Nojoto: Largest Storytelling Platform
nojotouser6176363282
  • 1Stories
  • 15Followers
  • 10Love
    0Views

Sj.Sathish

writer at film industry

https://www.facebook.com/sathish.jitu

  • Popular
  • Latest
  • Video
ca4b03598e596a3373b160e3db09f0da

Sj.Sathish

एक तस्वीर है मेरे पास जो   ಹರಡುವ ಸುವಾಸನೆಯ ಆಧಾರಿಸಿಯೇ ಹೂಗಳು ಗೌರವಿಸಲ್ಪಡುತ್ತವೆ. ಆಡುವ ಮಾತುಗಳನ್ನಾಧರಿಸಿಯೇ ಮನುಷ್ಯರಾದ ನಾವುಗಳು ಗೌರವಿಸಲ್ಪಡುತ್ತೇವೆ.

ಇಲ್ಲಿ ನೀವಾಡುವ ಮಾತು  ಸರಿಯಾಗಿದ್ದರೆ,ಮನುಷತ್ವ(ನಿಜವಾಗಿ)ವುಳ್ಳ ಪ್ರತಿಯೊಬ್ಬನೂ ಕೂಡ ನಿಮ್ಮ ಮಾತುಗಳನ್ನೆಲ್ಲಾ ಗೌರವಿಸಿ, ಬೊಕ್ಕಸವೆಂದು ಯೋಚಿಸಿ,ನಿಧಿ-ನಿಕ್ಷೇಪದಂತೆ ಪರಿಗಣಿಸಿ, ಮನದ ಬೊಗಸೆಯೊಳಗೆ ಶೇಖರಿಸಿ,ಜೀವನದ ಅವಶ್ಯಕ ವೇಳೆಗಳಲ್ಲಿ ಅದನ್ನು ಉಪಯೋಗಿಸುವುದರ ಮೂಲಕ ನಿಮಗೂ ನಿಮ್ಮ ಮಾತುಗಳಿಗೂ ಗೌರವ ಕೊಡುವವನಾಗುತ್ತಾನೆ.  

ಕೆಲವರಿಗೆ ಸಂಪಿಗೆಯ ಸುವಾಸನೆ ಇಷ್ಟವಾದರೆ,ಕೆಲವರಿಗೂ ಸೇವಂತಿಗೆಯ ಸುವಾಸನೆ ಇಷ್ಟ,ಇನ್ನೂ ಕೆಲವರಿಗೆ ಮಲ್ಲಿಗೆಯ ಸುವಾಸನೆ ಬಲು ಇಷ್ಟ. ಇದರಲ್ಲೇ ಒಬ್ಬರಿಗೆ ಇಷ್ಟವಾದದ್ದು ಮತ್ತೊಬ್ಬರಿಗೆ ಇಷ್ಟವಿಲ್ಲದಿರುವಂತಿದೆ ಎಂಬುದಾದರೆ,ನಾವಾಡುವ ಮಾತುಗಳು ಎಲ್ಲರಿಗೂ ಇಷ್ಟವಾಗದಿರುವುದು ಸಹಜವಲ್ಲವೇ!?

ನೆನಪಿರಲಿ: ಹೂಗಳಲ್ಲಿ ಆ ಸುವಾಸನೆ ಬೀರುವ ಅಂಶವಿರುವವರೆಗೂ ಖಂಡಿತ  ಯಾರೊಬ್ಬರಿಗಾದರೂ ಅದು ನೆಚ್ಚಿನದೆ ಆಗಿರುತ್ತದೆ. ಅದೇ ಆ ಸುವಾಸನೆ ಇಲ್ಲದೆ ಹೋಗಿದ್ದರೆ,ಅವುಗಳ್ಯಾವುದನ್ನು ಯಾರೂ ಮೂಸಿಯೂ ನೋಡುತ್ತಿರಲಿಲ್ಲ. ಹಾಗೆಯೇ,ನಿಮ್ಮ ಮಾತುಗಳನ್ನು ಇಲ್ಲಿ ಪ್ರತಿಯೊಬ್ಬರೂ ಇಷ್ಟಪಡಬೇಕೆಂಬುದೇನಿಲ್ಲ,ಕ್ರಮೇಣ ಅದ ಇಷ್ಟಪಡುವವರಿಗಾದರೂ ಅದನ್ನು ಸ್ವೀಕರಿಸುವಂತೆ ಪ್ರೋತ್ಸಾಹಿಸುವ ಕೆಲ ಅಂಶ(ಸುವಾಸನೆ)ಗಳು ಅದರಲ್ಲಿ ಅಡಗಿರಲಿ.

ಎಚ್ಚರದಿಂದಿರಿ;ನಿಮ್ಮ ಮಾತುಗಳನ್ನು ಎಲ್ಲರೂ ಸ್ವೀಕರಿಸಬೇಕೆಂದು ಅಥವಾ ಎಲ್ಲರಿಗೂ ಅವುಗಳು  ಇಷ್ಟವಾಗಬೇಕೆಂದು ನೀವಾಡುವ ಯಾವ ಮಾತುಗಳಲ್ಲಿಯೂ ಸುಳ್ಳಾಗಿ ನಟಿಸುವ  ಪ್ರಯತ್ನಕ್ಕಿಳಿಯಬೇಡಿ. ಸುಳ್ಳು ಪ್ರಯತ್ನ ಸತತ ನಿಲ್ಲೋಲ್ಲಾ. ಒಂದಲ್ಲಾ ಒಂದು ದಿನ ಸೋತು ಬೀಳುತ್ತೇ. ಹಾಗಾಗಿ, ನ್ಯಾಯ-ನೀತಿ- ಗೌರವ-ಸತ್ಯತೆ- ಸೌಮ್ಯತೆಗಳನ್ನಾ ನಿಮ್ಮ ಮಾತುಗಳಲ್ಲಿ ಬಿಡದೆ ಪಾಲಿಸಿ,ಅದು ಸ್ವಲ್ಪ ಕಷ್ಟದ ಕೆಲಸವೇ. ಆದರೆ, ಕಷ್ಟಪಡದೆ ಇಲ್ಲಿ ಯಾರಿಗೂ ಗೌರವ ಸ್ಥಾನ ದಕ್ಕುವುದಿಲ್ಲ. ಒಂದು ಪಕ್ಷ ಬೂಟಾಟಿಕೆ ಮಾಡಿ ಅದನ್ನು ದಕ್ಕಿಸಿಕೊಂಡರೂ ಸಹ, ಆ ಗೌರವಕ್ಕೆ ಅರ್ಹತೆ ಇರಲ್ಲ. 

ಸರಿಯಾಗಿ ಮಾತನಾಡಲು ಪ್ರಾರಂಭಿಸಿದರೆ,ಇಲ್ಲಿ ನಿಮ್ಮ ಮಾತನ್ನು ಯಾರೂ ಒಪ್ಪಿಕೊಳ್ಳುವುದೇ ಇಲ್ಲವೆಂಬ ಕುಂಟು ನೆಪ ಹೇಳಿ ನನ್ನ ಮಾತನ್ನು ಇಲ್ಲಿಗೆ ಮುಗಿಸಿಬಿಡಬೇಡಿ. ಈ ಪ್ರಪಂಚದಲ್ಲಿ ಮೋಸದ-ವಂಚನೆಯ-ದ್ರೋಹದ-ಸುಳ್ಳಿನ ಮಾತುಗಳೇ ತುಂಬಿರಬಹುದು ನಿಜ, ಆದರೆ ಅವುಗಳು ಸತತವಾಗಿ ಗೆಲ್ಲುವ ಸಾಮರ್ಥ್ಯವುಳ್ಳವುಗಳಲ್ಲಾ,ಒಂದಲ್ಲಾ ಒಂದು ದಿನ ಸರಿಯಾಗಿರುವವನ ಮುಂದೆ ಸೋತು ತಲೆಬಾಗುವಂತವುಗಳು. ನೀವೇ ತೀರ್ಮಾನಿಸಿ ನೀವು ಸೋಲುವವರಾಗ ಬಯಸುವಿರೋ ಅಥವಾ ಗೆಲ್ಲುವವರಾಗ ಬಯಸುವಿರೋ!?

©Sj Sathish ನಮ್ಮ ಮಾತು!  

#Life #Life_experience #Life_changing #life_lession 
#kanndaquotes #kannada #kannadawriter #kannadainspirational #kannada


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile