Nojoto: Largest Storytelling Platform
nojotouser7867968983
  • 75Stories
  • 24Followers
  • 704Love
    3.8KViews

Abhishek Naik malenadu

  • Popular
  • Latest
  • Video
08c3b303e5e3f4c567969ebab63a59c1

Abhishek Naik malenadu

ಮೌನ ಮನಸ್ಸು

ದುಃಖ ತುಂಬಿದ ಒಡಲು
ಹೃದಯ ಭಾವದಲಿ ನೊಂದು
ಮಾತು ಬಾರದೆ ಮೂಕವಾಗಿ
ಕಂಗಳು ತುಂಬಿ ಕಣ್ಣೀರು
ಮುದುಡಿದ ಮುಖಭಾವದಿ
ಗಂಟಲು ಬಿಗಿದು ಬಿಕ್ಕಳಿಸುತಿದೆ
ಮೌನ ಮುರಿಯದ ಮನಸ್ಸು

 ಅಭಿಷೇಕ್ ನಾಯಕ್ ಮಲೆನಾಡು

©Abhishek Negiloni
  #girl
08c3b303e5e3f4c567969ebab63a59c1

Abhishek Naik malenadu

"ನಿನ್ನೊಳಗೊ"

ತಾಳ್ಮೆಯು ಸಹನೆಯೊಳಗೊ,
ಸಹನೆಯು ತಾಳ್ಮೆಯೊಳಗೊ,
ಸಹನೆ-ತಾಳ್ಮೆಗಳೆರಡು.
ಶಾಂತಿಯೊಳಗೊ,
ಆ ಶಾಂತಿಯೇ ನಿನ್ನ ನಾಮವೋ.
ನಾಮವೆಳುವು ಮನದೊಳಗೊ,
ಕೃಷ್ಣಾ ನಿನ್ನೊಳಗೊ...!!

ಅಭಿಷೇಕ್ ನಾಯಕ್ ಮಲೆನಾಡು

©Abhishek Negiloni
08c3b303e5e3f4c567969ebab63a59c1

Abhishek Naik malenadu

#krishna_flute
08c3b303e5e3f4c567969ebab63a59c1

Abhishek Naik malenadu

❤ಓ ನನ್ನ ಚೆಲುವೆ❤

ನಿನ್ನೊಲವ ಸಿಹಿ ಎಷ್ಟು
ರುಚಿಸಿದರೇನು ಪ್ರಿಯ
ಬಾಂದಳದ ರವಿಯು
ನಿನಗೆ ಸಮನೇನು ಗೆಳತಿ...

ಬಾಳ ಬುತ್ತಿಯಲ್ಲಿ
ನನಗೂ ಒಂದು ತುತ್ತು
ಭಾವಯಾನದಲ್ಲಿ ಕೂತು
ನನಗೂ ಕೊಡುವೆಯೇನು ಗೆಳತಿ...

ನಿನ್ನ ಚೆಂದಕೆ ಮರಳಾದವನು
ನಾನಲ್ಲ ಗೆಳತಿ
ಹುಸಿ ಮುನಿಸು ತೊರೆದು
ಪ್ರೀತಿಸುವೆ ಏನು ಗೆಳತಿ...

ಎಲ್ಲೋ ಕಾಣದ 
ದಿಗಂತದಲ್ಲಿ ನಾವು
ಒಂದಾಗಿ ಕುಡಿ ಸೇರಿ
ನಲಿಯೋಣವೇನು ಗೆಳತಿ...

ನಿನ್ನ ಅನಿಸಿಕೆಗಾಗಿ
ಕಾಯುತ್ತಿರುವೆ ನಾನು
ನೀ ಸಮ್ಮತೀಯ
ತಿಳಿಸಲು ಬರುವೆಯಾ ಗೆಳತಿ...

ಅಭಿಷೇಕ್

©Abhishek Negiloni #Love
08c3b303e5e3f4c567969ebab63a59c1

Abhishek Naik malenadu

ಗೆಳತಿ,
ನನ್ನನ್ನೆಷ್ಟು ಪ್ರೀತಿಸುವೆಯೆಂದು, 
ನೀ ಕೇಳಬೇಡ ನನ್ನ ಕುರಿತು... 
ಮನಸಾರೆ ಒಪ್ಪಿ
ಮನಸಾರೆ ಪ್ರೀತಿಸುವೆ ಗೆಳತಿ,
ನನ್ನೀ ಕಣ್ಣಳಲ್ಲಿ, 
ಕಣ್ಣಳ ಕನಸಲ್ಲಿ,
ನನ್ನೀ ಮನಸಲ್ಲಿ , 
ಮನಸಿನ ಮನೆಯಲ್ಲಿ, 
ನಿನ್ನ ಬಿಟ್ಟು , 
ಬೇರ್ಯಾರು ಇಲ್ಲ ನನಗೆ ಗುರುತು, 
ನೀನೆ ನನ್ನ ಪ್ರಪಂಚ ಗೆಳತಿ...!!

ಅಭಿಷೇಕ್

©Abhishek Negiloni #Love
08c3b303e5e3f4c567969ebab63a59c1

Abhishek Naik malenadu

"ನಿನ್ನದೆ ಗೆಳತಿ"

ನನ್ನ ಪ್ರತಿ ಕಾವ್ಯ, 
ಕವಿತೆಯ ಭಾವ, 
ಅನುಭಾವ ನಿನ್ನದೆ ಗೆಳತಿ, 
ಕಾರಣ ಆವರಿಸಿಹೆ, 
ನಿತ್ಯ ನೀ ನನ್ನೆದೆ ಗೆಳತಿ...! 

ಒಳಗಿನ ಜೀವವೇ, 
ನಿನ್ನದೆಂದ ಮೇಲೆ, 
ಭಾವವೂ ನಿನ್ನದೆ ಗೆಳತಿ, 
ಭಾಷೆಯೂ ನಿನ್ನದೆ ಗೆಳತಿ, 
ಭವಿಷ್ಯವು ನಿನ್ನದೆ ಗೆಳತಿ...!! 

ಅಭಿಷೇಕ್

©Abhishek Negiloni #Muh_par_raunak
08c3b303e5e3f4c567969ebab63a59c1

Abhishek Naik malenadu

ಪ್ರೇಮ ಹೂದುಂಬಿಯಂತೆ......

ಬೆಳದಿಂಗಳ ಬಾಲೆ ನಿನ್ನಂದಕೆ ಸೋತೆ ನಾನು, 
ಬಾಂದಳ ಹಕ್ಕಿಯಾಗಿ ಬಾಳುವ ನಾನು ನೀನು.
ನಿನ್ನ ನೆನದಾಗ ಕೋಗಿಲೆ ಗಾನದಂತೆ ಮಧುರ, 
ಜೋತೆಯಾಗು ಅನುರಾಗದ ಬಂಧನ ಸುಂದರ.... 

ನಮ್ಮಿಬ್ಬರ ಪ್ರೀತಿಗೆ ನಿನ್ನಂದದ ಕಂಗಳ ಸಲುಗೆ, 
ಬ್ರಹ್ಮ ಹಾಕಿರುವ ಜೋಡಿ ಅನುಬಂಧ ಬೆಸುಗೆ.
ನಲ್ಲೆ ಪ್ರೀತಿಯ ಅರಮನೆಗೆ ನೀನಾಗು ಅರಸಿ, 
ಅರಿತು ಬಾಳೋಣ ದುಃಖ ದುಮ್ಮಾನ ಸರಿಸಿ.... 

ಬಾಳುವ ಒಲುಮೆ ಬನದ ಹೂದುಂಬಿಯಂತೆ, 
ಅರಿತು ಸಮರಸವೇ ಜೀವನ ಕವಿವಾಣಿಯಂತೆ.
ಕಷ್ಟ ಸುಖವೇ ಬರಲಿ ಆತ್ಮಬಲ ಸೆಲೆ ಬತ್ತದಂತೆ, 
ನವ ಮನ್ವಂತರದ ಸೊಬಗಿನ ಸ್ಪೂರ್ತಿಯಂತೆ.... 

ಅಭಿಷೇಕ್

©Abhishek Negiloni #LOVE_ART 
#Love 
#love❤ 
#Love  
#ಪ್ರೀತಿ

LOVE_ART Love love❤ Love  #ಪ್ರೀತಿ

08c3b303e5e3f4c567969ebab63a59c1

Abhishek Naik malenadu

ಗೆಳತಿ

ನಿನ್ನ ಹೃದಯದ ಅಂಗಳದಿ 
ಗುಡಿಸಲೊಂದ ಕಟ್ಟಲೇ ಗೆಳತಿ 
ನನ್ಮ ಪ್ರೀತಿಯ ಅರಮನೆ ಕಟ್ಟಲು 
ಬೇಕು ನಿನ್ನ ಅನುಮತಿ... 
ಪ್ರೀತಿ ಪ್ರೇಮದ ಇಟ್ಟಿಗೆ ಇಟ್ಟು 
ಸುತ್ತಲು ಗೊಡೆ ಕಟ್ಟುವೆನು 
ಸುಖ-ದುಖವ ಜೊತೆಯಲಿ ಬೆರಸಿ 
ಮೇಲೆ ಛಪ್ಪರ ಹಾಕುವೆನು... 
ನನ್ನಯ ಉಸಿರನೆ ದ್ವಾರವ ಮಾಡಿ 
ಕಾವಲು ನಾನು ಕಾಯುವೆನು.. 
ಗುಡಿಸಲು ಕಟ್ಟಿ ಒಟ್ಟಿಗೆ ಬದುಕಲು 
ನೀಡುವೆಯಾ ನಿನ್ನ ಸಹಮತಿ ಗೆಳತಿ...!! 

ಅಭಿಷೇಕ್

©Abhishek Negiloni #pyaar
08c3b303e5e3f4c567969ebab63a59c1

Abhishek Naik malenadu

ಕೋಪ ಇರಬೇಕು, 
ಆದ್ರೆ ಇಷ್ಟೊಂದು ಇರಬಾರದು. 
ಹಠ ಸಾಧಿಸಬೇಕು, 
ಆದ್ರೆ ಪ್ರೀತ್ಸೋ ಹೃದಯದಕ್ಕಲ್ಲಾ. 
ನಿಜ ತಪ್ಪು ಮಾಡಿದ್ದೇನೆ. 
ಕ್ಷಮಿಸು ನೀ ನನ್ನನ್ನು, 
ತ್ಯಜಿಸಿ ಆ ನಿನ್ನ ಮುನಿಸನು...!! 

ಅಭಿಷೇಕ್

©Abhishek Negiloni
08c3b303e5e3f4c567969ebab63a59c1

Abhishek Naik malenadu

"ಸದಾ ನಗು ನಗುತ್ತಾ ಇರಿ"

ಮಾನವನ ಇಡೀ ಜೀವನಕ್ಕೆ ಮೆರುಗು 
ನೀಡುವ ನಗು ಇದ್ದಾಗ ಮತ್ತೇನು ಬೇಕು ಹೇಳಿ, 
ನಗುವಿನೊಂದಿಗೆ ಇದ್ದಾಗ ದೇಹದ ಒತ್ತಡ, 
ತಲೆ ಭಾರವಾದ ಸಮಸ್ಯೆ, 
ತಾನಾಗಿಯೇ ಕಡಿಮೆ ಆಗುತ್ತದೆ, 
ನಗು ನಗುತ್ತಾ ನಲಿ,ನಲಿ ಏನೇ ಆಗಲಿ,
 ಎಂದು ನಮ್ಮ ಹಿರಿಯರು ಹೇಳಿದ್ದಾರೆ, 
ಜೀವನದಲ್ಲಿ ಏನೇ ಕಷ್ಟ ಬಂದರೂ ಏನೇ 
ಅಡೆತಡೆಗಳು ಬಂದರು,
ಅವುಗಳನ್ನು ನಗು ನಗುತ್ತಾ ಸ್ವೀಕರಿಸಿದರೆ, 
ಅವುಗಳ ಪರಿಹಾರ ಕಂಡುಕೊಳ್ಳಬಹುದು,
ನಗುವೇ ಆರೋಗ್ಯ,
ನಗುವೇ ಸಂತೋಷ,
ನಗುವೇ ಸರ್ವಸ ಮಾಡಿಕೊಂಡರೆ 
ಇಡೀ ಜೀವನವನ್ನು ಗೆಲ್ಲಬಹುದು, 
ನಗುತ್ತಾ ಇರೀ , 
ನಗುವಿನೊಂದಿಗೆ ಸುಖವಾಗಿರಿ, 
ನಗು ಸದಾ ಸುಖ, ಶಾಂತಿ,
ನೆಮ್ಮದಿ, ಸಮೃದ್ಧಿ ತರಲಿ....

ಅಭಿಷೇಕ್

©Abhishek Negiloni #MothersDay2021
loader
Home
Explore
Events
Notification
Profile