Nojoto: Largest Storytelling Platform

Best kvprakashquotes  Shayari, Status, Quotes, Stories

Find the Best kvprakashquotes  Shayari, Status, Quotes from top creators only on Nojoto App. Also find trending photos & videos about kvp full form, kvp ramachandra rao, kvp 18100, raka the rebel, https://nojoto.com/amp/post/a9175beff7398f28062665be7f8acdd6/bha-ga-ma-sama-ka-bha-ga-ha-ii-sa-ra-ta-ma-b-raka,

  • 1 Followers
  • 2 Stories

ವಿಜಯ್

ಭಾಮಿನೀ ಷಟ್ಪದಿ ೲೲೲೲೲೲೲೲೲೲೲೲೲೲೲೲೲೲ ಮುನಿದು ಕುಳಿತಿಹುದು ಮೌನದೊಳಗೆ ಮನದ ಮಧುರತರ ಭಾವವಿಂದು ಕೊನೆಯ ಉಸಿರಲಿ ಬೆರೆತು ಹೋಗುವ ಕನಸು ಕಾಣುತಲಿ | ಅನುದಿನ ದಿನಮಣಿಯಿಂದ ನೀಗ ದ ನಿಶೆ ಒಳಗಿರಲು ಶುರುವಾಗಿದೆ ಜನುಮದಲಿಲ್ಲ ನಲುಮೆಯ ಕಿರಣವೆಂಬ ಅನುಮಾನ || #നിങ്ങളുടെ_വരികൾക്കായ്_060322 #ವಿಜಯ್_ಷಟ್ಪದಿ #ಭಾಮಿನೀಷಟ್ಪದಿ #kvprakashquotes 

read more
ಭಾಮಿನೀ ಷಟ್ಪದಿ
ೲೲೲೲೲೲೲೲೲೲೲೲೲೲೲೲೲೲ
ಮುನಿದು ಕುಳಿತಿಹುದು ಮೌನದೊಳಗೆ
ಮನದ ಮಧುರತರ ಭಾವವಿಂದು
ಕೊನೆಯ ಉಸಿರಲಿ ಬೆರೆತು ಹೋಗುವ ಕನಸು ಕಾಣುತಲಿ |
ಅನುದಿನ ದಿನಮಣಿಯಿಂದ ನೀಗ
ದ ನಿಶೆ ಒಳಗಿರಲು ಶುರುವಾಗಿದೆ
ಜನುಮದಲಿಲ್ಲ ನಲುಮೆಯ ಕಿರಣವೆಂಬ ಅನುಮಾನ || 

ಮರಣದ ಕದವ ತಟ್ಟಿ ಮರಳಿಹೆ
ಕರುಣೆಯಿಲ್ಲದಿಹ ಲೋಕದೊಳಗೆ
ನರಕ ಜೀವನ ನೀಡಿ ಹರಸಿದವರಾರಂದೆನಗೆ |
ಕರೆಸಿಕೊಳ್ಳಲು ಇಲ್ಲ ಕಾರಣ
ಮರುಕವಿರಲಿಲ್ಲವಗೆ ಆ ಕ್ಷಣ
ಬರಡು ಬಾಳನು ಕಂಡು ಗಹಗಹಿಸುತಿಹನನುಕ್ಷಣ || ಭಾಮಿನೀ ಷಟ್ಪದಿ
ೲೲೲೲೲೲೲೲೲೲೲೲೲೲೲೲೲೲ
ಮುನಿದು ಕುಳಿತಿಹುದು ಮೌನದೊಳಗೆ
ಮನದ ಮಧುರತರ ಭಾವವಿಂದು
ಕೊನೆಯ ಉಸಿರಲಿ ಬೆರೆತು ಹೋಗುವ ಕನಸು ಕಾಣುತಲಿ |
ಅನುದಿನ ದಿನಮಣಿಯಿಂದ ನೀಗ
ದ ನಿಶೆ ಒಳಗಿರಲು ಶುರುವಾಗಿದೆ
ಜನುಮದಲಿಲ್ಲ ನಲುಮೆಯ ಕಿರಣವೆಂಬ ಅನುಮಾನ ||

ವಿಜಯ್

ಭಾಮಿನೀ ಷಟ್ಪದಿ: ಮೊದಲ ಪ್ರಯತ್ನ ಷಟ್ಪದಿಯ ಈ ಪ್ರಕಾರಕ್ಕೆ ಭಾಮಿನೀ ಷಟ್ಪದಿ ಎಂದು ಕರೆಯುತ್ತಾರೆ. ಷಟ್ಪದಿಯ ಆರು ಪಾದಗಳಲ್ಲಿ ಕೆಳಗಿನಂತೆ ಗಣವಿಂಗಡನೆಯನ್ನು ಮಾಡಲಾಗುತ್ತದೆ. ೩|೪|೩|೪ ೩|೪|೩|೪ ೩|೪|೩|೪|೩|೪|- ೩|೪|೩|೪ #ಆತ್ಮದೇವತೆ #ವಿಜಯ್_ಷಟ್ಪದಿ #ಭಾಮಿನೀಷಟ್ಪದಿ #kvprakashquotes 

read more
ಭಾಮಿನೀ ಷಟ್ಪದಿ: ಮೊದಲ ಪ್ರಯತ್ನ
°°°°°°°°°°°°°°°°°°°°°°°°°°°°°°
ಒಲವು ತುಂಬಿದ ಕಣ್ಣಿನಿಂದಲಿ
ಚೆಲುವು ಸೂಸುತ ಸೆಳೆದು ನನ್ನನು
ಗೆಲುವು ತಂದಳು ಜೊತೆಗೆ ನಿಲ್ಲುತ ಬಾಳ ಪಯಣದಲಿ |
ಸಲುಗೆಯಿಂದಲಿ ಮನವ ಗೆದ್ದಳು
ಬಲವನಿತ್ತಳು ಬಳಸಿ ತೋಳಲಿ
ಛಲದಿ ನಡೆವ ಪರಿಯನರುಹಿದಳು ಜಗದ ಸಂತೆಯಲಿ || 

ದಿನವು ಕಾಡುವ ಸೊಬಗು ಅವಳದು
ಜನುಮ ಜನುಮದ ಬಂಧ ನಮ್ಮದು
ತನುವಿನೊಳಗಿನ ಜೀವವಾದಳು ಗೆಳತಿಯಾಗುತಲಿ |
ಮನವು ಮೆಚ್ಚಿದ ಮಡದಿಯಾದಳು
ಮನೆಯ ಬೆಳಗುವ ದೀಪವಾದಳು
ಕೊನೆಯ ತನಕ ಇರುವೆನು ಎಂದಳು ಬದುಕ ಯಾತ್ರೆಯಲಿ || ಭಾಮಿನೀ ಷಟ್ಪದಿ: ಮೊದಲ ಪ್ರಯತ್ನ 

ಷಟ್ಪದಿಯ ಈ ಪ್ರಕಾರಕ್ಕೆ ಭಾಮಿನೀ ಷಟ್ಪದಿ ಎಂದು ಕರೆಯುತ್ತಾರೆ. ಷಟ್ಪದಿಯ ಆರು ಪಾದಗಳಲ್ಲಿ ಕೆಳಗಿನಂತೆ ಗಣವಿಂಗಡನೆಯನ್ನು ಮಾಡಲಾಗುತ್ತದೆ. 

೩|೪|೩|೪
೩|೪|೩|೪
೩|೪|೩|೪|೩|೪|- 
೩|೪|೩|೪


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile