Nojoto: Largest Storytelling Platform
rajendrailager2647
  • 43Stories
  • 7Followers
  • 405Love
    3.9KViews

ರಾಜೇಂದ್ರ ಈಳಗೇರ.

I'm basically writer in Kannada stories like Friends relationship and about love. I love Indian novel to read and write.

  • Popular
  • Latest
  • Video
3bda17a962fe232d37877bd2ccb1e349

ರಾಜೇಂದ್ರ ಈಳಗೇರ.

White ನೀ ಬರೆದ ಕವಿತೆಯಲ್ಲಿ ಮರೆತುಹೋದ ಪದವೊಂದು ನಾನು 
ಆದರೆ
 ನಾ ಬರೆದ ಕವಿತೆಯಲ್ಲಿ ಮರೆತರೂ ಮರೆಯಲಾಗದ ಸಾಲುಗಳು ನೀನು...!

©ರಾಜೇಂದ್ರ ಈಳಗೇರ.
  #SAD
3bda17a962fe232d37877bd2ccb1e349

ರಾಜೇಂದ್ರ ಈಳಗೇರ.

"ನಿನ್ನ ದುಃಖ ನಿನ್ನ ಅಜ್ಞಾನದ ಸಂಕೇತ
ನಿನ್ನ ಆನಂದ ನಿನ್ನ ಜ್ಞಾನದ ಸಂಕೇತ"

"ದುಃಖ ಇರುವವರು ಆನಂದಕ್ಕೋಸ್ಕರ
ಧ್ಯಾನ ಅಭ್ಯಾಸ ಮಾಡಲೇಬೇಕು"

ಬ್ರಹ್ಮಶ್ರೀ ಪಿತಾಮಹ ಪತ್ರೀಜಿ
Pyramid Valley International

©ರಾಜೇಂದ್ರ ಈಳಗೇರ.
  #ಕನ್ನಡಬರಹ #ಕನ್ನಡಸಾಹಿತ್ಯ #ಕನ್ನಡಿಗನಮನದಮಾತು #ಕನ್ನಡಿಗ #ಕನ್ನಡಕವನಗಳು #ಕನ್ನಡನಾಡು #ಕನ್ನಡಶಾಯರಿ 

#ರಾಜೇಂದ್ರ_ಈಳಗೇರ.

#ಕನ್ನಡಬರಹ #ಕನ್ನಡಸಾಹಿತ್ಯ #ಕನ್ನಡಿಗನಮನದಮಾತು #ಕನ್ನಡಿಗ #ಕನ್ನಡಕವನಗಳು #ಕನ್ನಡನಾಡು #ಕನ್ನಡಶಾಯರಿ #ರಾಜೇಂದ್ರ_ಈಳಗೇರ. #ಜ್ಞಾನಿ

3bda17a962fe232d37877bd2ccb1e349

ರಾಜೇಂದ್ರ ಈಳಗೇರ.

ಬಾಳು ನೀಡಲಾಗದವನು ಬ್ರಹ್ಮನಾದರೇನು?
ಒಲ್ಲೆ ಎಂದು ಹೋಗುವವನು ನಲ್ಲನಾದರೇನು?
ಪ್ರೀತಿ ನೀಡಲಾಗದವಳು ನಲ್ಲೆಯಾದರೇನು?
ಮರ್ಮ ಅರಿಯಲಾರದವಳು ಮಡದಿಯಾದರೇನು?

"ಇರುಳು ಚಂದ್ರಮನ ಅಂಗಳದಲ್ಲಿ ಸಖ ಹಾಗೂ ಸಖಿಯ ಕಂಡು"

©ರಾಜೇಂದ್ರ ಈಳಗೇರ. #Kundan&Zoya
3bda17a962fe232d37877bd2ccb1e349

ರಾಜೇಂದ್ರ ಈಳಗೇರ.

ಹೊಂಬಿಸಿಲಲ್ಲಿ ಬಳುಕುವ 
ಹೊನ್ನಂತ ಮನಸಿನವಳೆ 
ಹೊಂಬೆಟ್ಟದ ಹೊನೆಹೊತ್ತ 
ಹೊನ್ನುಡುಗೆ ಧರಿಸುವವಳೆ 
ಹೊಂಬಿಳೆಯ ಮೈಕಾಂತಿಯ
ಹೊಂಬಣ್ಣದ ಮೊಗದವಳೆ 
ಹೊಂಬೆಳೆಯ ನಡುವಲ್ಲಿ 
ಹೊಂಗಡಗ ಹಾಕುವವಳೆ 
ಹೊಳೆಯುವ ಕಂಗಳಲ್ಲಿ 
ಹೊಂಬೆಳಕ ಸಿಡಿಸುವವಳೆ 
ಒಂದರಲ್ಲಿ ಒಲವವನ್ನು 
ಹೊನಲಂತೆ ನೀಡೋಳೆ 
ಹೊನ್ನಂದಣದಲ್ಲಿ ಹೂವಿಂದ 
ಹೂಮಿಂಚನ್ನೆ ಹರಿಸೋಳೆ 
ಹೊಂಗನಸು ಹೊತ್ತು 
ಹೂನಗೆಯೇ ಚೆಲ್ಲೋಳೆ..!

©ರಾಜೇಂದ್ರ ಈಳಗೇರ. ನಲ್ಲೆಯ ಭಾವನೆ ಮನದಲ್ಲಿ ಮೂಡಿದಾಗ
ನಲ್ಲೆಯ ಮುಖ ಚಹರೆ ಮನದಿ ಕಣ್ಣು ತೆರೆದು ನೋಡಿದಾಗ

ನಲ್ಲೆಯ ಭಾವನೆ ಮನದಲ್ಲಿ ಮೂಡಿದಾಗ ನಲ್ಲೆಯ ಮುಖ ಚಹರೆ ಮನದಿ ಕಣ್ಣು ತೆರೆದು ನೋಡಿದಾಗ #ಪ್ರೀತಿ

3bda17a962fe232d37877bd2ccb1e349

ರಾಜೇಂದ್ರ ಈಳಗೇರ.

ಬಾಳಿನ ಕವಿದ ಕತ್ತಲೆಯ ಕವಿದು 
ಒಲವಿನ ವರ್ಣದ ಹಣತೆಯ ಹಚ್ಚಿ 
ಕಷ್ಟ ನಷ್ಟಗಳ ಮರೆಮಾಚಿ 
ವಿಧ್ಯಾಮೃತ ಸಿಂಚನ ಸಿಂಪಡಿಸಿ..!

ದೀನ-ದಲಿತ ಬಡವ ಬಲ್ಲಿದ 
ಎನ್ನದೆ ಎಲ್ಲರ ಒಗ್ಗೂಡಿಸಿ..!
ಒಡಲೊಳಗೆ ಅಕ್ಕರೆಯ ಹನಿಗೂಡಿಸಿ 
ನೀಡಿದ ಸಕಲವೂ ಬರುವಂತೆ ಹರಸಿ..!

ಬಸವಳಿದ ಬದುಕಿನ ಬವಣೆ ಇಳಿಸಿ 
ರಸಾಯನ ಪಾಯಸದ ಪಾಕವ ಉಣಿಸಿ..! 
ಈ ಜಗದಲಿ ತಲೆಯತ್ತಿ ನಿಲ್ಲಲು ನೀವು ಕಲಿಸಿ 
ಉನ್ನತ ಪದವಿಗಿಟ್ಟಿಸಿ ಸ್ಥಾನಮಾನ ಒದಗಿಸಿ..!

ನಿನಗೆ ಯಾರು ಇಲ್ಲ, ಇಲ್ಲಿ ಸರಿಸಾಟಿ 
ವಿಶ್ವಕ್ಕೆಲ್ಲಾ ನೀನೆ ಮೇಟಿ, ನೀನೊಬ್ಬನೆ ಜಗಜಟ್ಟಿ 
ನೀ ಅಲ್ಲಾ ತುಟ್ಟಿ ಸುಲಭವಾಗಿ, ಸಿಗುವ ಬಿಸಿ ರೊಟ್ಟಿ..!

"ಶಿಕ್ಷಕರ ದಿನದ ಶುಭಾಶಯಗಳು".

©ರಾಜೇಂದ್ರ ಈಳಗೇರ. #ಶಿಕ್ಷಕರದಿನದಶುಭಾಶಯಗಳು

#ಶಿಕ್ಷಕರದಿನದಶುಭಾಶಯಗಳು #ಜ್ಞಾನಿ

3bda17a962fe232d37877bd2ccb1e349

ರಾಜೇಂದ್ರ ಈಳಗೇರ.

ಅಮ್ಮ ಅದೆಷ್ಟು ಅಲ್ಪ ತೃಪ್ತೆ
ಬೇಕು ಎಂದವಳಲ್ಲ ಸಾಕು ಎಂದರೂ ಬಡಿಸಿದವಳು 
ಮಕ್ಕಳ ಏಳಿಗೆಗಾಗಿ ಬಡಬಡಿಸಿದವಳು 
ಬಡತನ ಬೆನ್ನಟ್ಟಿ ಬಡಿದಾಡಿದವಳು 
ಯಾರನ್ನು ಬೇಡಿದವಳಲ್ಲ ಯಾರಿಗೂ ಬೇಡದವಳಲ್ಲ 
ಎಲ್ಲರೂ ಪ್ರೀತಿಸುವ ಸುಂದರ ಕಾಡಿನಂತವಳು 
ಬರೆದಷ್ಟೂ ಕಾಡಿಸುವಂತವಳು 
ಬರೆದಷ್ಟೂ ಇನ್ನೂ ಬರೆಯಬೇಕೆನ್ನುವ 
ಹಂಬಲ ಅಮ್ಮಾ ನಿನ್ನ ತೋಳಿನಲ್ಲಿ 

ಅಮ್ಮ

©ರಾಜೇಂದ್ರ ಈಳಗೇರ. #Amma
3bda17a962fe232d37877bd2ccb1e349

ರಾಜೇಂದ್ರ ಈಳಗೇರ.

ಪ್ರೀತಿಯಿಂದ ಹರಿಸಿ
ನೋವನ್ನೆಲ್ಲಾ ಮರೆಸಿ
ಸಹನೆ ಸಹಕಾರ ತೋರಿಸಿ

ಸಹೋದರತ್ವ ತೋರಿದ ರಕ್ಷಾಬಂಧನ
ಭಾರತೀಯ ಸಂಸ್ಕೃತಿ ಉಳಿಸಿದ
ನಿನಗೆ ಶುಭಾಶಯಗಳು!!

ಘನತೆ ಗೌರವ ಹೆಚ್ಚಿಸಿ
ದ್ವೇಷ ಅಸೂಯೆ ಅಳಿಸಿ
ಭ್ರಾತೃತ್ವ ಸೌಹಾರ್ದತೆ ತರುವ ಬಂಧನ

ಅಣ್ಣನಿಗೆ ತಂದ ಹಿರಿಮೆ
ತಂಗಿಗೆ ಸಿಕ್ಕ ಗರಿಮೆ
ಅಣ್ಣತಂಗಿಯರ ಒಲುಮೆ

ಚರಿತ್ರೆಯಲ್ಲಿ ಉಳಿದಿದೆ ಪುರಾವೆ
ದ್ರೌಪದಿಯು ತಂದ ಆಚರಣೆ
ಶ್ರೀಕೃಷ್ಣ ನೀಡಿದ ಸಂರಕ್ಷಣೆ
ಅಣ್ಣ ತಂಗಿಯ ಬಾಂಧವ್ಯ

ಜನುಮ ಜನುಮದಲ್ಲಿಯೂ ನವ್ಯ
!!ಸಹೋದರ ಸಹೋದರಿಯರ ಹಬ್ಬ!!
!!"ಈ ರಕ್ಷಾ ಬಂಧನದ ಕಳಿಸಿದ 
ನಿನಗೆ ಕೋಟಿ ಕೋಟಿ ಧನ್ನೋಸ್ಮಿ "!!

©ರಾಜೇಂದ್ರ ಈಳಗೇರ. Happy #rakshabandhan
3bda17a962fe232d37877bd2ccb1e349

ರಾಜೇಂದ್ರ ಈಳಗೇರ.

ರಾಯಣ್ಣ

ಕ್ರಾಂತಿಕಾರಿ ವೀರ ಸಂಗೊಳ್ಳಿ ರಾಯಣ್ಣ
ಶೌರ್ಯ ಧೈರ್ಯವೇ ಇವನ ಮೈಬಣ್ಣ
ವೀರ ಸಿಪಾಯಿಗಳಿಗೆ ಇವನು ಅಣ್ಣ
ಅಗಸ್ಟ್ ಹದಿನೈದರಂದೆ ಜನಿಸಿದ ರಾಯಣ್ಣ

ಕೆಂಚಮ್ಮಾಜಿ, ಭರಮಪ್ಪನ ಮಗನಿವನು
ಸಂಗೊಳ್ಳಿಯ ವೀರ ಪುತ್ರ ಇವನು
ಕೆಚ್ಚೆದೆಯ ವೀರ ಶೂರ ಕಲಿ ಇವನು
ಬ್ರಿಟೀಷರೊಡನೆ ಹೋರಾಟಕೆ ನಿಂತನು

ಸ್ವಾತಂತ್ರ್ಯ ಸಮರದಿ ಪ್ರಮುಖ ಪಾತ್ರ
ಚೆನ್ನಮ್ಮನಿಗಾದ ಇವನು ವೀರ ಪುತ್ರ
ಹಿಡಿದನು ಸಂಗೊಳ್ಳಿ ಸಾಮ್ರಾಜ್ಯದ ಸೂತ್ರ
ಬ್ರಿಟೀಷರಿಗೆ ನೀಡಿದ ರಣಕೆ ಆಹ್ವಾನ ಪತ್ರ

ಸಾಧುವಿನ ವೇಷದಿ ಸೇರಿ ಸೆರೆಮನೆಯ
ಚೆನ್ನಮ್ಮಾಜಿಗೆ ನೀಡಿ ಭರವಸೆಯ
ಊದಿದನು ಸ್ವಾತಂತ್ರ್ಯದ ಕಹಳೆಯ
ಮುನ್ನಡೆಸಿದನು ಸಂಗೊಳ್ಳಿ ಸೇನೆಯ

ಬ್ರಿಟೀಷರ ಮೋಸಕೆ ಬಲಿಯಾದನು
ವೀರ ಮರಣಕೆ ಶರಣನಾದನು
ಇತಿಹಾಸದ ಪುಟವ ಸೇರಿದನು
ಸಂಗೊಳ್ಳಿ ಮರೆಯಲಾರದ ವೀರನು

©ರಾಜೇಂದ್ರ ಈಳಗೇರ. ಬ್ರಿಟಿಷರ ದಾಸ್ಯದಿಂದ ಕಿತ್ತೂರನ್ನು ಸ್ವತಂತ್ರವಾಗಿಸುತ್ತೇನೆ. ತಾಯಿ ಇಲ್ಲದಿದ್ದರೆ ಅವರ 100 ತಲೆಯ ಕಡಿದು ನಿನ್ನ ಪಾದಕ್ಕೆ ಸಮರ್ಪಿಸುತ್ತೇನೆ. ನೂರು ತಲೆ ಸಿಗಲಿಲ್ಲವಾದರೆ 99 ತಲೆಯ ಜೊತೆ ನನ್ನ ಒಂದು ತಲೆ ಸೇರಿಸಿ ನಿನಗೆ 100 ತಲೆಯನ್ನು ನಿನ್ನ ಕಾಲಡಿಗೆ ಅರ್ಪಿಸುತ್ತೇನೆ. ವೀರ ಶೂರ ಧೀರ ಹಾಲುಮತದ ನಂದಗಡದ ಹುಲಿ ಎಂದೇ. ಖ್ಯಾತರರಾದ ಸಂಗೊಳ್ಳಿ ರಾಯಣ್ಣ ಜನ್ಮ ಜಯಂತಿಯ ಶುಭಾಶಯಗಳು. ಜೈ ರಾಯಣ್ಣ.

ಬ್ರಿಟಿಷರ ದಾಸ್ಯದಿಂದ ಕಿತ್ತೂರನ್ನು ಸ್ವತಂತ್ರವಾಗಿಸುತ್ತೇನೆ. ತಾಯಿ ಇಲ್ಲದಿದ್ದರೆ ಅವರ 100 ತಲೆಯ ಕಡಿದು ನಿನ್ನ ಪಾದಕ್ಕೆ ಸಮರ್ಪಿಸುತ್ತೇನೆ. ನೂರು ತಲೆ ಸಿಗಲಿಲ್ಲವಾದರೆ 99 ತಲೆಯ ಜೊತೆ ನನ್ನ ಒಂದು ತಲೆ ಸೇರಿಸಿ ನಿನಗೆ 100 ತಲೆಯನ್ನು ನಿನ್ನ ಕಾಲಡಿಗೆ ಅರ್ಪಿಸುತ್ತೇನೆ. ವೀರ ಶೂರ ಧೀರ ಹಾಲುಮತದ ನಂದಗಡದ ಹುಲಿ ಎಂದೇ. ಖ್ಯಾತರರಾದ ಸಂಗೊಳ್ಳಿ ರಾಯಣ್ಣ ಜನ್ಮ ಜಯಂತಿಯ ಶುಭಾಶಯಗಳು. ಜೈ ರಾಯಣ್ಣ. #ಕಾವ್ಯ

3bda17a962fe232d37877bd2ccb1e349

ರಾಜೇಂದ್ರ ಈಳಗೇರ.

ಅವಳೆಂದರೆ....💕
ಸೋತ ಮನಸ್ಸಿನ ಸಂಭಾಷಣೆ
ಒಲವೇ ಅವಳ ಅನುಕರಣೆ
ಅವಳಿದ್ದರೆ ಮನಸ್ಸಿಗಿಲ್ಲ ಬವಣೆ
ಅವಳ ಮಾತೇ ದೇವರಾಣೆ
ಅವಳ್ಯಾವೂರ ಚೆಲುವೆನೋ
ನಿಜಕ್ಕೂ ನಾಕಾಣೆ....💕
#ಕಾಡುವಬೆಡಗಿ❤ 
ಮುಗ್ದ ಹುಡುಗ

©ರಾಜೇಂದ್ರ ಈಳಗೇರ.
  ಲವ್ ಗುರು
3bda17a962fe232d37877bd2ccb1e349

ರಾಜೇಂದ್ರ ಈಳಗೇರ.

ಮನದ ಮೂಲೆಯಲಿ ಬೆಚ್ಚಗೆ 
ಮಲಗಿದ್ದ ನೆನಪೊಂದು ಹೊರಬಂದಿದೆ.
ನಗೆಯ ಕಾರಾಂಜಿಯಲಿ ಖುಷಿಯಿಂದ ಕುಣಿದಿದ್ದ ಕ್ಷಣಗಳಿಗೆ ಗುರುತಾಗಿದೆ.
ಅಳುವ ಅಲೆಗಳಲಿ ನಿರಾಶೆಯಲ್ಲಿ 
ತುಂಬಿದ್ದ ಕಡಲಿಂದ ಹೊರತಂದಿದೆ ಮೌನದ ಪದಗಳಲಿ ಅರ್ಥವನು ಹುಡುಕಿದ್ದ ಭಾವಗಳ ಕನ್ನಡಿಯಾಗಿದೆ ಬಾಳಿನ ಹಾದಿಯಲಿ ಜೊತೆಗೂಡಿ ನಡೆದಿದ್ದ ಸ್ನೇಹ ಇಂದಿಗೂ ಹಸಿರಾಗಿದೆ.

©ರಾಜೇಂದ್ರ ಈಳಗೇರ.
  Friendship day

Friendship day #ಶಾಯರಿ

loader
Home
Explore
Events
Notification
Profile