Nojoto: Largest Storytelling Platform

"ಮೊದಲ ಪೆಟ್ಟು" ಹಿಂದೆ ಆತನು ಹೇಳಿದ ಮಾತಿಗೆ ನೆರೆದ ಗುಂಪಿ

"ಮೊದಲ ಪೆಟ್ಟು"

ಹಿಂದೆ ಆತನು ಹೇಳಿದ ಮಾತಿಗೆ ನೆರೆದ ಗುಂಪಿನವರ
ಎದೆ ಝಲ್ಲೆಂದು, ಮೈ ಬೆವತು ಕೈ‌ ನಡುಗಿ
ಹಿಡಿದ ಕಲ್ಲು ಕಾಲಿನ ಬುಡದಲ್ಲಿ ಬಿದ್ದಿತ್ತು,
ಆದರಿಂದು ಯಾರಿರುವರು ಆ ಮಾತನ್ನು ಹೇಳಲು?
ಅವರ‌್ಯಾರೋ ತೊಂದರೆ ಕೊಡಲು ಬಂದಿರಬಹುದು,
ಇವರ‌್ಯಾರೋ ಮಾರುವ ಮೊದಲು ಉಗಿಯುತ್ತಿರಬಹುದು; 
ಕಳ್ಳರಿರಬಹುದು, ಹೀಗಿರಬಹುದು, ಹಾಗಿರಬಹುದೆಂಬ 
ವರ್ತುಲದಲ್ಲಿ ಸಿಲುಕಿ, ಬುದ್ಧಿಗೆ ಕೆಂಪು‌ ಪರದೆ ಮುಚ್ಚಿ,
ಕೈಯಲ್ಲಿ ಕಲ್ಲು, ಕೋಲುಗಳನ್ನು ಹಿಡಿದು;
ಪಾಪಿಯೆಂದು ತಿಳಿದವರನ್ನು ಶಿಕ್ಷಿಸಲು ಹುಚ್ಚೆದ್ದು,
ಕಾನೂನನ್ನು ಕೈಗೆತ್ತಿಕೊಳ್ಳುವ ಮೊದಲು; ಇಂದು
ಯಾರಿರುವರು ಕಲ್ಲು, ಕೋಲುಗಳನ್ನು ಕೈಯಿಂದ 
ಕಾಲ ಬುಡಕ್ಕೆ ಬೀಳುವಂತೆ ಮಾಡಬಲ್ಲವರು?
"ಪಾಪಿಗೆ ಕಲ್ಲನ್ನು ಮೊದಲು ಪಾಪವನ್ನೇ 
ಮಾಡಿರದವರು ಎಸೆಯಲಿ" ಎಂದು 
ಗಟ್ಟಿಸಿ ನಿಂತು ಹೇಳಬಲ್ಲವರು?
ಇಂದು ಯಾರಿರುವರು? ಅಂತಹವರು!  #ಪಾಪಿ #ಶಿಕ್ಷೆ #yqjogikannada #yqjogi
"ಮೊದಲ ಪೆಟ್ಟು"

ಹಿಂದೆ ಆತನು ಹೇಳಿದ ಮಾತಿಗೆ ನೆರೆದ ಗುಂಪಿನವರ
ಎದೆ ಝಲ್ಲೆಂದು, ಮೈ ಬೆವತು ಕೈ‌ ನಡುಗಿ
ಹಿಡಿದ ಕಲ್ಲು ಕಾಲಿನ ಬುಡದಲ್ಲಿ ಬಿದ್ದಿತ್ತು,
ಆದರಿಂದು ಯಾರಿರುವರು ಆ ಮಾತನ್ನು ಹೇಳಲು?
ಅವರ‌್ಯಾರೋ ತೊಂದರೆ ಕೊಡಲು ಬಂದಿರಬಹುದು,
ಇವರ‌್ಯಾರೋ ಮಾರುವ ಮೊದಲು ಉಗಿಯುತ್ತಿರಬಹುದು; 
ಕಳ್ಳರಿರಬಹುದು, ಹೀಗಿರಬಹುದು, ಹಾಗಿರಬಹುದೆಂಬ 
ವರ್ತುಲದಲ್ಲಿ ಸಿಲುಕಿ, ಬುದ್ಧಿಗೆ ಕೆಂಪು‌ ಪರದೆ ಮುಚ್ಚಿ,
ಕೈಯಲ್ಲಿ ಕಲ್ಲು, ಕೋಲುಗಳನ್ನು ಹಿಡಿದು;
ಪಾಪಿಯೆಂದು ತಿಳಿದವರನ್ನು ಶಿಕ್ಷಿಸಲು ಹುಚ್ಚೆದ್ದು,
ಕಾನೂನನ್ನು ಕೈಗೆತ್ತಿಕೊಳ್ಳುವ ಮೊದಲು; ಇಂದು
ಯಾರಿರುವರು ಕಲ್ಲು, ಕೋಲುಗಳನ್ನು ಕೈಯಿಂದ 
ಕಾಲ ಬುಡಕ್ಕೆ ಬೀಳುವಂತೆ ಮಾಡಬಲ್ಲವರು?
"ಪಾಪಿಗೆ ಕಲ್ಲನ್ನು ಮೊದಲು ಪಾಪವನ್ನೇ 
ಮಾಡಿರದವರು ಎಸೆಯಲಿ" ಎಂದು 
ಗಟ್ಟಿಸಿ ನಿಂತು ಹೇಳಬಲ್ಲವರು?
ಇಂದು ಯಾರಿರುವರು? ಅಂತಹವರು!  #ಪಾಪಿ #ಶಿಕ್ಷೆ #yqjogikannada #yqjogi