Find the Best paramathmanaliathma Shayari, Status, Quotes from top creators only on Gokahani App. Also find trending photos & videos aboutlove quotes for him paragraph, what is a paragraph in a poem called, maa par shayari in hindi, paragraph on my best friend 100 words, paragraph on independence day in hindi,
ರಂಜಿತಾ ಸೋಮಶೇಖರ್ ❤️
ಚಿತ್ತದೊಳು ನಿನ್ನ ಭಾವಚಿತ್ರವೇ ಅಚ್ಚಳಿಯದೆ ಅಚ್ಚಾಗಿರಲು ಕಣ್ಣ ಕೊಳದೊಳಗೆ ನಿನ್ನ ನೆನಪುಗಳೇ ಕಂಬನಿಯಾಗಿ ಆಸೆರೆಯಾಗಿರಲು ನೀನಿತ್ತ ಆ ಸವಿಮುತ್ತು ನನ್ನದೇ ಸ್ವತ್ತಾಗಲೆಂದು ಮನವು ಬಯಸಿತ್ತು..! ಕಡಲೊಳಗಡಗಿದ ಸ್ವಾತಿಮುತ್ತದು ನೀನೇ ಅಲ್ಲವೇನು ನಿನ್ನ ಕಣ್ಣೋಟವೇ ಮೇಘಸಂದೇಶಗಳಾದವು ನನಗಿನ್ನು ನಿನ್ನ ಸವಿನುಡಿಗೆ ಹೋಲಿಕೆ ಭೂಮಿಯಲೇ ಜನನವಾಗಿಲ್ಲವಿನ್ನು..! ತೋಚಿರುವುದ ಗೀಚಿರುವೆ ಸ್ವಪ್ನಗಳ ಸೆಲೆಯಲ್ಲಿ ಒಲವಿನ ಬಲೆಯಲ್ಲಿ ಬಂಧಿಸಬೇಡ ನೀನು ನನ್ನನ್ನು ಸಂತೈಸಿಬಿಡು ಜಗವನೇ ಮರೆಯುವಂತೆ ನಾನಿನ್ನು ♥️ ಹೃದಯದ ಒಡತಿಯೂ ನೀನಾಗಲೂ 💖 #yqjogi #yqkannadaquotes #yqthoughts #yqquotes #yqkanmani #paramathmanaliathma #YourQuoteAndMine Collaborating with Shivu Patel
ಹೃದಯದ ಒಡತಿಯೂ ನೀನಾಗಲೂ 💖 #yqjogi #yqkannadaquotes #yqthoughts #yqquotes #yqkanmani #paramathmanaliathma #YourQuoteAndMine Collaborating with Shivu Patel
read moreರಂಜಿತಾ ಸೋಮಶೇಖರ್ ❤️
ನಿನ್ನ ಜೊತೆ ಮಾತನಾಡದೆ ಮನವು ಮೂಕಾಗಿರಬಹುದು ಆದರೆ ಮಾತುಗಳ ಮೌನವದು ಮನದಲೇ ನಿನ್ನೊಡನೆ ಮಾತನಾಡುತಿಹುದು ❤️ 😑🤐 #yqjogi #yqkannadaquotes #yqthoughts #yqquotes #yqkanmani #chikey #paramathmanaliathma #YourQuoteAndMine Collaborating with Shivu Patel
😑🤐 #yqjogi #yqkannadaquotes #yqthoughts #yqquotes #yqkanmani #chikey #paramathmanaliathma #YourQuoteAndMine Collaborating with Shivu Patel
read moreರಂಜಿತಾ ಸೋಮಶೇಖರ್ ❤️
ಭಾವ ಭಾವಗಳ ಸಮ್ಮಿಲನ ಕನಸು ಮನಸುಗಳ ಪುನರ್ಮಿಲನ ಇಂದಿನ COLLAB ಚಾಲೆಂಜ್.... Anyone accepted .... 👍🤞 ನಿಮ್ಮ ನಿಸ್ವಾರ್ಥ ಮನಸಿನ ಮಾತುಗಳ ಮೂಲಕ...... ❣ #yqjogi #collab #collabwitjogi #paramathmanaliathma #yqkannadaquotes #YourQuoteAndMine Collaborating with Shivu Patel
ಇಂದಿನ COLLAB ಚಾಲೆಂಜ್.... Anyone accepted .... 👍🤞 ನಿಮ್ಮ ನಿಸ್ವಾರ್ಥ ಮನಸಿನ ಮಾತುಗಳ ಮೂಲಕ...... ❣ #yqjogi #Collab #collabwitjogi #paramathmanaliathma #yqkannadaquotes #YourQuoteAndMine Collaborating with Shivu Patel
read moreರಂಜಿತಾ ಸೋಮಶೇಖರ್ ❤️
ಪ್ರೀತಿಯೆಂದರೆ ಶುಭ್ರ ಬಿಳುಪಿನ ನೀಲಾಕಾಶ.. ನೋವ ಮರೆಮಾಡಿ ಸಂತಸವ ನೀಡುವ ಮುದ್ದು ಮನಗಳ ಕೈಲಾಸ♥️ ನೋವು ನಲಿವಿನ ಪರದೆ ಮೇಲೆ ಮೂಡುವ ಪ್ರೀತಿ.... #yqjogi #yqkannadaquotes #yqkannada #yqkanmani #paramathmanaliathma #kannadaquotes #YourQuoteAndMine Collaborating with Shivu Patel
ನೋವು ನಲಿವಿನ ಪರದೆ ಮೇಲೆ ಮೂಡುವ ಪ್ರೀತಿ.... #yqjogi #yqkannadaquotes #yqkannada #yqkanmani #paramathmanaliathma #kannadaquotes #YourQuoteAndMine Collaborating with Shivu Patel
read moreರಂಜಿತಾ ಸೋಮಶೇಖರ್ ❤️
ಕನಸುಗಳ ಕಾಲುವೆಯಲ್ಲಿ ಪಯಣಿಗರು ನಾವೆಲ್ಲಾ ಪಯಣ ಸಾಗಿದಂತೆ ಸಾಗಲೇಬೇಕು ಜೀವನವೆಲ್ಲ.. ಮುಂಬರುವ ದಿನಗಳು ಹೊತ್ತು ತರುವುದೇನೋ ಗೊತ್ತಿಲ್ಲ ಜೊತೆಯಾಗಿ ಸಾಗುವಾಗ ಕಲ್ಲು ಮುಳ್ಳದು ಲೆಕ್ಕವಿಲ್ಲ.. ಒಬ್ಬಂಟಿ ನಾನೆಂದು ಚಿಂತಿಸಿ ಕೊರಗುವ ಅಗತ್ಯವಿಲ್ಲ, ಕೈಹಿಡಿದು ಜೊತೆನಡೆಸುವ ಸ್ನೇಹಿತರಿರೇ ಸಾಕು ಸಾರ್ಥಕ ಬದುಕೆಲ್ಲ Pc : Pinterest ಸ್ನೇಹ_ಲೋಕ ♥️ #friendship #besties_forever #happiness #friendsforlife #paramathmanaliathma #chikey
Pc : Pinterest ಸ್ನೇಹ_ಲೋಕ ♥️ #Friendship #besties_forever #Happiness #friendsforlife #paramathmanaliathma #chikey
read moreರಂಜಿತಾ ಸೋಮಶೇಖರ್ ❤️
ಇರುವ ಈ ಜೀವನವೆಂಬ ಮೂರು ದಿನದಲಿ.. ಬಂದವರೆಷ್ಟೋ ಹೋದವರೆಷ್ಟೋ, ಅಳಿಸಿದವರೆಷ್ಟೋ ನಗಿಸಿದವರೆಷ್ಟೋ, ಕಲಿತಿದ್ದೆಷ್ಟೋ ಕಲಿಯದೇ ಹೋದದ್ದೆಷ್ಟೋ, ನೆನಪಿಸಿದ್ದೆಷ್ಟೋ ಮರೆಸಿದ್ದೆಷ್ಟೋ.. ಇವೆಲ್ಲ ಜೀವನವ ಕಟ್ಟಿಕೊಳ್ಳಲು ಸಹಾಯವಾಗುವ ಭದ್ರ ಬುನಾದಿಗಳು.. ಉಳಿ ಪೆಟ್ಟು ತಿಂದಷ್ಟು ಕಲ್ಲು ಶಿಲೆಯಾಗುವಂತೆ, ಮನುಷ್ಯ ನೋವು ನಲಿವಿನಲಿ ಮಿಂದಷ್ಟು ಗಟ್ಟಿಯಾಗಿ ನೆಲೆಗೊಳ್ಳುತ್ತಾನೆ.. ಅತ್ಯುತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ♥️ ಜೀವನದ ಏಳು ಬೀಳು 💐 #life #inspiration #achievesuccess #resolutions #happinesswithin #paramathmanaliathma #chikey
ಜೀವನದ ಏಳು ಬೀಳು 💐 life #Inspiration #achievesuccess #resolutions #happinesswithin #paramathmanaliathma #chikey
read moreರಂಜಿತಾ ಸೋಮಶೇಖರ್ ❤️
ಕಣ್ಮನ ಸೆಳೆವ ಆ ನಿನ್ನ ನಯನದಲಿ ಅದೇನು ಅರಿಯದ ಮಾಯವಿದೆಯೋ.. ತಿರುಗಿ ತಿರುಗಿ ನೋಡುತಲಿ ನಿನ್ನ ಕಡುಗಪ್ಪುಗಣ್ಣನೇ ನಾ ಮರೆತೇ ನನ್ನನೇ.. ನಿನ್ನ ನಯನದಲೇ ಬಿಂಬವಾಗುತ, ಕನಸ ಕೊಳದಲ್ಲಿ ತೇಲಾಡುತ ತೇಲಿ ಹೋದೆ.. ಕಂಗಳ ಕುಡಿನೋಟಕೆ ಕದ್ದು ಕದ್ದು ಸನ್ನೆ ಮಾಡುತ, ಕಣ್ಣ ಮಿಟುಕಿಸುತ ಕಣ್ಣಲೇ ಮಾತಾಡುವ, ಕಂಗಳ ಹೊಸ ಭಾಷೆಗೆ ಅದರ ಒತ್ತಾಸೆಗೆ, ಮನಸೂರೆಗೊಂಡ ನಿನ್ನೊಲವ ಪ್ರೇಕ್ಷಕನಿವನು.. ನಿನ್ನ ಕಣ್ಣ ಕೊಳದಲೆ ಈಜಾಡುತ, ಮುಳುಗಿ ಮುಳುಗಿ ಮೇಲೇಳಲು ಕಣ್ರೆಪ್ಪೆಯಾ ಆಸರೆಯ ನೀಡೆನಗೆ, ಕಳೆದುಹೋಗದಂತೆ ನಾನಿನ್ನು ಕಣ್ಗಾವಲಿರು ನಯನ ಮನೋಹರೆ ನೀನಿನ್ನು... ♥️ Pc : Pinterest #love #twosouls #happiness #couples #togetherforever #paramathmanaliathma #chikey
Pc : Pinterest love #twosouls #Happiness #couples #togetherforever #paramathmanaliathma #chikey
read moreರಂಜಿತಾ ಸೋಮಶೇಖರ್ ❤️
ಜೀವನದಲ್ಲಿ ಮಹಾನ್ ವ್ಯಕ್ತಿಯಾಗಲು, ಮಹಾನ್ ಸಾಧನೆಯೇ ಮಾಡಬೇಕೆಂದೇನಿಲ್ಲ.. ನಿನ್ನನು ಕಾಣಲು ಒಂದು ಜೀವ ಹಂಬಲಿಸಿದರೆ, ಎಲ್ಲರೂ ಇದ್ದರು ನೀನಿಲ್ಲವೆಂಬ ನೋವು ಅವರಿಗೆ ಅತಿಯಾಗಿ ಕಾಡಿದರೆ, ನಿನ್ನ ಬರುವಿಕೆಯ ದಾರಿ ಕಾಯುತ, ಏನಾಯಿತೋ ಎಂದು ಮನವು ಚಡಪಡಿಸುತಾ, ನಿನ್ನ ನೆನೆದು ಒಂದು ಹನಿ ಕಣ್ಣೀರು ಹಾಕಿದರೆ ಸಾಕು.. ಅದೇ ದೊಡ್ಡ ಸಾಧನೆ ನೀನು ಬದುಕಿದ್ದಕ್ಕೂ ಸಾರ್ಥಕ❤️ ಜೀವನ ಸಾರ #life #inspiration #friendship #love #happiness #bondingfrvr #paramathmanaliathma #chikey
ಜೀವನ ಸಾರ life #Inspiration #Friendship love #Happiness #bondingfrvr #paramathmanaliathma #chikey
read moreರಂಜಿತಾ ಸೋಮಶೇಖರ್ ❤️
ಕೇಳೆನ್ನ ಸ್ವಪ್ನಗಳ ಮೂಟೆಯ ಹೊತ್ತು ಹೊಯ್ದಿರುವ ಮುದ್ದು ಹೃದಯ ಸಂಚಾರಿ ಎಚ್ಚರ !!! ನನ್ನೆಲ್ಲ ಸ್ವಪ್ನಗಳ ಈಡೇರಿಕೆಗೆ ಮುಂದೇನಿದ್ದರೂ ನೀನೊಬ್ಬನೇ ಜವಾಬ್ದಾರಿ 💞 Pc : Pinterest ಹೃದಯದ ರಾಯಭಾರಿ 💓 #ಅನುಬಂಧ #ಪ್ರೇಮಪಯಣ #ಜೋಡಿಮೈನ #ಹರುಷದ_ಹೊಳೆ #paramathmanaliathma #chikey
Pc : Pinterest ಹೃದಯದ ರಾಯಭಾರಿ 💓 #ಅನುಬಂಧ #ಪ್ರೇಮಪಯಣ #ಜೋಡಿಮೈನ #ಹರುಷದ_ಹೊಳೆ #paramathmanaliathma #chikey
read moreರಂಜಿತಾ ಸೋಮಶೇಖರ್ ❤️
ಕಾಣದ ಏನೋ ಗೊಂದಲ ನೀ ದೂರ ಹೋದಾಗಲೆಲ್ಲ, ಮನವದು ಚೂರು ಸಹಿಸದು ನೀ ಮತ್ತೊಬ್ಬರೊಡನೆ ತೀರಾ ಸಲುಗೆಯಿಂದ ಮಾತನಾಡಿದಾಗಲೆಲ್ಲ.. ಮುಗ್ದ ಪ್ರೇಮದ ಅತಿರೇಕವೋ, ನನ್ನವನೆಂಬ ಮುದ್ದಾದ ಭಾವನೆಯೋ ನಾ ಅರಿಯೆನು, ಅದೆಲ್ಲ ಕೇವಲ ತೋರಿಕೆಗಷ್ಟೇ ಎಂದರಿತರೂ ಮನವಿದು ಪುಟ್ಟ ಮಗುವಿನಂತಾಗಿ ಅಳುವುದು, ನನ್ನನ್ನೇ ನಾ ದೂಷಿಸಿಕೊಳ್ಳುವಷ್ಟು ಹೃದಯವಿದು ನೋಯುತಲಿ ಮರುಗುವುದು😔😪 Pc : Pinterest ಮೂಕ ವೇದನೆ #lovelife #happiness #cuterelationship #everloved #everstrange #friendzone #chikey #paramathmanaliathma
Pc : Pinterest ಮೂಕ ವೇದನೆ #lovelife #Happiness #cuterelationship #everloved #everstrange #friendzone #chikey #paramathmanaliathma
read more