Find the Latest Status about kannada love poem letters from top creators only on Nojoto App. Also find trending photos & videos about, kannada love poem letters.
krupa
ಸಮುದ್ರದ ನಟ್ಟ ನಡುವೆ ದಿಕ್ಕೇ ತೋಚದೆ ಕೆಂಗೆಟ್ಟು ನಾ ನಿಂದೆ ನನ್ನ ಅರಸಿ ನೀ ಬಂದೆ ನಿನ್ನ ಕಣ್ಣಲ್ಲಿರುವ ಮಂದಹಾಸ ತನ್ನದಿರುವುದು ನನ್ನಲ್ಲಿ ಉಲ್ಲಾಸ ನನ್ನೊಟ್ಟಿಗೆ ನೀ ಇದ್ದಾಗ ಅಗದು ಎಂದಿಗೂ ಆಯಾಸ ಎದೆಯಾಳದಲ್ಲಿರುವ ನಿನ್ನ ಪ್ರೀತಿಗೆ ಅರಳುವೆ ನಾ ಹೂವಿನ ರೀತಿ ನೀನೊಂದು ಅದ್ಭುತ ಪ್ರಕೃತಿ ಅಮ್ಮನಂತೆ ನೀಡುವೆ ತುತ್ತು ಇನಿಯನಂತೆ ಸಲಿಗೆಯಿಂದ ಕೊಡುವ ಮುತ್ತು ಎಲ್ಲಕ್ಕೂ ತಲೆ ಬಾಗಿರುವೆ ನಾ ಸೋತು ನನ್ನ ಧ್ವನಿಯಲ್ಲಿರುವ ಸಂಗಿತಾ ಮುಖದ ಮೇಲಿನ ನಗುವಿನ ಸಂಕೇತಾ ನೀನೇ, ನನ್ನ ಒಲವಿನ ತೋಟದಲ್ಲಿ ಅರಳಿದ ಪಾರಿಜಾತ ಬಾಹು ಬಂಧನದಿಂದ ನೀಡಿದಾಗ ಚುಂಬನ ಆಗ, ಕಂಪಿಸುವುದು ನನ್ನ ಮೈ ಮನ ನಿನಗಾಗಿ ಬಡಿವುದು ನನ್ನ ಹೃದಯ ಪ್ರತಿ ಕ್ಷಣ ಭಾವನೆಯೇ ಇಲ್ಲದ ನನಗೆ ಭಾವ ತುಂಬಿ ಭಾವಜೀವಿಯಾಗಿಸಿರುವೇ ನಾ ಬರೆಯುವ ಪ್ರತಿ ಪದಗಳಿಗು ಸ್ಫೂರ್ತಿಯಾಗಿರುವೆ ಇಡೀ ಜಗತ್ತಿಗೆ ನೀ ಒಬ್ಬ ವ್ಯಕ್ತಿಯಾಗಿರುವೆ ಆದರೆ ನೀನೇ ನನ್ನ ಜಗತ್ತಾಗಿರುವೆ #poem#love #kannada
poemlove kannada
read morekrupa
ಮೊದಲ ಭಾರಿ ನಿನ್ನ ಕಂಡಾಗ ನನ್ನಲ್ಲಿ ಹುಟ್ಟಿದ ಭಾವಕ್ಕೆ ಏನೆಂದು ಹೆಸರಿಡಲಿ ಗೆಳೆಯ ಪ್ರೀತಿ ಎನ್ನಲೋ?ಸ್ನೇಹ ಎನ್ನಲೋ? ನಿನ್ನ ನೆನಪಿಸಿ ಕೊಂಡಾಗ ಮುಖದ ಮೇಲೆ ಮುಡುವ ಕಿರು ನಗೆಗೆ ಏನೆಂದು ಹೆಸರಿಡಲಿ ಗೆಳೆಯ ಪ್ರೀತಿಯೋ? ಸ್ನೇಹವೋ? ನಿನಗಾಗಿ ಬರೆಯುತ್ತಿರುವಾಗ ಕವನ ಹಾದಿ ತಪ್ಪಿಸುವುದು ನಿನ್ನ ನಯನ ಹಾದಿ ತಪ್ಪುತ್ತಿರುವ ಮನಕ್ಕೆ ಎನೆಂದು ಹೆಸರಿಡಲಿ ಗೆಳೆಯ ಪ್ರೀತಿಯೋ?ಸ್ನೇಹವೋ? ನೀ ಪರಿಶ್ಧು ಸಾಹಿತ್ಯವಾದರೆ ಅದನ್ನು ತುಂಬುವ ಪದಗಳು ನಾನಾಗುವೆ ಭಾವ ತುಂಬಿದ ಪದಗಳಿಗೆ ಏನೆಂದು ಹೆಸರಿಡಲಿ ಗಳೆಯ ಪ್ರೀತಿಯೋ?ಸ್ನೇಹವೋ? ನೀ ಚಂದದ ಗುಲಾಬಿಯಾದರೆ ನಿನ್ನ ರಕ್ಷಸಿಸುವ ಮುಳ್ಳು ನಾನಾಗುವೆ ಈ ಧೈರ್ಯಕ್ಕೆ ಏನೆಂದು ಹೆಸರಿಡಲಿ ಗಳೆಯ ಪ್ರೀತಿಯೋ? ಸ್ನೇಹವೋ? ನೀ ದುಃಖದಲ್ಲಿ ಇದ್ದಾಗ ಒಮ್ಮೆ ಬಿಗಿದಪ್ಪಿ ಸಂತೈಸುವೆ ಈ ಮಮತೆಗೆ ಏನೆಂದು ಹೆಸರಿಡಲಿ ಗಳೆಯ ಪ್ರೀತಿಯೋ?ಸ್ನೇಹವೋ? ಪ್ರೀತಿಯಿಂದ ಹುಟ್ಟಿದ ಸ್ನೇಹವೆನ್ನಲೋ ಅಥವಾ ಸ್ನೇಹದಿಂದ ಹುಟ್ಟಿದ ಪ್ರೀತಿಯನ್ನಲೋ ಏನಾದರು ಸರಿ ನನಗೆ ನೀನೇ ಬೇಕು. #kannada poem #love
Rakesh Aradhya
ನಿನ್ನ ಕಣ್ಣಂಚಿನ ನೋಟದಲ್ಲಿ ತುಟಿಯಂಚಿನ ಕಿರುನಗೆಯಲ್ಲಿ ಕಿರುಬೆರಳ ಸ್ಪರ್ಶದಲ್ಲಿ ಬಿಸಿ ಉಸಿರ ಶಾಖದಲ್ಲಿ ಹೃದಯ ತುಂಬಿದ ಪ್ರೀತಿಯಲ್ಲಿ ಆ ಬೆಚ್ಚನೆಯ ಅಪ್ಪುಗೆಯಲ್ಲಿ ಬಂಧಿಯಾಗಿರುವ ಜೀವಾವಧಿ ಕಳ್ಳ ನಾನು. ಕಳ್ಳನೇಕೆಂದರೆ ನಿನ್ನ ಮನಸ ಕದ್ದವನಲ್ಲವೇ... ©Rakesh Aradhya #jail #love #life #kannada #poem
venu g
ನೆನಪಿನ ಹುಡುಗಿಯೇ ಅದೇನು ಮಾಡಿದೇ ನನ್ನ ಹೃದಯದಲ್ಲಿ ಪ್ರೀತಿಯ ಒತ್ತಿಗೆ ಓದಲು ನೀಡಿ ಮರೆಯಾಗಿ ಹೋಗಿಹೆ... ಕಡಲ ಅಲೆಯಲ್ಲಿ ನಿಲ್ಲಿಸಿ ಒಬ್ಬಂಟಿ ಮಾಡಿದೆ ಅಲ್ಲಿಯೂ ಮುಳುಗದೆ ಮೇಲೆದ್ದು ಬಂದಿಹೆ ಇದೆತಕೋ ಈ ಯೋಚನೆ ನಿನ್ನ ಹೆಸರೇ ಅಲಾಪನೆ 100 ವರಶುವು ಬದುಕಲು ಇಷ್ಟ ಇಲ್ಲವೇ ನೀ ಇರದೇ ಪ್ರತಿ ಘಳಿಗೆ ಶವದಂತಿರುವೆ ಅಲೆಮಾರಿ ನಾನೀನಗ ಅಲೆದಾಟ ಎಲ್ಲಿಗೆ ತಿಳಿಯದೇ ಹೋಗಿದೆ .... ನಾ ಕಂಡ ಕನಸಲೂ ಕಾರ್ಮೋಡ ಕವಿದಿದೆ ಬರಸಿಡಿಲು ಮೂಡಿದೆ ನೀ ನನ್ನ ಮೇಲೆ ಮಾಡು ಆಪಾದನೆ ನಾ ಹೋದ ಬಳಿಕ ಅಳದಿರು ನೀ ಸುಮ್ಮನೇ.... ಈ ಜೀವ ಕೂಡ ನಿನದೇ ಈ ಭಾವ ಕೂಡ ನಿನದೇ ನನ್ನ ಅಂತರಂಗ ನಿನದೇ ನನ್ನದೇನಿದೆ..... ನೆನಪಿನ ಹುಡುಗಿಯೇ..... ©venu g #Love #kannada #poem #kannadaquotes #standAlone
#Love #kannada #poem #kannadaquotes #standAlone
read more