Nojoto: Largest Storytelling Platform

ಕಡೆಗೂ ಬಿಸಿಲ ಬೇಗೆ ತಣಿವ ಹೊತ್ತು ಸನ್ನಿಹಿತವಾಗಿತ್ತು. ಮ

 ಕಡೆಗೂ ಬಿಸಿಲ ಬೇಗೆ ತಣಿವ ಹೊತ್ತು ಸನ್ನಿಹಿತವಾಗಿತ್ತು. 
ಮನದ ದುಗುಡ ಕಳೆವ ಕಾಲವದು ಈಗ ಬಂದಿತ್ತು. 
ಅದೆಷ್ಟೋ ರಾತ್ರಿಗಳನ್ನು ನಿದ್ರೆಯಿರದೆ ಕಳೆದು, 
ಸಂದಿಗ್ಧತೆಯಲ್ಲೂ ನಿರಾಳಭಾವವನ್ನು ತಾಳಿ, 
ನಿಷ್ಕಲ್ಮಶ ಪ್ರೀತಿಯಿಂದ ಹಗಲಿರುಳು ಸೇವೆ ಮಾಡಿ, 
ಕಂಡ ಕಂಡ ದೇವರಿಗೆ ಹರಕೆ ಹೊತ್ತು, ಧೃತಿಗೆಡದೆ 
ಪ್ರತಿದಿನ ಮುಂಜಾನೆ ದೇವರಲ್ಲಿ ಮಾಡುತ್ತಿದ್ದ 
ಆ ಪ್ರಾರ್ಥನೆಗೆ ಫಲ ದೊರಕುವ ಸಮಯ 
ಬಂದೇಬಿಟ್ಟಿತ್ತು. ಸುಮಾರು ಐದು ವರುಷಗಳ 
ಹಿಂದೆ ಅಪಘಾತದ ಪರಿಣಾಮವಾಗಿ 
ಜೀವಚ್ಛವವಾಗಿಬಿಟ್ಟಿದ್ದ ಅವಳ ತಂದೆಯಲ್ಲಿ 
ಇಂದು ಮೊಟ್ಟಮೊದಲನೆ ಬಾರಿಗೆ ಜೀವದ 
ಸಂಚಲನವಾಗಿತ್ತು. ಚಿಕಿತ್ಸೆಗೆ ಸ್ಪಂದಿಸತೊಡಗಿದ 
ಅವಳ ತಂದೆಯು ಅಪಾಯದಿಂದ 
ಪಾರಾಗಿರುವರೆಂಬ ಸುದ್ದಿ ಕೇಳಿ 
ಅವಳು ಮತ್ತೆ ಅದೇ ಐದು ವರುಷ ಹಿಂದಿನ 
'ತಂದೆಯ ಪುಟ್ಟ ಮಗಳು' ಆಗಿದ್ದಳು. 
ಅವಳ ಸಂತಸ ಕಂಡ ಬಾನು ಆನಂದಭಾಷ್ಪ 
ಸುರಿಸಿತ್ತು; ಹೆಪ್ಪುಗಟ್ಟಿದ ದುಗುಡ 
ಹರಿದುಹೋಗುವಂತೆ. 
ಆ ಪ್ರತಿ ಮಳೆಹನಿಯಲ್ಲೂ ಸ್ವರ್ಗದ 
ಆಶೀರ್ವಾದವಿತ್ತು; 
ಅವಳ ತಾಯಿಯಿಂದ!  #ಅವಳು   #ಸಣ್ಣಕಥೆ #ಅರೆಘಳಿಗೆ_ಹೊಳೆದ_ಸಾಲುಗಳು
#aestheticthoughts 
#yqbaba  #yqjogi #picquote    #YourQuoteAndMine
Collaborating with Aesthetic Thoughts
 ಕಡೆಗೂ ಬಿಸಿಲ ಬೇಗೆ ತಣಿವ ಹೊತ್ತು ಸನ್ನಿಹಿತವಾಗಿತ್ತು. 
ಮನದ ದುಗುಡ ಕಳೆವ ಕಾಲವದು ಈಗ ಬಂದಿತ್ತು. 
ಅದೆಷ್ಟೋ ರಾತ್ರಿಗಳನ್ನು ನಿದ್ರೆಯಿರದೆ ಕಳೆದು, 
ಸಂದಿಗ್ಧತೆಯಲ್ಲೂ ನಿರಾಳಭಾವವನ್ನು ತಾಳಿ, 
ನಿಷ್ಕಲ್ಮಶ ಪ್ರೀತಿಯಿಂದ ಹಗಲಿರುಳು ಸೇವೆ ಮಾಡಿ, 
ಕಂಡ ಕಂಡ ದೇವರಿಗೆ ಹರಕೆ ಹೊತ್ತು, ಧೃತಿಗೆಡದೆ 
ಪ್ರತಿದಿನ ಮುಂಜಾನೆ ದೇವರಲ್ಲಿ ಮಾಡುತ್ತಿದ್ದ 
ಆ ಪ್ರಾರ್ಥನೆಗೆ ಫಲ ದೊರಕುವ ಸಮಯ 
ಬಂದೇಬಿಟ್ಟಿತ್ತು. ಸುಮಾರು ಐದು ವರುಷಗಳ 
ಹಿಂದೆ ಅಪಘಾತದ ಪರಿಣಾಮವಾಗಿ 
ಜೀವಚ್ಛವವಾಗಿಬಿಟ್ಟಿದ್ದ ಅವಳ ತಂದೆಯಲ್ಲಿ 
ಇಂದು ಮೊಟ್ಟಮೊದಲನೆ ಬಾರಿಗೆ ಜೀವದ 
ಸಂಚಲನವಾಗಿತ್ತು. ಚಿಕಿತ್ಸೆಗೆ ಸ್ಪಂದಿಸತೊಡಗಿದ 
ಅವಳ ತಂದೆಯು ಅಪಾಯದಿಂದ 
ಪಾರಾಗಿರುವರೆಂಬ ಸುದ್ದಿ ಕೇಳಿ 
ಅವಳು ಮತ್ತೆ ಅದೇ ಐದು ವರುಷ ಹಿಂದಿನ 
'ತಂದೆಯ ಪುಟ್ಟ ಮಗಳು' ಆಗಿದ್ದಳು. 
ಅವಳ ಸಂತಸ ಕಂಡ ಬಾನು ಆನಂದಭಾಷ್ಪ 
ಸುರಿಸಿತ್ತು; ಹೆಪ್ಪುಗಟ್ಟಿದ ದುಗುಡ 
ಹರಿದುಹೋಗುವಂತೆ. 
ಆ ಪ್ರತಿ ಮಳೆಹನಿಯಲ್ಲೂ ಸ್ವರ್ಗದ 
ಆಶೀರ್ವಾದವಿತ್ತು; 
ಅವಳ ತಾಯಿಯಿಂದ!  #ಅವಳು   #ಸಣ್ಣಕಥೆ #ಅರೆಘಳಿಗೆ_ಹೊಳೆದ_ಸಾಲುಗಳು
#aestheticthoughts 
#yqbaba  #yqjogi #picquote    #YourQuoteAndMine
Collaborating with Aesthetic Thoughts
shruthiu6112

Shruthi U

New Creator