಸೀಗೀಯ ಹಚಕೊಂಡು ಸ್ನಾನವ ಮಾಡ್ಯಾಳ ಸೀರಿಯ ತೊಟಕೊಂಡು ಸೆರಗಾವ ಹೊಚಕೊಂಡು ಸಾಗಿ ಬಂದಾಳ ನೋಡ ನನ ಗೆಳತಿ..! ಸೋಗೀನ ಚಂದ್ರಾಮ ಸೊಬಗೀಲೆ ಬಂದಾನ ಸೇವಂತಿಗೆ ತಂದಾನ ಸಾವಿರದಾರತಿ ಮಾಡಿ ಸುಖವಾಗಿ ಬಾಳೆಂದು ಹರಸ್ಯಾನ ನೋಡ ನನ ಗೆಳತೀಗಿ..!! ಸಂಸ್ಕೃತಿಯ ನಾರಿ ನನ್ನ ಗೆಳತಿ... ಆಕಾಶ ದೀಪ ✨ #ಕನ್ನಡಕವಿತೆ #ಕನ್ನಡಕವನಗಳು #yqkannadapoems #yqkannadakavite #yqkannadajogi