ಜುಲ್ ಕಾಫಿಯ ಗಜಲ್ ಮನಸಿನ ಪುಟಗಳಲ್ಲಿ ನೆನಪುಗಳೇ ವೈರಿಯು ನೋವನ್ನು ದಹಿಸಲಿ ಹೇಗೆ ಈರ್ಷೆಯ ಲೋಕದಿ ಜರಿಕೆಯೇ ತೊಡರು ಸೋಲನ್ನು ಹಿಮ್ಮೆಟ್ಟಿಸಲಿ ಹೇಗೆ ಬತ್ತಿ ಹೋಗಿದೆ ಭರವಸೆ ಕಲ್ಪನೆಯಲ್ಲೂ ಕನಸು ಕೈಗೂಡಲೆನ್ನುವ ಕೋರಿಕೆ ಮನದ ಮಡುವಿನಲ್ಲಿ ಸಿಲುಕಿದೆ ಬುದ್ದಿ ಭಾವನೆಗಳನ್ನು ಚಿಗುರಿಸಲಿ ಹೇಗೆ ಸತ್ತ ಭಾವಗಳೊಂದಿಗೆ ಬೇಸತ್ತು ಸಾಗುತ್ತಿದೆ ಬದುಕು ಸಾಕ್ಷಿಗಿದೆ ಉಸಿರಾಟ ನೋವಿನ ತಳದಲ್ಲಿ ನಗುವೆಂಬ ನಿಧಿ ಹುಡುಕಾಟವನ್ನು ಶುರುವಿಡಲಿ ಹೇಗೆ ಮಿಂಚು ಹುಳುಗಳ ಸಂಚು ಹೊಳೆವ ಬೆಳಕಿನ ಹಿಂದೆ ಅಲೆಯಿತು ಮನಸ್ಸು ಪಾಳು ಬಿದ್ದಿದೆ ಹೃದಯದರಮನೆ ಗತ ವೈಭವವನ್ನು ಮರುಸೃಷ್ಟಿಸಲಿ ಹೇಗೆ ಮನೋಲೋಕದ ದಿಗಂತವನ್ನು ದಾಟುತ ಸಾಗುತ್ತಿದೆ 'ವಿಜಯ'ದ ಯಾತ್ರೆ ಪುಟಿಯಿತು ಮನ ನೋಡುತ ಒಲಿದ ಗೆಲುವನ್ನು ಸಂಭ್ರಮಿಸದಿರಲಿ ಹೇಗೆ #ವಿಜಯ್_ಗಝಲ್ #ಗಝಲ್ #ಜುಲ್_ಕಾಫಿಯ_ಗಜಲ್ #ಕನ್ನಡ_ಗಜಲ್ # 6 #kvprakashquotes ಜುಲ್ ಕಾಫಿಯ ಗಜಲ್: ಜುಲ್ ಕಾಫಿಯ ಎಂದರೆ ಎರಡೆರಡು ಕಾಫಿಯಗಳನ್ನು ಅಳವಡಿಸಿ ಬರೆಯುವುದು. ಜುಲ್ ಎಂದರೆ ದ್ವೀತಿಯ ಎಂಬ ಅರ್ಥ ಬರುತ್ತದೆ. ಒಂದು ಕಾಫಿಯಾ ಮುಂದೆ ಮತ್ತೊಂದು ಕಾಫಿಯಾ ಬರುವ ಗಜಲ್ ಗಳನ್ನು ಜುಲ್ ಕಾಫಿಯಾ ಗಜಲ್ಗಳೆಂದು ಕರೆಯುತ್ತಾರೆ. https://sangaati.in/?p=27295