Nojoto: Largest Storytelling Platform

Best netrapatil Shayari, Status, Quotes, Stories

Find the Best netrapatil Shayari, Status, Quotes from top creators only on Gokahani App. Also find trending photos & videos aboutindru netru naalai images with quotes, telugu wap net a to z mp3 songs, net se paise kaise kamaye hindi me, how to check airtel net balance, netrutva quotes in marathi,

  • 1 Followers
  • 33 Stories

Netra Patil

ಭಾವನೆಗಳ ನಿರ್ಧಾರವು ಬದಲಾವಣೆಯಾದರೆ, ಮೌನವೇ ಲೇಸು.. #netrapatil #Netra #ನೇತ್ರಾ #Decision #yourquote #yqquotes

read more
ನನ್ನ ಮೌನವೇ ನಿನಗೆ ಆಯ್ಕೆಯಾದರೆ, 
ಹಾಗೇ ಆಗಲಿ...
ನಾನೆಂದೂ ಸಹ ಇನ್ನೊಮ್ಮೆ
ನಿನ್ನೊಂದಿಗೆ ಮಾತನಾಡುವುದಿಲ್ಲ..
ಆಯ್ಕೆಗಳ ನಡುವೆ ಸ್ಪಷ್ಟತೆ ಇದ್ದಾಗ 
ಬದಲಾವಣೆಗಳು ಅವಶ್ಯಕವಾಗಿರುತ್ತವೆ... 
ನೆನಪಿರಲಿ ಮತ್ತೊಮ್ಮೆ ನೀನು ನನ್ನ ಎಂದೂ ಕೇಳದಿರು ಮಾತನಾಡುವಿಯಾ ಎಂದು... 
ನನ್ನ ಉತ್ತರವು ಸಹ ಗಟ್ಟಿ ನಿರ್ಧಾರದಿಂದ
ಮೌನವೇ ಆಗಿರುತ್ತದೆ ಮರೆಯದಿರು...  ಭಾವನೆಗಳ ನಿರ್ಧಾರವು ಬದಲಾವಣೆಯಾದರೆ, ಮೌನವೇ ಲೇಸು..
#netrapatil #netra #ನೇತ್ರಾ #decision #yourquote #yqquotes

Netra Patil

ಎಲ್ಲಾ ಪ್ರಶ್ನೆಗಳಿಗೂ ಉತ್ತರವಿದೆಯೇ!!?? #netrapatil #Netra #Questions

read more
ಓ ಮನಸೇ ನೀನೇಕೆ ನನ್ನ ಕಾಡುತಿರುವೆ ಹೀಗೆ,
ನಾನೇನು ಸಹಾಯ ಮಾಡುವೆ ನಿನಗೆ, 
ನಿನ್ನ ನಾನೆಂದಿಗಾದ್ರು ಅರ್ಥೈಸಲು ಸಾಧ್ಯವೇ,
ನನ್ನ ಮನದ ಭಾವನೆಗಳು ಎಂದಿಗೂ ನಿನಗೆ
ಅರ್ಥವಾಗದೆ ಉಳಿದು ಹೋದಾಗ ಪ್ರಶ್ನೆಗಳಿಗೆ ಉತ್ತರದ ಸಮ್ಮತದ ಅನಿವಾರ್ಯತೆ ಇದಿಯಾ!!???.
ಮರು ಉತ್ತರವು ಸಹ ಮೌನವೇ ಆಗಿದೆ ಅಲ್ಲವೇ?!!!.. ಎಲ್ಲಾ ಪ್ರಶ್ನೆಗಳಿಗೂ ಉತ್ತರವಿದೆಯೇ!!??
#netrapatil #netra #questions

Netra Patil

ನೀ ತಂದ ಉಡುಗೊರೆ. #ನೆನಪು #yqjogi #yqkannada #Collab #collabwithjogi #netrapatil #Netra #YourQuoteAndMine Collaborating with YourQuote Jogi

read more
ನಿನ್ನ ಮೊದಲ ಪ್ರೀತಿಯ ಉಡುಗೊರೆ...
ಪದಗಳಲ್ಲಿ ವರ್ಣಿಸಲಾಗದ ಭಾವನೆಗಳೇ ತುಂಬಿರುವ ಈ ಉಡುಗೊರೆ ನನಗೆ ತುಂಬ ವಿಶೇಷವಾಗಿತ್ತು...
ಕೊನೆಯವರಗೂ ಇರುವುದು ಈ ಉಡುಗೊರೆ ನೆನಪಿನ ಪುಟಗಳಲ್ಲಿ ಎಂದೂ ಅಳಿಯದೆ...  ನೀ ತಂದ ಉಡುಗೊರೆ. 

#ನೆನಪು #yqjogi #yqkannada #collab #collabwithjogi #netrapatil #netra #YourQuoteAndMine
Collaborating with YourQuote Jogi

Netra Patil

ಕನಸುಗಳು ನೂರಾರು ಇವೆ ನಿನ್ನೊಂದಿಗೆ,. ನಿನ್ನ ನಾನು ತಲುಪಲು ಇನ್ನೆಷ್ಟು ಸಮಯ ಇರುವುದು ಹೇಳುವಿಯಾ!! #Netra #netrapatil #Dreams #yourquote #Path #Destination

read more
ಕನಸುಗಳು ನೂರಾರು ಇವೆ ನಿನ್ನೊಂದಿಗೆ
ಈ ಪಯಣದ ಹಾದಿಯಲ್ಲಿ ಎಲ್ಲವೂ ನನಸಾಗಿವೆ, 
ಕೆಲವು ಹೇಳದೆ, ಹೇಳಿದ ಮೇಲೆ ಕೂಡ ಕನಸಾಗಿ ಉಳಿದಿವೆ...
ಏನೆಂದು ಹೇಳಲಿ, ನನ್ನ ಮನದ ಮಾತು ನಿನಗೆ ತಿಳಿಯದೆ, 
ಎಲ್ಲವು ತೆರೆದ ಪುಸ್ತಕದಂತೆ ಅಲ್ಲವೇ. 
ಓದುವಿಯಾ ಇನಿಯ ಈ ಬರಹದ ಪುಟವನ್ನು, 
ಮುಗಿಸುವಿಯಾ ಈ  ಪುಸ್ತಕವನ್ನು,
ಹೇಳದೆ ಉಳಿದ ಮೌನ ಆಲಿಸುವಿಯಾ ಎಂದಾದರೂ! 
ಸಮಯ ಇರುವುದೇ ನನಗಾಗಿ.... 
ಕೊನೆಯವರೆಗೂ ಅರ್ಥವಾಗದೆ ಯಾಕೆ ಉಳಿದೆ ಸುಮ್ಮನೆ ಈ ಹೃದಯದಲ್ಲಿ.. 
ಉತ್ತರವಿದಿಯಾ ನಿನ್ನಲ್ಲಿ ನನ್ನ ಪ್ರಶ್ನೆಗಳಿಗೆ? ಕನಸುಗಳು ನೂರಾರು ಇವೆ ನಿನ್ನೊಂದಿಗೆ,. ನಿನ್ನ ನಾನು ತಲುಪಲು ಇನ್ನೆಷ್ಟು ಸಮಯ ಇರುವುದು ಹೇಳುವಿಯಾ!! 
#netra #netrapatil #dreams #yourquote #path #destination

Netra Patil

ಮನಸಿನ ಮಾತುಗಳು ಅಕ್ಷರದ ಮೂಲಕ ವ್ಯಕ್ತವಾಗುತ್ತಿದೆ... #netrapatil life #will #waiting.. #Netra #ನೇತ್ರಾ

read more
ನೆನಪುಗಳು ನೂರಾರು,
ಹೇಗೆ ಇರಲಿ ನಿನ್ನ ಅಗಲಿ...
ಹೃದಯ ಭಾರವಾಗಿದೆ, ನನ್ನ ಒಲವೇ
ನನ್ನ ಮನಸಿನ ಭಾವನೆಗಳು ನಿನಗೆ ತಿಳಿಯದೇ,
ಬಂದು ನೀನು ನನ್ನ ಸೇರಬಾರದೆ...
ಕಾಯುವೆ ಉಸಿರಿನ ಕೊನೆಯವರೆಗೂ ನಿನಗಾಗಿ  ಮನಸಿನ ಮಾತುಗಳು ಅಕ್ಷರದ ಮೂಲಕ ವ್ಯಕ್ತವಾಗುತ್ತಿದೆ... #netrapatil #life #will #waiting.. #netra #ನೇತ್ರಾ

Netra Patil

ಮನಸ್ಸೆಂಬ ಪುಸ್ತಕ ಓದುವ ಹಂಬಲ!! #Soul #Book #netrapatil

read more
ಮನಸ್ಸು ಎಂಬ ಪುಸ್ತಕವನ್ನು ಯಾರು ಸರಳವಾಗಿ 
ಓದಲು ಮತ್ತು ಅರ್ಥೈಸಲು ಸಾಧ್ಯವಿಲ್ಲ.
ಮನಸ್ಸು ಹೇಗೆ ಅಲ್ವಾ ಎಲ್ಲವೂ ತಿಳಿದಿದ್ದರೂ
ಯಾರನ್ನಾದ್ರೂ ಮನಸಾರೆ ಪ್ರೀತಿಸಿದರೆ ಹಚ್ಚಿಕೊಂಡರೆ,
ಎಷ್ಟೇ ತಿಳಿ ಹೇಳಿದರು ಬುದ್ಧಿ ಮಾತನ್ನ ಕೇಳೋದಿಲ್ಲ.. 
ಮನಸೆಲ್ಲ ಭಾರವಾಗಿ ಕೊನೆ ಇಲ್ಲದಷ್ಟು ಕಣ್ಣೀರು ಸುರಿಸುತ್ತದೆ..
ಎಲ್ಲವನ್ನೂ ಹೊತ್ತು ಪ್ರಯಾಣ ಮಾಡಲೇಬೇಕು ಏಕೆಂದರೆ ಎಲ್ಲವನ್ನೂ ತಿಳಿದು ಹೆಜ್ಜೆ ಹಾಕಿದರೆ ಸ್ವಲ್ಪವಾದರೂ ಸಂತೋಷದ ನೆಮ್ಮದಿ ಜೀವನ ಮಾಡಬಹುದು.. ಕಾಲ ಚಕ್ರ ಕಳೆದ ಹಾಗೇ ಎಲ್ಲಾ ನೆನಪುಗಳು ಮಸ್ತಕದಿಂದ ಮರೆಯಾಗುತ್ತದೆ... ಕಣ್ಣಿರು ಮಾತ್ರ ಕಣ್ಣಿಂದ ಯಾವತ್ತೂ ದೂರಾಗದು... ಮನಸ್ಸೆಂಬ ಪುಸ್ತಕ ಓದುವ ಹಂಬಲ!! #soul #book #netrapatil

Netra Patil

In a life we have proper destination.. #netrapatil life #deams #beautifulsoul

read more
ಕಳೆದು ಹೋದವರು ಮರಳಿ ಬರುವ ಸಾಧ್ಯತೆ ಇರುವುದೇ, 
ಪ್ರಕೃತಿಯ ಹಾಗೂ ಜೀವನದ ನಿಯಮನಿಬಂಧನೆಗಳನ್ನು ಮೀರಿ ಯೋಚನೆ ಮಾಡದೆ ಮುಂದೆ ಸಾಗುವುದೇ ಜೀವನ ಅಲ್ಲವೇ!! 
ಕನಸಿನ ಕಲ್ಪನೆ ವಿಹಾರದ ಭಾವನೆ ಕನಸೇ ಸರಿ ನನಸಾಗದ ಕನಸು ಅಷ್ಟೇ...  In a life we have proper destination..   #netrapatil  #life #deams #beautifulsoul

Netra Patil

Accept the Changes.. #acceptance #Change #netrapatil

read more
Change is a way of life...
But in the same life,
We can't accept the changes sometimes.. 
Reality is harder than imagination. Accept the Changes.. #acceptance #change #netrapatil

Netra Patil

ಮೌನವೇ ಉತ್ತರವಾಗಿತ್ತು... #netrapatil #Netra life #sailence #HUmanity

read more
ಅವಶ್ಯಕತೆ ಅನಿವಾರ್ಯತೆ ಮದ್ಯೆ ನಿನ್ನ ನೀನು ಬಂಧಿಯಾದರೆ ಮನುಷ್ಯತ್ವಕ್ಕೆ ಬೆಲೆ ಇರುವುದೇ?? 
ಕೊನೆ ಕ್ಷಣದಲ್ಲಿ ಸಹ ನಿನ್ನ ಸ್ವಾರ್ಥವೇ ನಿನಗೆ ಪ್ರಧಾನವಾದರೆ
ಜೀವನಕ್ಕೆ ಅರ್ಥ ಸಿಗುವುದೇ? 
ಸಮಯ ಕ್ಷಣಿಕ ಮನಸೇ ತಿರುಗಿ ನೋಡಿದರೆ ತಿಳಿಯುತ್ತದೆ.. 
ಭಾವನೆ ಅರ್ಥವಾದರೆ ಸಾಕೆ, ಭಾವನೆಗಳಿಗೆ ಜೀವ ಬೇಡವೇ!!
ಪ್ರತಿ ಭಾವನೆ ಇಲ್ಲದೆ ಬದುಕು, ಹೇಳದೆ ಉಳಿದ ಮೌನ ಎಲ್ಲವೂ ಮುಗಿದು ಹೋಗಿದೆ ಎನ್ನುವ ಕೊರಗು ಮನುಷ್ಯನನ್ನು ಎಂದೂ ಪ್ರಶ್ನಿಸದೆ ಬಿಡುವುದೇ! ಈ ಜೀವನದ ಕೊನೆ ಉಸಿರುರಿರುವರೆಗೂ ಉತ್ತರಿಸದೆ ಹೋಗು ಮರಳಿ ನೋಡದಿರು ಮನವೇ....  ಮೌನವೇ ಉತ್ತರವಾಗಿತ್ತು... #netrapatil #netra #life #sailence #humanity

Netra Patil

life #Change #netrapatil

read more
ಬದುಕಿನ ನಿರ್ಧಾರಗಳಲ್ಲಿ ಬದಲಾವಣೆಯು ಅಗತ್ಯ ಮತ್ತು ಅನಿವಾರ್ಯತೆಗಳಿಂದ ಒಳಗೊಂಡಿದೆ...  #life #change #netrapatil
loader
Home
Explore
Events
Notification
Profile