Nojoto: Largest Storytelling Platform

ನಿಜ ಜೀವನದ ಹಾಸ್ಯ ಕತೆ (ಅಡಕದಲ್ಲಿ ಓದಿ) ನಮ್ಮೂರಿಗೆ ರಜೆಗೆ

ನಿಜ ಜೀವನದ ಹಾಸ್ಯ ಕತೆ
(ಅಡಕದಲ್ಲಿ ಓದಿ) ನಮ್ಮೂರಿಗೆ ರಜೆಗೆಂದು‌ ಹೋಗಿದ್ದೆ.  ಆಗ ಬಹುಶಃ ನಾನು ಐದು ಅಥವಾ ಆರನೇ ತರಗತಿಯಲ್ಲಿ ಓದುತ್ತಿದ್ದೆ ಅನ್ನಿಸುತ್ತೆ.  ನಮ್ಮೂರು ಎಂದರೆ ಅಂತ ದೊಡ್ಡ ಊರೇನಲ್ಲ.  ಸುಮಾರು ಒಂದೈವತ್ತು ಅರವತ್ತು ಮನೆಗಳ ಸಣ್ಣ‌ಹಳ್ಳಿ.  ಆದರೆ ದೇಶದ ರಾಜಕೀಯವೆಲ್ಲಾ ಅಲ್ಲಿ ಚರ್ಚಿತವಾಗುತ್ತಿತ್ತು.  ಜನ ಅನಕ್ಷರಸ್ಥರಾದರೂ ದಿಲ್ಲಿಯ ವಿಷಯಗಳನ್ನೂ ನಿರರ್ಗಳವಾಗಿ ಮಾತನಾಡುತ್ತಿದ್ದರು.  ಆ ಹಳ್ಳಿಗೆ ಆಗ ವಿದ್ಯುತ್ ಸಂಪರ್ಕವಿರಲಿಲ್ಲ.  ಪೆಟ್ರೊಮ್ಯಾಕ್ಸ್ ಇದ್ದವನೇ ಶ್ರೀಮಂತ.  ಎಲ್ಲರ ಮನೆಗಳಲ್ಲಿಯೂ ಸೀಮೆಎಣ್ಣೆ ಬುಡ್ಡಿ.  ಆ ಬುಡ್ಡಿಗೆ ಗಾಜಿನ ಹೊರಕವಚ.  ಇಂತಿಪ್ಪ ಈ ಹಳ್ಳಿಯಲ್ಲಿ ಜಾತ್ರೆ, ಮನೆ ದೇವರ ಪರೇವು, ದಾಸಯ್ಯನ ಜಾತ್ರೆ, ಊರಿನ ಕೊಂಡ ಇತ್ತಾದಿಗಳನ್ನ ಆಚರಣೆ ಮಾಡ್ತಿದ್ರು.

ಊರಿನ ಪಟೇಲ್ ರಾಜಣ್ಣ ಮನೆಯಲ್ಲಿ ಮನೆ ದೇವರ ಪರೇವು ಹಬ್ಬ ಮಾಡಿ ಊರವರಿಗೆಲ್ಲಾ ಊಟದ ಅರವಂಟಿಗೆ ಇಟ್ಕಂಡಿದ್ದರು.  ಊರವರೆದಲ್ಲಾ ಆದಮೇಲೆ ಸ್ವಜಾತಿಯವರನ್ನ ಪ್ರತ್ಯೇಕವಾಗಿ ಸಾಯಂಕಾಲ ವೀಳ್ಯಕೊಟ್ಟಿ ಊಟಕ್ಕೆ ಕರೆದಿದ್ದರು.  ಅಂದರೆ ವಿಶೇಷ ಭೋಜನ.  ಸರಿ ನಾನು ಮತ್ತು ನನ್ನ ಮಾವ ಮುಖ ತೊಳೆದು ವಿಭೂತಿ ಧರಿಸಿ ಹೆಗಲ ಮೇಲೆ ಟವಲ್ ಹಾಕೊಂಡ್ ಊಟಕ್ಕೆ ಹೋದ್ವಿ.   ಸರಿ, ಅದೇ ಕತ್ತಲು ಕೋಣೆ.  ಚಿಮಣಿಯ ದೀಪ. ಊಟಕ್ಕೆ ಕುಳಿತೆವು.  ದೊಡ್ಡದಾದ ಕಂಚಿನ ಗಂಗಳ ಇಟ್ಟರು ತೆವದಿಗೆಯ‌ ಮೇಲೆ.  ನನಗೋ ತೆವದಿಗೆಯ ಮೇಲೆ ಇಟ್ಟದ್ದು ತುಂಬಾ ಖುಷಿಯಾಯ್ತು. ಪಕ್ಕದಲ್ಲಿ ದೊಡ್ಡ ಕಂಚಿನ ಲೋಟದ ತುಂಬಾ ನೀರನ್ನಿಟ್ಟರು.  ಸರಿ ಮುದ್ದೆಯನ್ನು ತಂದಿಟ್ಟರು.  ಒಂದು ಮಿಳ್ಳೆಯಲ್ಲಿ ತುಪ್ಪವನ್ನು ಹುಯ್ದರು.  ಸರಿ ನಾನು ಹಾಗೇ ಕುಳಿತಿದ್ದೆ.  ಎಷ್ಟೊತ್ತಾದರೂ ಸಾರು ತೆಗೆದುಕೊಂಡು ಬರಲಿಲ್ಲ.  ನಾನು ಸುಮ್ಮನೆ ಕುಳಿತದ್ದ ನೋಡಿ ಮಾವ ಊಟ ಮಾಡೋ ಆಂತು.  ಏನ್ ಮಾವ ಸಾರೇ ಹಾಕಿಲ್ಲ ಏನ್ ಊಟ ಮಾಡೋದು ಅಂದೆ. ನಮ್ಮ ಮಾವ ಮುಸಿ ಮುಸಿ ನಗುತ್ತಾ ಇದು ಮುದ್ದೆ ಅಲ್ಲ, ಬೇಯಿಸಿದ ಹುರಳಿಕಾಳಿನ ಸಿಹಿಯಾದ ಊರಣ ಅಂತೇಳಿ ನಗಾಡಲು ಶುರು ಮಾಡಿದರು.  ನನಗೋ ನಾಚಿಕೆಯಾಗಿ ಊರಣ ತಿಂದು  ಊಟ ಮುಗಿಸಿ ಹೊರಬಂದೆವು.

ಎಷ್ಟು ವರ್ಷಗಳಾದರೂ ಈ ಸಂದರ್ಬ ಮರೆಯಲು ಸಾಧ್ಯವಿಲ್ಲ.  ಕಾರಣ ಇಷ್ಟೇ ಊರಿಗೇ ಪಟೇಲನಾದರೂ ಬೇಳೆ ಒಬ್ಬಟ್ಟು ಮಾಡಲು ಬಡತನದ ಕಾರಣ ಮಾಡಲಾಗಲಿಲ್ಲ.  ಆಗ ಊಟದಲ್ಲಿ ರುಚಿ ಇತ್ತು;ಆಡಂಬರ ಇರಲಿಲ್ಲ. ಈಗ ಊಟದಲ್ಲಿ ಆಡಂಬರ ಇದೆ;ಆದರೆ ನಾಲಿಗೆ ಸತ್ತಿದೆ.
#yrqtjogi #yrqtbaba #ಸಣ್ಣಕಥೆ