Nojoto: Largest Storytelling Platform
samikshaphayde9305
  • 65Stories
  • 30Followers
  • 440Love
    5.4KViews

samiksha phayde

  • Popular
  • Latest
  • Repost
  • Video
8ba0e29e0a2c86d0a184afd78e1107b5

samiksha phayde

*ಸಂಬಂಧವಿಲ್ಲದ ಸಂಬಂಧಿ*
*ಸ್ನೇಹಬಂಧ*ಕ್ಕೆ ಇಲ್ಲ ವಯಸ್ಸಿನ ಪರಿಧಿ
ಬಡವಬಲ್ಲಿದ ಶ್ರೀಮಂತ ಭೇದವಿಲ್ಲದ  ತೆರದಿ 
ಒಬ್ಬರಿಗೊಬ್ಬರಾಗುತ ಹರುಷಪಡುವ ಸಮ್ಮಾನದಿ
ಹಾಡಿ ನಲಿಯೋಣ ನಾಚುವಂತೆ ಅಗಾಧ ಶರಧಿ 

ನಾನು ನನ್ನದು ಸುಳ್ಳು ಅಹಂ ಬದಿಗಿರಿಸಿ ಮನದಿ 
ಭಾವನೆಗಳ ಮಿಳಿತ ಸರಿಸುತ ಬೇಗುದಿ
ತಾರತಮ್ಯ ಲಜ್ಜೆ ಗಿಜ್ಜೆ ಮೀರಿದ ಭಾವದಿ
ಸಲಿಗೆಯ ಸೆಳೆತ ಸ್ಥಿರ ಗೆಳೆತನಕ್ಕೆ ಬುನಾದಿ


ಪರಸ್ಪರ ಮಿಡಿಯುವ ಹೃದಯ ಸುಖ ದುಃಖದಿ
ಸಮಾಧಾನದ ಸೆಲೆ ಆತ್ಮಸ್ಥೈರ್ಯದ ನಿಧಿ
ಪ್ರತಿ ಹೆಜ್ಜೆಗೂ ಸ್ಪೂರ್ತಿ ತುಂಬುವ ಸನ್ನಿಧಿ 
ಒಬ್ಬರಿಗೊಬ್ಬರು ಸಂಬಂಧವಿಲ್ಲದ ಸಂಬಂಧಿ

©samiksha phayde #FriendshipDay
8ba0e29e0a2c86d0a184afd78e1107b5

samiksha phayde

ಬಂಧಗಳ ಬೆಸುಗೆ

ಹೆಣ್ಣು ಗಂಡಿನ ದಾಂಪತ್ಯದ ಬೆಸುಗೆ
ಎರಡು ಕುಟುಂಬಗಳ ಬೆಸುಗೆ
ಪರಿವಾರಗಳ ಸಮ್ಮಿಲನ ಈ ಬೆಸುಗೆ
ಸಂಬಂಧಗಳ ವರ್ಧಕ ಈ ಸುಂದರ ಬೆಸುಗೆ

ಮಗಳಿಂದ ಸೊಸೆ ಮಗನಿಂದ ಅಳಿಯ
ನಾದಿನಿ ಮೈದುನ ಮಾವ ಅತ್ತೆಯ
ಭಾವ ಮೈದನ ಪ್ರೀತಿಯ ಪಡೆಯುವ
ಸಿಹಿ ಸಿಂಚನ ಈ ಪವಿತ್ರ ಬೆಸುಗೆ

ಗಂಡನಿಗೆ ಪ್ರೀತಿಯ ಸತಿಯಾಗಿ
ಅಚ್ಚುಮೆಚ್ಚಿನ ಗೆಳತಿಯಾಗಿ
ಮನೆಯ ಸಂತೋಷದ ಚಿಲುಮೆಯಾಗಿ
ಮಮತೆಯ ಒಡನಾಡಿಯಾಗೋ ಬೆಸುಗೆ

ಹೊಸ ಸಂಬಂಧಗಳ ಮೇಳೈಸಿ
ಇಷ್ಟುದಿನ ಒಡನಾಡಿದವರ ಸಂಬಾಳಿಸಿ
ಎಲ್ಲರ ಇಷ್ಟ ಕಷ್ಟ ತಿಳಿದು ಒಲುಮೆಯಿಂದ ವರ್ತಿಸಿ 
ಜೀವನ ಸಾರ್ಥಕ ಮಾಡುವುದೇ *ಬಂಧಗಳ ಬೆಸುಗೆ*

©samiksha phayde
8ba0e29e0a2c86d0a184afd78e1107b5

samiksha phayde

ಗೆಳೆತನದ ಈ ಸವಿಯು

ಬಣ್ಣಿಸಲದಳವು

©samiksha phayde
8ba0e29e0a2c86d0a184afd78e1107b5

samiksha phayde

ಗೆಳೆತನದ ಈ ಸವಿಯು

ಬಣ್ಣಿಸಲದಳವು

©samiksha phayde
8ba0e29e0a2c86d0a184afd78e1107b5

samiksha phayde

ಗೆಳೆತನದ ಈ ಸವಿಯು

ಬಣ್ಣಿಸಲದಳವು

©samiksha phayde #friends
8ba0e29e0a2c86d0a184afd78e1107b5

samiksha phayde

ಹೊಸ ದಿನ ಹೊಸತನ
ಅರಳಲಿ ತನು ಮನ
ಪಸರಿಸಲಿ ಹೂಬನ
ಸುವಾಸನೆಯ ಸಿಂಚನ 
ಎಲ್ಲರಿಗೂ ಶುಭ ದಿನ

©samiksha phayde #SunSet
8ba0e29e0a2c86d0a184afd78e1107b5

samiksha phayde

ಹೊಸ ದಿನ ಹೊಸತನ
ಅರಳಲಿ ತನು ಮನ
ಪಸರಿಸಲಿ ಹೂಬನ
ಸುವಾಸನೆಯ ಸಿಂಚನ 
ಎಲ್ಲರಿಗೂ ಶುಭ ದಿನ

©samiksha phayde #SunSet
8ba0e29e0a2c86d0a184afd78e1107b5

samiksha phayde

ಚುಮು ಚುಮು ಚಳಿ
ಹನಿ ಹನಿ ಮಂಜು
ಎಳೆ ಎಳೆ ಬಿಸಿಲು
ಚಿಲಿ ಪಿಲಿ ಹಕ್ಕಿಯುಲಿ

ರಮಣೀಯ ಮುಂಜಾವು
ಭಾವಪೂರ್ಣ ಆತುರತೆ
ಎಲ್ಲವೂ ಹಿತ ಹಿತವಾಗಿ
ಹೊಸ ದಿನಕ್ಕೆ ಪೂರಕವಾಗಿ
ಬಂದಿದೆ ಶುಭ ಮುಂಜಾವು

©samiksha phayde #Health
8ba0e29e0a2c86d0a184afd78e1107b5

samiksha phayde

*ವೇದಾವಾಕ್ಯ* 
ಯೋಗಾಭ್ಯಾಸದಿಂದ ಅರೋಗ್ಯ
ಸುಳ್ಳಲ್ಲ ಹಿರಿಯರ ನುಡಿ
ಮಾಡಬೇಕು ಅನುಕರಣೆ
ಅನುಭವದ ಸಾರಗಳ
ಪರಿಶುದ್ಧ ಮನಸಿನಿಂದ
ಅನುದಿನ ಅನವರತ 
ವೇದವಾಕ್ಯ ಎಂದು ತಿಳಿದು...

©samiksha phayde #waiting
8ba0e29e0a2c86d0a184afd78e1107b5

samiksha phayde

ನೋಡು ಕಾರ್ಮುಗಿಲ ಹಂದರ
ಅದರೆಡೆಯಿಂದ ಇಣುಕುವ ತವಕ
ಬೆಳಕು ಚೆಲ್ಲಿ ಎಲ್ಲರ ನಗಿಸುವ ಆತುರ
ಅಲ್ಲೊಮ್ಮೆ ಇಲ್ಲೊಮ್ಮೆ ರಶ್ಮಿ ತೂರಿಸುವ ಭಾವುಕ
ಅವನೇ ನಮ್ಮ ದಿವಾಕರ ಸೂರ್ಯ
ನಮೋ ನಿನಗೆ ಸೃಷ್ಟಿ ಪಾಲಕ ಜೀವದಾತ...

©samiksha phayde #dawnn
loader
Home
Explore
Events
Notification
Profile