Find the Best ವಿಜಯ್_ಗಝಲ್ Shayari, Status, Quotes from top creators only on Gokahani App. Also find trending photos & videos about
ವಿಜಯ್
ಗಝಲ್ ಅಕ್ಕರೆಯಿಂದ ಅಡಿಯಿರಿಸಿದ್ದ ಅಕ್ಷರದ ಮಹಲು ಕುಸಿಯುತ್ತಿದೆ ಭಾವನೆಗಳಿಗೆ ಬಣ್ಣಹಚ್ಚಿದ ಬರಹದ ಹೊನಲು ಬತ್ತಿಹೋಗುತ್ತಿದೆ ಕಲೆತು ಕಲಿತು ಬಯಸಿ ಬರೆಯುತಲಿದ್ದೆ ಬಹು ದಿನಗಳಿಂದಲೂ ಪುಟವಿಲ್ಲವೆಂದು ಪ್ರತಿಯೊಂದು ಪದವೂ ಬಲು ಹಠಮಾಡುತ್ತಿದೆ ಬರೆವ ತುಡಿತಕೆ ಮಿಡಿದ ವೇದಿಕೆ ಉಳಿಸಿ ಹೋಗುತ್ತಿದೆ ವೇದನೆ ತೆರೆದು ಕದವನು ತೊರೆದು ಹೋಗಿರೆಂದೆನಲು ಮನಕರಗುತ್ತಿದೆ ಸೇರಿ ಹೋಗುತ್ತಿದೆ ಅರಿವಿನ ಅರಮನೆಯು ನೆನಪಿನ ಪುಟವನ್ನು ಮನ ಸೂರೆಗೊಳ್ಳುತಿದ್ದ ಬರಹಗಳ ಘಮಲು ಮರೆಯಾಗುತ್ತಿದೆ ಸಾಗುತ್ತಿರಿ ಕವಿ ಹೃದಯಗಳೆಲ್ಲಾ ಸಾಹಿತ್ಯದ 'ವಿಜಯ' ಪಥದಲ್ಲಿ ವಿದಾಯ ಗೀತೆಯನು ಬರೆದು ನಡೆದು ಬಿಡಲು ನೋವಾಗುತ್ತಿದೆ ಹೀಗೊಂದು ಗಝಲ್ ಬರೆಯಬೇಕಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಬಿಡುವಾದಾಗ ಬಂದು ಓದಿ ಖುಷಿಪಡುವ ಹಲವು ಬರಹಗಳು ಇನ್ಮೇಲೆ ಕಾಣಿಸುವುದಿಲ್ಲ ಎನ್ನುವ ಬೇಸರವಿದೆ. ಬರಹದ ಚೌಕಟ್ಟಿನಲ್ಲೇ ಆಗಿದ್ದರೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಹಲವರನ್ನು ಮಿಸ್ ಮಾಡಿಕೊಳ್ಳುತ್ತೇನೆ.🤐 ಯಾವುದೇ ಕಾರಣಕ್ಕೂ ನಿಮ್ಮ ಸಾಹಿತ್ಯಾಸಕ್ತಿಗೆ ವಿದಾಯ ಹೇಳಬೇಡಿ. ಆತ್ಮತೃಪ್ತಿಗಾಗಿ, ನೆಮ್ಮದಿಗಾಗಿಯಾದ್ರೂ ಯಾವುದಾದ್ರೂ ವೇದಿಕೆಯಲ್ಲಿ ಬರೆಯುತ್ತಿರಿ. ವೈಕ್ಯೂ ನಲ್ಲಿ ನನ್ನಿಂದ ಯಾರಿಗಾದ್ರೂ ಬೇಸರವಾಗಿದ್ದರೆ ಕ್ಷಮೆಯಿರಲಿ..🙏🏻
ಹೀಗೊಂದು ಗಝಲ್ ಬರೆಯಬೇಕಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಬಿಡುವಾದಾಗ ಬಂದು ಓದಿ ಖುಷಿಪಡುವ ಹಲವು ಬರಹಗಳು ಇನ್ಮೇಲೆ ಕಾಣಿಸುವುದಿಲ್ಲ ಎನ್ನುವ ಬೇಸರವಿದೆ. ಬರಹದ ಚೌಕಟ್ಟಿನಲ್ಲೇ ಆಗಿದ್ದರೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಹಲವರನ್ನು ಮಿಸ್ ಮಾಡಿಕೊಳ್ಳುತ್ತೇನೆ.🤐 ಯಾವುದೇ ಕಾರಣಕ್ಕೂ ನಿಮ್ಮ ಸಾಹಿತ್ಯಾಸಕ್ತಿಗೆ ವಿದಾಯ ಹೇಳಬೇಡಿ. ಆತ್ಮತೃಪ್ತಿಗಾಗಿ, ನೆಮ್ಮದಿಗಾಗಿಯಾದ್ರೂ ಯಾವುದಾದ್ರೂ ವೇದಿಕೆಯಲ್ಲಿ ಬರೆಯುತ್ತಿರಿ. ವೈಕ್ಯೂ ನಲ್ಲಿ ನನ್ನಿಂದ ಯಾರಿಗಾದ್ರೂ ಬೇಸರವಾಗಿದ್ದರೆ ಕ್ಷಮೆಯಿರಲಿ..🙏🏻
read moreವಿಜಯ್
ತರಹೀ ಗಝಲ್: ನಯನ ಅವರ ಊಲಾ ಮಿಸ್ರ °°°°°°°°°°°°°°°°°°°°°°°°°°°°°°°°°°°°°°°°°°° ಅವರಿವರನ್ನು ಜರೆಯುತ್ತಾ ನಾಳೆಗಳ ಭವ್ಯ ಸಾರವನ್ನು ಹಿಂಡುತ್ತಿದ್ದೇನೆ ಅಗಮ್ಯವನ್ನು ನೆನೆಯುತ್ತಾ ಈ ಕ್ಷಣದ ನಲಿವನ್ನು ಕಳೆದುಕೊಳ್ಳುತ್ತಿದ್ದೇನೆ ಅಲಕ್ಷಿಸುತ ಮುನ್ನಡೆಯಬೇಕು ಅನ್ಯರ ಲೋಪದೋಷಗಳನ್ನು ನಾವಿಲ್ಲಿ ಅರಿವಿರದ ವ್ಯಾಜ್ಯಗಳ ಕಟಕಟೆಯಲ್ಲಿರಿಸಿ ಕಾಲವನ್ನು ವ್ಯಯಿಸುತ್ತಿದ್ದೇನೆ ಅಂತರವನ್ನು ಬಯಸಿದವರ ಮನದಲ್ಲಿ ಆತ್ಮೀಯತೆಗೆಲ್ಲಿರುವುದು ಸ್ಥಾನ ಎಳೆದು ಮುಚ್ಚಿದ ಕದದ ಬಳಿ ಕುಳಿತು ಭವಿಷ್ಯವನ್ನು ನಿರ್ಲಕ್ಷಿಸುತ್ತಿದ್ದೇನೆ ಪ್ರಬುದ್ಧ ಮನದಲ್ಲಷ್ಟೇ ನಡೆಯುವುದು ನಿರ್ಲಿಪ್ತತೆಯಿಂದ ನಿದಿಧ್ಯಾಸನ ಪ್ರಕ್ಷುಬ್ಧತೆಯ ಪರಾಕಾಷ್ಠೆಯಲ್ಲಿ ತಪಿಸುತ ಚಿತ್ತಸ್ವಾಸ್ಥ್ಯವನ್ನು ಸುಡುತ್ತಿದ್ದೇನೆ ಉಡಿಯೊಳಗೆ ಇರಿಸಿದ ಇಂಗಳವದು ದಹಿಸದಿರುವುದೇ ಒಳಗೊಳಗೆ ಹುಚ್ಚು ಮನಸಿನ ಹೊಯ್ದಾಟದಲ್ಲಿ "ವಿಜಯ"ವನ್ನು ವರ್ಜಿಸುತ್ತಿದ್ದೇನೆ ತರಹೀ ಗಝಲ್: ನಯನ ಭಟ್ ಜಿ.ಎಸ್❣️ ಅವರ ಊಲಾ ಮಿಸ್ರ #ವಿಜಯ್_ಗಝಲ್ # 11 #ಗಝಲ್ #ಕನ್ನಡ_ಗಝಲ್ #ತರಹೀ_ಗಝಲ್ #kvprakashquotes
ತರಹೀ ಗಝಲ್: ನಯನ ಭಟ್ ಜಿ.ಎಸ್❣️ ಅವರ ಊಲಾ ಮಿಸ್ರ #ವಿಜಯ್_ಗಝಲ್ # 11 #ಗಝಲ್ #ಕನ್ನಡ_ಗಝಲ್ #ತರಹೀ_ಗಝಲ್ #kvprakashquotes
read moreವಿಜಯ್
ತರಹೀ ಗಝಲ್; ನಯನ ಅವರ ಊಲಾ ಮಿಸ್ರ ****************************** ಅಹರ್ನಿಶಿ ನಲುಗುತ್ತಿದೆ ಮುತ್ತಿನಂಥ ಸೊಲ್ಲು ಬದುಕಾಗುತಿದೆ ಮಾಯಾಬಜಾರ್ ಅಹೋರಾತ್ರಿ ಕದಡುತ್ತಿವೆ ಮುಗ್ದಹೃದಯಗಳು ಜಗವಾಗುತಿದೆ ಮಾಯಾಬಜಾರ್ ಮೃಷೆಯ ಮುಖವಾಡಗಳು ಬಿಕರಿಯಾಗುತಿವೆ ಭರ್ಜರಿಯಾಗಿ ರಾಜ ಪಥದಲ್ಲಿ ಮಡಿದ ಮನುಷ್ಯತ್ವದ ಗೋರಿಯ ಮೇಲೆ ಉದಯವಾಗುತಿದೆ ಮಾಯಾಬಜಾರ್ ಬಯಸಿ ಬಳಲದಿರು ಅನುನಿತ್ಯ ಭವ್ಯ ಭಾವಗಳನ್ನು ಅಸುನೀಗಿದ ಮನಸುಗಳಿಂದ ನೈತಿಕತೆಯ ಶವಯಾತ್ರೆಯಲಿ ಕುಣಿದಾಡಲು ನಡೆಯಾಗುತಿದೆ ಮಾಯಾಬಜಾರ್ ಕರುಳ ಬಳ್ಳಿಯ ನಂಟನು ಮರೆತು ಹೆತ್ತೊಡಲ ನೋಯಿಸಿ ನಗುವ ನರಾಧಮರು ಕರುಣೆಯು ಕಣ್ಮರೆಯಾಗಿ ಇಹದೊಳಗೆ ಸಂಬಂಧವಾಗುತಿದೆ ಮಾಯಾಬಜಾರ್ ಕಲುಷಿತಗೊಂಡ ಕನವರಿಕೆಗಳು ಎಡವುತ್ತಾ ಸಾಗುತ್ತಿವೆ 'ವಿಜಯ"ದ ಹಾದಿಯಲ್ಲಿ ಕಿತ್ತೊಗೆದ ಚಿತ್ತವೃತ್ತಿಯು ಬೆಂಬಿಡದೆ ಕಾಡಿ ಕುಣಿಕೆಯಾಗುತಿದೆ ಮಾಯಾಬಜಾರ್ ತರಹೀ ಗಝಲ್: ನಯನ ಭಟ್ ಜಿ.ಎಸ್❣️ಅವರ ಊಲಾ ಮಿಸ್ರ ನಮ್ಮಿಬ್ಬರಲ್ಲಿ ಇರುವ ಸಾಮ್ಯತೆ ಅಂದ್ರೆ ನನಗೂ ಹೊಸ ಹೊಸ ಪದಗಳನ್ನು ಹುಡುಕಿ ಜೋಡಿಸಬೇಕೆನ್ನುವ ಹುಚ್ಚು. ಅದೇ ಕಾರಣಕ್ಕೆ ನಿಮ್ಮ ಗಝಲ್ ನ ಭಾವವನ್ನು ನನ್ನ ಪ್ರೊಫೈಲ್ ನಲ್ಲಿ ಮುಂದುವರೆಸುವ ಒಂದು ಪುಟ್ಟ ಪ್ರಯತ್ನ ಮಾಡಿರುವೆ. ಪದಗಳ ಗಾಂಭೀರ್ಯ ಕಡಿಮೆಯಾಗಿದ್ದರೆ ಮನ್ನಿಸಿ ಆಯ್ತಾ...😊 #ವಿಜಯ್_ಗಝಲ್ # 10 #ಗಝಲ್ #ಕನ್ನಡ_ಗಝಲ್ #ತರಹೀ_ಗಝಲ್
ತರಹೀ ಗಝಲ್: ನಯನ ಭಟ್ ಜಿ.ಎಸ್❣️ಅವರ ಊಲಾ ಮಿಸ್ರ ನಮ್ಮಿಬ್ಬರಲ್ಲಿ ಇರುವ ಸಾಮ್ಯತೆ ಅಂದ್ರೆ ನನಗೂ ಹೊಸ ಹೊಸ ಪದಗಳನ್ನು ಹುಡುಕಿ ಜೋಡಿಸಬೇಕೆನ್ನುವ ಹುಚ್ಚು. ಅದೇ ಕಾರಣಕ್ಕೆ ನಿಮ್ಮ ಗಝಲ್ ನ ಭಾವವನ್ನು ನನ್ನ ಪ್ರೊಫೈಲ್ ನಲ್ಲಿ ಮುಂದುವರೆಸುವ ಒಂದು ಪುಟ್ಟ ಪ್ರಯತ್ನ ಮಾಡಿರುವೆ. ಪದಗಳ ಗಾಂಭೀರ್ಯ ಕಡಿಮೆಯಾಗಿದ್ದರೆ ಮನ್ನಿಸಿ ಆಯ್ತಾ...😊 #ವಿಜಯ್_ಗಝಲ್ # 10 #ಗಝಲ್ #ಕನ್ನಡ_ಗಝಲ್ #ತರಹೀ_ಗಝಲ್
read moreವಿಜಯ್
ಜುಲ್ ಕಾಫಿಯಾ ಗಝಲ್: ಗಝಲ್_ಜುಗಲ್ಬಂದಿ ************************************************* ಸದ್ಭಾವಗಳ ತುಂಬಿಟ್ಟ ಮಾತಲ್ಲಿ ಹೃದಯಗಳ ಗೆಲ್ಲುವುದು ಖಾತ್ರಿಯಾಗಿದೆ ಸ್ವಾರ್ಥಿಗಳ ಲೋಕದಲ್ಲಿ ಮುಗ್ದ ಮನಸ್ಸುಗಳ ಕದಡುವುದು ಖಾತ್ರಿಯಾಗಿದೆ ಸ್ಫುರಿಸುತಿದೆ ಮನದೊಳಗೆ ಅನುಕ್ಷಣ ನೂತನ ಕನಸುಗಳ ನಿರವದ್ಯ ಚಿಲುಮೆ ಉದರದ ಕ್ಷುಧೆಗೆ ಕೈಗೂಡದ ಬಯಕೆಗಳ ಹೋಮಿಸುವುದು ಖಾತ್ರಿಯಾಗಿದೆ ಬೆರಗು ಕಣ್ಗಳಿಗೆ ಸಡಗರವು ತೀರವಿಲ್ಲದ ಜ್ಞಾನ ಸಾಗರದ ಸ್ವಚ್ಚಂದ ವಿಹಾರ ಹರಕಲು ಜೇಬಿಂದ ಆಸರೆಯಿಲ್ಲದ ಆಸೆಗಳ ಬೀಳಿಸುವುದು ಖಾತ್ರಿಯಾಗಿದೆ ಮುರುಕಲು ಮನೆಯೆದುರು ಜಗದ ತಾಪಕೆ ನಲುಗಿದ ಹೂವುಗಳ ತೋರಣ ಮರಣವೂ ಕರುಣೆ ತೋರದಂತೆ ಜೀವಗಳ ಹಿಂಸಿಸುವುದು ಖಾತ್ರಿಯಾಗಿದೆ ಅಲೆಯುತಿವೆ ನಿರಂತರ ನಿಶ್ಯಕ್ತ ಕಾಲ್ಗಳು "ವಿಜಯ"ಪಥದ ಜಾಡು ಹಿಡಿದು ಅಗಮ್ಯವ ಸೇರುವ ಭ್ರಮೆಯಲ್ಲಿ ಕನಸುಗಳ ಕಮರಿಸುವುದು ಖಾತ್ರಿಯಾಗಿದೆ ಗಝಲ್_ಜುಗಲ್ಬಂದಿ *************** ಇದು ಕೂಡ ತರಹೀ ಗಝಲ್ ನ ಹಾಗೇನೇ. ಆದರೆ ಮೂಲ ಗಝಲ್ ನ "ಮಿಸ್ರ"ವನ್ನು ಇದರಲ್ಲಿ ಬಳಸಲಾಗುವುದಿಲ್ಲ. ಬದಲಿಗೆ ಒಬ್ಬರು ಬರೆದ ಗಝಲ್ ನ ಭಾವವನ್ನು ಅದೇ ಧಾಟಿಯಲ್ಲಿ ಮುಂದುವರೆಸಿಕೊಂಡು ಹೋಗಲಾಗುತ್ತದೆ. ಇದರಲ್ಲಿ ಬರಹಗಾರರು ಒಂದೇ "ರದೀಫ್" ನ್ನು ಬಳಕೆ ಮಾಡಬೇಕು, "ಕಾಫಿಯಾ"ಗಳು ಪುನರಾವರ್ತನೆಯಾಗಬಾರದು ಮತ್ತು "ರವಿ" ಒಂದೇ ಇರಬೇಕು. ಈ ಗಝಲ್ ನ ಇನ್ನೊಂದು ಭಾಗವನ್ನು ನಯನ ಭಟ್ ಜಿ.ಎಸ್❣️ ಅವರ ಪ್ರೊಫೈಲ್ ನಲ್ಲಿ ಓದಿ.
ಗಝಲ್_ಜುಗಲ್ಬಂದಿ *************** ಇದು ಕೂಡ ತರಹೀ ಗಝಲ್ ನ ಹಾಗೇನೇ. ಆದರೆ ಮೂಲ ಗಝಲ್ ನ "ಮಿಸ್ರ"ವನ್ನು ಇದರಲ್ಲಿ ಬಳಸಲಾಗುವುದಿಲ್ಲ. ಬದಲಿಗೆ ಒಬ್ಬರು ಬರೆದ ಗಝಲ್ ನ ಭಾವವನ್ನು ಅದೇ ಧಾಟಿಯಲ್ಲಿ ಮುಂದುವರೆಸಿಕೊಂಡು ಹೋಗಲಾಗುತ್ತದೆ. ಇದರಲ್ಲಿ ಬರಹಗಾರರು ಒಂದೇ "ರದೀಫ್" ನ್ನು ಬಳಕೆ ಮಾಡಬೇಕು, "ಕಾಫಿಯಾ"ಗಳು ಪುನರಾವರ್ತನೆಯಾಗಬಾರದು ಮತ್ತು "ರವಿ" ಒಂದೇ ಇರಬೇಕು. ಈ ಗಝಲ್ ನ ಇನ್ನೊಂದು ಭಾಗವನ್ನು ನಯನ ಭಟ್ ಜಿ.ಎಸ್❣️ ಅವರ ಪ್ರೊಫೈಲ್ ನಲ್ಲಿ ಓದಿ.
read moreವಿಜಯ್
ತರಹೀ ಗಝಲ್: ನಯನ ಅವರ ಊಲಾ ಮಿಸ್ರ ******************************* ಹೃದಯದೂರಲಿ ನೆನಪುಗಳ ನಂದಾದೀಪ ನಿಡುಸುಯ್ದ ಉಸಿರಿಗೆ ಯಾರು ಹೊಣೆ ತೆರೆದು ತೋರಿಸಿದ ನಿಷ್ಕಲ್ಮಶ ಪ್ರೀತಿಯ ಆಳವನರಿಯದ ನಿಲುವಿಗೆ ಯಾರು ಹೊಣೆ ಕಾಲ ಗರ್ಭದಲ್ಲಿ ಲೀನವಾಯಿತು ನೀನೆದೆಯೊಳಗೆ ಎರಕ ಹೊಯ್ದ ಪ್ರೀತಿಯ ಎಸಕ ಕನಿಕರವಿಲ್ಲದೆ ಮನದ ಕದವ ಮುಚ್ಚಲು ಅಸುನೀಗಿದ ಭಾವಗಳಿಗೆ ಯಾರು ಹೊಣೆ ಮುತ್ತಾಗಿದೆ ಸ್ವಾತಿ ಮಳೆಯ ಹನಿಯಂತೆ ನೀ ಕಿವಿಯಲ್ಲಿ ಉಲಿದ ಒಲವಿನ ಪಲ್ಲವಿ ಅಂತರಾಳದಲ್ಲಿ ಭೋರ್ಗರೆಯುತ್ತಿರುವ ನನಸಾಗದ ಕನಸುಗಳಿಗೆ ಯಾರು ಹೊಣೆ ಚಿತ್ತದಲ್ಲಿ ಚಿರಂತನವಾಗಿದೆ ಅಸುನೀಗಿದ ಸುಮಧುರ ಕ್ಷಣಗಳ ಚಿರಸ್ಥಾಯಿ ರೂಪ ಭರವಸೆಯನ್ನು ಬರಿದಾಗಿಸಿ ಚಿತೆಯೇರಿಸುವ ಚಿಂತೆಯ ನೋವಿಗೆ ಯಾರು ಹೊಣೆ ಅನುಮಾನ ಅವಮಾನಗಳ ಕೊಂಕು ನುಡಿಗಳೇ ವಿಜಯ ಶಿಖರದ ಮೆಟ್ಟಿಲುಗಳು ಹಣೆಬರಹವನ್ನು ಹೊಣೆಯಾಗಿಸಿ ಸಾಧಿಸದೆ ಮುಗಿಸಿದ ಬದುಕಿಗೆ ಯಾರು ಹೊಣೆ ಎಸಕ : ಕಾಂತಿ, ಸೊಬಗು, ವೈಭವ, ಪ್ರತಾಪ ತರಹೀ ಎನ್ನುವ ಶೀರ್ಷಿಕೆಯನ್ನೇನೋ ಕೊಟ್ಟಿದ್ದೇನೆ. ಆದ್ರೆ ಮೂಲ ಬರಹದ ತರಹ ಇದೆ ಎನ್ನುವ ಖಾತರಿಯಿಲ್ಲ. ಆತ್ಮೀಯತೆಯಿದ್ದಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮನ್ನಿಸುವ ಹೃದಯ ವೈಶಾಲ್ಯತೆ ಕೂಡ ಇರುತ್ತೆ. ಅದೇ ಧೈರ್ಯದ ಮೇಲೆ ನಯನ ಭಟ್ ಜಿ.ಎಸ್❣️ ಅವರ ಗಝಲ್ ಗೆ ತರಹೀ ಬರೆಯುವ ಸಾಹಸಕ್ಕೆ ಕೈ ಹಾಕಿದ್ದು. ಸಮಯದ ಅಭಾವದಿಂದ ನಿಮ್ಮೆಲ್ಲರ ಬರಹಗಳನ್ನು ಓದಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ಕ್ಷಮೆಯಿರಲಿ. ನಿಮ್ಮೆಲ್ಲರ ಪರಿಶ್ರಮಕ್ಕೆ, ಕಲಾ ಸೇವೆಗೆ ನನ್ನ ಮೆಚ್ಚುಗೆ, ಹಾರೈಕೆಗಳು ಸದಾ ಇರುತ್ತವೆ.
ಎಸಕ : ಕಾಂತಿ, ಸೊಬಗು, ವೈಭವ, ಪ್ರತಾಪ ತರಹೀ ಎನ್ನುವ ಶೀರ್ಷಿಕೆಯನ್ನೇನೋ ಕೊಟ್ಟಿದ್ದೇನೆ. ಆದ್ರೆ ಮೂಲ ಬರಹದ ತರಹ ಇದೆ ಎನ್ನುವ ಖಾತರಿಯಿಲ್ಲ. ಆತ್ಮೀಯತೆಯಿದ್ದಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಮನ್ನಿಸುವ ಹೃದಯ ವೈಶಾಲ್ಯತೆ ಕೂಡ ಇರುತ್ತೆ. ಅದೇ ಧೈರ್ಯದ ಮೇಲೆ ನಯನ ಭಟ್ ಜಿ.ಎಸ್❣️ ಅವರ ಗಝಲ್ ಗೆ ತರಹೀ ಬರೆಯುವ ಸಾಹಸಕ್ಕೆ ಕೈ ಹಾಕಿದ್ದು. ಸಮಯದ ಅಭಾವದಿಂದ ನಿಮ್ಮೆಲ್ಲರ ಬರಹಗಳನ್ನು ಓದಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ಕ್ಷಮೆಯಿರಲಿ. ನಿಮ್ಮೆಲ್ಲರ ಪರಿಶ್ರಮಕ್ಕೆ, ಕಲಾ ಸೇವೆಗೆ ನನ್ನ ಮೆಚ್ಚುಗೆ, ಹಾರೈಕೆಗಳು ಸದಾ ಇರುತ್ತವೆ.
read moreವಿಜಯ್
ತರಹೀ ಗಝಲ್: ಚೇತನಾ ಅವರ ಊಲಾ ಮಿಸ್ರ ********************************* ರಕ್ತ ಚರಿತ್ರೆಯಲಿ ಅನುರಕ್ತನಾಗಿಹ ಮನುಜಗೆ ಎಲ್ಲಿದೆ ಮಾನವೀಯತೆ ಸುಪ್ತ ಮನದಲೂ ವಿಷವ ಬೆರೆಸಿಹ ಮನುಜಗೆ ಎಲ್ಲಿದೆ ಮಾನವೀಯತೆ ನಿರ್ಭೀತಿಯಿಂದ ಮೆರೆಯುತಿರುವರು ಮನುಜ ಮುಖವಿರಿಸಿದ ರಕ್ಕಸರು ಹಸುಳೆಯನೂ ಬಿಡದೆ ಪೀಡಿಸುತಿಹ ಮನುಜಗೆ ಎಲ್ಲಿದೆ ಮಾನವೀಯತೆ ಉಸಿರು ಬಿಗಿಹಿಡಿದು ಕಾಯುತ್ತಿವೆ ಹಿರಿಜೀವಗಳು ಅನಾಥ ಮಂದಿರದಲ್ಲಿ ಸಂಬಂಧಗಳ ಆಳವನು ತಿಳಿಯದಿಹ ಮನುಜಗೆ ಎಲ್ಲಿದೆ ಮಾನವೀಯತೆ ಮತಗಳ ನಡುವೆ ಧ್ವೇಷವನು ಬಿತ್ತಿ ಸ್ವಾಸ್ಥ್ಯ ಕದಡುತಿರುವ ಮತಿಹೀನರು ವನ್ಯ ಜೀವಿಗಳ ತೆರದಿ ವರ್ತಿಸುತಿಹ ಮನುಜಗೆ ಎಲ್ಲಿದೆ ಮಾನವೀಯತೆ ಅಂಧ ಶ್ರದ್ದೆಯಲಿ ಅಸುವ ತೆಗೆದು ವಿಕೃತಿ ಮೆರೆಯುವುದಲ್ಲ "ವಿಜಯ" ಭ್ರಮೆಯ ನಾಕದ ಸೃಷ್ಟಿಗೆ ಹೊರಟಿಹ ಮನುಜಗೆ ಎಲ್ಲಿದೆ ಮಾನವೀಯತೆ Chetu Hegde ಅವರೇ, ನಿನ್ನೆ ಮೊನ್ನೆಯಷ್ಟೇ ಪುಟ್ಟ ಪ್ರಯತ್ನ ಅಂತ ಗಝಲ್ ಲೋಕಕ್ಕೆ ಎಂಟ್ರಿ ಕೊಟ್ಟವರು ಪಟ ಪಟನೆ ಬರೆಯುತ್ತಾ ಸಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.😍 ನಿಮ್ಮ ಒಂದು ಪ್ರೌಢ ಗಂಭೀರವಾದ ಗಝಲ್ ಗೆ ಸರಳವಾದ ಪದಗಳ ಮೂಲಕ ತರಹೀ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಅಷ್ಟಕ್ಕೂ ನಿಮ್ಮ ಗಝಲ್ ಓದಿದ್ದೇ ತರಹೀ ಬರೆದಾದ್ಮೇಲೆ ಅದೇ ತರಹ ಇದೆಯಾ ಅಂತ ತುಲನೆ ಮಾಡುವುದಕ್ಕೆ...😁 ಹಾ... ನಯನ ಭಟ್ ಜಿ.ಎಸ್❣️ ಅವರು ಬರೆದ ತರಹೀ ಓದಿದಾಗ, ನನ್ನಂತಹ ಜನ ಸಾಮಾನ್ಯನಿಗೆ ಎಟುಕದ ಪದಗಳನ್ನು ಬಳಸದೆ ಬರೆದು ಬಿಡಬೇಕು ಎನ್ನುವ ಆಲೋಚನೆ ಬಂತು..😊
Chetu Hegde ಅವರೇ, ನಿನ್ನೆ ಮೊನ್ನೆಯಷ್ಟೇ ಪುಟ್ಟ ಪ್ರಯತ್ನ ಅಂತ ಗಝಲ್ ಲೋಕಕ್ಕೆ ಎಂಟ್ರಿ ಕೊಟ್ಟವರು ಪಟ ಪಟನೆ ಬರೆಯುತ್ತಾ ಸಾಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.😍 ನಿಮ್ಮ ಒಂದು ಪ್ರೌಢ ಗಂಭೀರವಾದ ಗಝಲ್ ಗೆ ಸರಳವಾದ ಪದಗಳ ಮೂಲಕ ತರಹೀ ಬರೆಯುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಅಷ್ಟಕ್ಕೂ ನಿಮ್ಮ ಗಝಲ್ ಓದಿದ್ದೇ ತರಹೀ ಬರೆದಾದ್ಮೇಲೆ ಅದೇ ತರಹ ಇದೆಯಾ ಅಂತ ತುಲನೆ ಮಾಡುವುದಕ್ಕೆ...😁 ಹಾ... ನಯನ ಭಟ್ ಜಿ.ಎಸ್❣️ ಅವರು ಬರೆದ ತರಹೀ ಓದಿದಾಗ, ನನ್ನಂತಹ ಜನ ಸಾಮಾನ್ಯನಿಗೆ ಎಟುಕದ ಪದಗಳನ್ನು ಬಳಸದೆ ಬರೆದು ಬಿಡಬೇಕು ಎನ್ನುವ ಆಲೋಚನೆ ಬಂತು..😊
read moreವಿಜಯ್
ಜುಲ್ ಕಾಫಿಯ ಗಜಲ್ ಮನಸಿನ ಪುಟಗಳಲ್ಲಿ ನೆನಪುಗಳೇ ವೈರಿಯು ನೋವನ್ನು ದಹಿಸಲಿ ಹೇಗೆ ಈರ್ಷೆಯ ಲೋಕದಿ ಜರಿಕೆಯೇ ತೊಡರು ಸೋಲನ್ನು ಹಿಮ್ಮೆಟ್ಟಿಸಲಿ ಹೇಗೆ ಬತ್ತಿ ಹೋಗಿದೆ ಭರವಸೆ ಕಲ್ಪನೆಯಲ್ಲೂ ಕನಸು ಕೈಗೂಡಲೆನ್ನುವ ಕೋರಿಕೆ ಮನದ ಮಡುವಿನಲ್ಲಿ ಸಿಲುಕಿದೆ ಬುದ್ದಿ ಭಾವನೆಗಳನ್ನು ಚಿಗುರಿಸಲಿ ಹೇಗೆ ಸತ್ತ ಭಾವಗಳೊಂದಿಗೆ ಬೇಸತ್ತು ಸಾಗುತ್ತಿದೆ ಬದುಕು ಸಾಕ್ಷಿಗಿದೆ ಉಸಿರಾಟ ನೋವಿನ ತಳದಲ್ಲಿ ನಗುವೆಂಬ ನಿಧಿ ಹುಡುಕಾಟವನ್ನು ಶುರುವಿಡಲಿ ಹೇಗೆ ಮಿಂಚು ಹುಳುಗಳ ಸಂಚು ಹೊಳೆವ ಬೆಳಕಿನ ಹಿಂದೆ ಅಲೆಯಿತು ಮನಸ್ಸು ಪಾಳು ಬಿದ್ದಿದೆ ಹೃದಯದರಮನೆ ಗತ ವೈಭವವನ್ನು ಮರುಸೃಷ್ಟಿಸಲಿ ಹೇಗೆ ಮನೋಲೋಕದ ದಿಗಂತವನ್ನು ದಾಟುತ ಸಾಗುತ್ತಿದೆ 'ವಿಜಯ'ದ ಯಾತ್ರೆ ಪುಟಿಯಿತು ಮನ ನೋಡುತ ಒಲಿದ ಗೆಲುವನ್ನು ಸಂಭ್ರಮಿಸದಿರಲಿ ಹೇಗೆ #ವಿಜಯ್_ಗಝಲ್ #ಗಝಲ್ #ಜುಲ್_ಕಾಫಿಯ_ಗಜಲ್ #ಕನ್ನಡ_ಗಜಲ್ # 6 #kvprakashquotes ಜುಲ್ ಕಾಫಿಯ ಗಜಲ್: ಜುಲ್ ಕಾಫಿಯ ಎಂದರೆ ಎರಡೆರಡು ಕಾಫಿಯಗಳನ್ನು ಅಳವಡಿಸಿ ಬರೆಯುವುದು. ಜುಲ್ ಎಂದರೆ ದ್ವೀತಿಯ ಎಂಬ ಅರ್ಥ ಬರುತ್ತದೆ. ಒಂದು ಕಾಫಿಯಾ ಮುಂದೆ ಮತ್ತೊಂದು ಕಾಫಿಯಾ ಬರುವ ಗಜಲ್ ಗಳನ್ನು ಜುಲ್ ಕಾಫಿಯಾ ಗಜಲ್ಗಳೆಂದು ಕರೆಯುತ್ತಾರೆ. https://sangaati.in/?p=27295
#ವಿಜಯ್_ಗಝಲ್ #ಗಝಲ್ #ಜುಲ್_ಕಾಫಿಯ_ಗಜಲ್ #ಕನ್ನಡ_ಗಜಲ್ # 6 #kvprakashquotes ಜುಲ್ ಕಾಫಿಯ ಗಜಲ್: ಜುಲ್ ಕಾಫಿಯ ಎಂದರೆ ಎರಡೆರಡು ಕಾಫಿಯಗಳನ್ನು ಅಳವಡಿಸಿ ಬರೆಯುವುದು. ಜುಲ್ ಎಂದರೆ ದ್ವೀತಿಯ ಎಂಬ ಅರ್ಥ ಬರುತ್ತದೆ. ಒಂದು ಕಾಫಿಯಾ ಮುಂದೆ ಮತ್ತೊಂದು ಕಾಫಿಯಾ ಬರುವ ಗಜಲ್ ಗಳನ್ನು ಜುಲ್ ಕಾಫಿಯಾ ಗಜಲ್ಗಳೆಂದು ಕರೆಯುತ್ತಾರೆ. https://sangaati.in/?p=27295
read moreವಿಜಯ್
¶¶ ಸ್ವರ ಕಾಫಿಯಾ ಗಝಲ್ ¶¶ ಜಗವು ತಲ್ಲಣಿಸಲು ಜಡವಾದ ಮನಸ್ಸಿಗೆ ನವ್ಯ ಅಕ್ಷರವಿತ್ತ ಬಳುವಳಿ ಅಸ್ತಮಿತ ಹೃದಯಕ್ಕೆ ಆತ್ಮೀಯತೆಗೂ ಅತೀತ ಅಕ್ಷರವಿತ್ತ ಬಳುವಳಿ ಮನದೊಳಗೆ ಅಳಿದುಳಿದ ನಲಿವಿಗೆ ಮಧುರವಾದ ಭಾವಗಳ ಬೆಸುಗೆ ಆಪ್ತತೆಯ ನೆಲೆಯಲ್ಲಿ ಲಭಿಸಿತ್ತು ಸೂಕ್ತ ಸನ್ಮಾನ ಅಕ್ಷರವಿತ್ತ ಬಳುವಳಿ ಅರಳಿಯು ಸೂಸುತಿಹ ಶುದ್ಧ ಪ್ರಾಣವಾಯುವಿನಂತೆ ಕಂದಳಿತ ಸ್ನೇಹ ಪಲ್ಲವಿಸಿದೆ ಮನದಲ್ಲಿ ಸಂತಸದ ಕ್ಷಣಗಳು ಭವ್ಯ ಅಕ್ಷರವಿತ್ತ ಬಳುವಳಿ ಸೃಜಿಸಿ ಹೃದಯದ ಹೊಸ್ತಿಲಲ್ಲಿ ಮನಸೆಳೆವ ಆತ್ಮೀಯತೆಯ ರಂಗವಲ್ಲಿ ಒರೆಗೆ ಹಚ್ಚುತ್ತಿದೆ ಅಂತರಂಗದ ಅರಿವನು ನಿತ್ಯ ಅಕ್ಷರವಿತ್ತ ಬಳುವಳಿ ಹಿಡಿಯಲೇಕೆ ಒಲುಮೆಗೆ ಕನ್ನಡಿ 'ವಿಜಯ'ದಲೂ ಒಂದಾದರೆ ಸಾಲದೇ ಜೊತೆಯಲ್ಲಿರಲಿ ಎಂದೆಂದೂ ಅಕ್ಷತೆಯಲ್ಲಿ ಬರೆದ ಅಕ್ಷರವಿತ್ತ ಬಳುವಳಿ #ವಿಜಯ್_ಗಝಲ್ #ಗಝಲ್ # 5 #ಸ್ವರ_ಕಾಫಿಯಾ #ಕನ್ನಡ_ಗಝಲ್ #kvprakashquotes ಪುಟ ತುಂಬುವಷ್ಟು ಬರೆದು ತುಂಬಾ ದಿನಗಳು ಕಳೆದಿವೆ. ನಿನ್ನೆ ನಯನ ಭಟ್ ಜಿ.ಎಸ್❣️ ಅವರ ಪ್ರೊಫೈಲ್ ನಲ್ಲಿ ಒಂದು ಗಝಲ್ ಓದಿದಾಗ ಬರೆದುಬಿಡುವ ಮನಸ್ಸಾಯಿತು. ಪ್ರತ್ಯಕ್ಷವಾಗಿ ಕಾರಣವಾದ 'ಅವರಿಗೆ' ಧನ್ಯವಾದಗಳು.
#ವಿಜಯ್_ಗಝಲ್ #ಗಝಲ್ # 5 #ಸ್ವರ_ಕಾಫಿಯಾ #ಕನ್ನಡ_ಗಝಲ್ #kvprakashquotes ಪುಟ ತುಂಬುವಷ್ಟು ಬರೆದು ತುಂಬಾ ದಿನಗಳು ಕಳೆದಿವೆ. ನಿನ್ನೆ ನಯನ ಭಟ್ ಜಿ.ಎಸ್❣️ ಅವರ ಪ್ರೊಫೈಲ್ ನಲ್ಲಿ ಒಂದು ಗಝಲ್ ಓದಿದಾಗ ಬರೆದುಬಿಡುವ ಮನಸ್ಸಾಯಿತು. ಪ್ರತ್ಯಕ್ಷವಾಗಿ ಕಾರಣವಾದ 'ಅವರಿಗೆ' ಧನ್ಯವಾದಗಳು.
read moreವಿಜಯ್
★★ಗಝಲ್★★ ಮನದೊಳಗೆ ಇಣುಕಿತು ಅವಳ ಒಲವಿನ ಬೆಳಕು ತಮವು ನೀಗಿಹುದು ಚೆಲ್ಲಿದಾಗ ಅರಿವಿನ ಬೆಳಕು ಇಳಿಸಲು ನೋವುಗಳನ್ನು ಮನವಾಯ್ತು ನಿರಾಳ ತುಂಬಿತು ಮನದಲ್ಲಿ ಅಂದದ ಚೆಲುವಿನ ಬೆಳಕು ಬರಿದಾದ ಬಾಳಲ್ಲಿ ಉದಿಸಿದಳು ಚಂದ್ರಿಕೆಯಂತೆ ಎದೆಯಲ್ಲಿ ಹರಡಿತು ಮುದ್ದಾದ ನಗುವಿನ ಬೆಳಕು ಹೊಸದಾಗಿ ಶುರುವಾಗಿದೆ ಒಳಗೊಳಗೆ ತಳಮಳ ಹೊತ್ತು ಕಳೆದಂತೆ ಕ್ಷೀಣಿಸುವುದೇ ನಲಿವಿನ ಬೆಳಕು ಅವಳಿರಬೇಕು 'ವಿಜಯ'ನ ಬದುಕಲ್ಲಿ ಅನವರತ ಜೊತೆಯಾಗಲಿ ಆತ್ಮದೇವತೆಯ ಗೆಲುವಿನ ಬೆಳಕು #ಆತ್ಮದೇವತೆ #ಗಝಲ್ #ಗಜಲ್ #ವಿಜಯ್_ಗಝಲ್ #gazal #firstgazal ಗಝಲ್ ಬರೆಯುವ ಮೊದಲನೆಯ ಪ್ರಯತ್ನ. ಇದರ ಬಗ್ಗೆ ನಿಮ್ಮೆಲ್ಲರ ಅಮೂಲ್ಯವಾದ ಸಲಹೆಗಳಿಗೆ ಸ್ವಾಗತ. ತಪ್ಪುಗಳನ್ನು ತಿಳಿಸಿಕೊಟ್ಟರೆ ತಿದ್ದಿಕೊಳ್ಳುವೆ. ನನಗೆ ಈ ಸಾಹಸಕ್ಕೆ ಕೈಹಾಕಲು ಪ್ರೇರಣೆಯಾಗಿದ್ದು Archana Archana ಅವರ ಬರಹಗಳು. ಅವರ ಪರಿಚಯವಿಲ್ಲದಿದ್ದರೂ ಅವರ ಗಝಲ್ ಗಳು ನನಗೆ ತುಂಬಾ ಪರಿಚಿತ. ಅವರಿಗೆ ಮೊದಲನೆಯದಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ.
#ಆತ್ಮದೇವತೆ #ಗಝಲ್ #ಗಜಲ್ #ವಿಜಯ್_ಗಝಲ್ #gazal #firstGazal ಗಝಲ್ ಬರೆಯುವ ಮೊದಲನೆಯ ಪ್ರಯತ್ನ. ಇದರ ಬಗ್ಗೆ ನಿಮ್ಮೆಲ್ಲರ ಅಮೂಲ್ಯವಾದ ಸಲಹೆಗಳಿಗೆ ಸ್ವಾಗತ. ತಪ್ಪುಗಳನ್ನು ತಿಳಿಸಿಕೊಟ್ಟರೆ ತಿದ್ದಿಕೊಳ್ಳುವೆ. ನನಗೆ ಈ ಸಾಹಸಕ್ಕೆ ಕೈಹಾಕಲು ಪ್ರೇರಣೆಯಾಗಿದ್ದು Archana Archana ಅವರ ಬರಹಗಳು. ಅವರ ಪರಿಚಯವಿಲ್ಲದಿದ್ದರೂ ಅವರ ಗಝಲ್ ಗಳು ನನಗೆ ತುಂಬಾ ಪರಿಚಿತ. ಅವರಿಗೆ ಮೊದಲನೆಯದಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ.
read more
About Nojoto | Team Nojoto | Contact Us
Creator Monetization | Creator Academy | Get Famous & Awards | Leaderboard
Terms & Conditions | Privacy Policy | Purchase & Payment Policy Guidelines | DMCA Policy | Directory | Bug Bounty Program
© NJT Network Private Limited