ತರಹೀ ಗಝಲ್: ಚೇತನಾ ಅವರ ಊಲಾ ಮಿಸ್ರ ********************************* ರಕ್ತ ಚರಿತ್ರೆಯಲಿ ಅನುರಕ್ತನಾಗಿಹ ಮನುಜಗೆ ಎಲ್ಲಿದೆ ಮಾನವೀಯತೆ ಸುಪ್ತ ಮನದಲೂ ವಿಷವ ಬೆರೆಸಿಹ ಮನುಜಗೆ ಎಲ್ಲಿದೆ ಮಾನವೀಯತೆ ನಿರ್ಭೀತಿಯಿಂದ ಮೆರೆಯುತಿರುವರು ಮನುಜ ಮುಖವಿರಿಸಿದ ರಕ್ಕಸರು ಹಸುಳೆಯನೂ ಬಿಡದೆ ಪೀಡಿಸುತಿಹ ಮನುಜಗೆ ಎಲ್ಲಿದೆ ಮಾನವೀಯತೆ ಉಸಿರು ಬಿಗಿಹಿಡಿದು ಕಾಯುತ್ತಿವೆ ಹಿರಿಜೀವಗಳು ಅನಾಥ ಮಂದಿರದಲ್ಲಿ ಸಂಬಂಧಗಳ ಆಳವನು ತಿಳಿಯದಿಹ ಮನುಜಗೆ ಎಲ್ಲಿದೆ ಮಾನವೀಯತೆ ಮತಗಳ ನಡುವೆ ಧ್ವೇಷವನು ಬಿತ್ತಿ ಸ್ವಾಸ್ಥ್ಯ ಕದಡುತಿರುವ ಮತಿಹೀನರು ವನ್ಯ ಜೀವಿಗಳ ತೆರದಿ ವರ್ತಿಸುತಿಹ ಮನುಜಗೆ ಎಲ್ಲಿದೆ ಮಾನವೀಯತೆ ಅಂಧ ಶ್ರದ್ದೆಯಲಿ ಅಸುವ ತೆಗೆದು ವಿಕೃತಿ ಮೆರೆಯುವುದಲ್ಲ "ವಿಜಯ" ಭ್ರಮೆಯ ನಾಕದ ಸೃಷ್ಟಿಗೆ ಹೊರಟಿಹ ಮನುಜಗೆ ಎಲ್ಲಿದೆ ಮಾನವೀಯತೆ Chetu Hegde ಅವರೇ, ನಿನ್ನೆ ಮೊನ್ನೆಯಷ್ಟೇ ಪುಟ್ಟ ಪ್ರಯತ್ನ ಅಂತ ಗಝಲ್ ಲೋಕಕ್ಕೆ ಎಂಟ್ರಿ ಕೊಟ್ಟವರು ಪಟ ಪಟನೆ ಬರೆಯುತ್ತಾ ಸಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.😍 ನಿಮ್ಮ ಒಂದು ಪ್ರೌಢ ಗಂಭೀರವಾದ ಗಝಲ್ ಗೆ ಸರಳವಾದ ಪದಗಳ ಮೂಲಕ ತರಹೀ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಅಷ್ಟಕ್ಕೂ ನಿಮ್ಮ ಗಝಲ್ ಓದಿದ್ದೇ ತರಹೀ ಬರೆದಾದ್ಮೇಲೆ ಅದೇ ತರಹ ಇದೆಯಾ ಅಂತ ತುಲನೆ ಮಾಡುವುದಕ್ಕೆ...😁 ಹಾ... ನಯನ ಭಟ್ ಜಿ.ಎಸ್❣️ ಅವರು ಬರೆದ ತರಹೀ ಓದಿದಾಗ, ನನ್ನಂತಹ ಜನ ಸಾಮಾನ್ಯನಿಗೆ ಎಟುಕದ ಪದಗಳನ್ನು ಬಳಸದೆ ಬರೆದು ಬಿಡಬೇಕು ಎನ್ನುವ ಆಲೋಚನೆ ಬಂತು..😊