Nojoto: Largest Storytelling Platform

Best ವಿಜಯ್_ಷಟ್ಪದಿ Shayari, Status, Quotes, Stories

Find the Best ವಿಜಯ್_ಷಟ್ಪದಿ Shayari, Status, Quotes from top creators only on Nojoto App. Also find trending photos & videos about

  • 1 Followers
  • 10 Stories

ವಿಜಯ್

ಭಾಮಿನೀ ಷಟ್ಪದಿ ೲೲೲೲೲೲೲೲೲೲೲೲೲೲೲೲೲೲ ಮುನಿದು ಕುಳಿತಿಹುದು ಮೌನದೊಳಗೆ ಮನದ ಮಧುರತರ ಭಾವವಿಂದು ಕೊನೆಯ ಉಸಿರಲಿ ಬೆರೆತು ಹೋಗುವ ಕನಸು ಕಾಣುತಲಿ | ಅನುದಿನ ದಿನಮಣಿಯಿಂದ ನೀಗ ದ ನಿಶೆ ಒಳಗಿರಲು ಶುರುವಾಗಿದೆ ಜನುಮದಲಿಲ್ಲ ನಲುಮೆಯ ಕಿರಣವೆಂಬ ಅನುಮಾನ || #നിങ്ങളുടെ_വരികൾക്കായ്_060322 #ವಿಜಯ್_ಷಟ್ಪದಿ #ಭಾಮಿನೀಷಟ್ಪದಿ #kvprakashquotes 

read more
ಭಾಮಿನೀ ಷಟ್ಪದಿ
ೲೲೲೲೲೲೲೲೲೲೲೲೲೲೲೲೲೲ
ಮುನಿದು ಕುಳಿತಿಹುದು ಮೌನದೊಳಗೆ
ಮನದ ಮಧುರತರ ಭಾವವಿಂದು
ಕೊನೆಯ ಉಸಿರಲಿ ಬೆರೆತು ಹೋಗುವ ಕನಸು ಕಾಣುತಲಿ |
ಅನುದಿನ ದಿನಮಣಿಯಿಂದ ನೀಗ
ದ ನಿಶೆ ಒಳಗಿರಲು ಶುರುವಾಗಿದೆ
ಜನುಮದಲಿಲ್ಲ ನಲುಮೆಯ ಕಿರಣವೆಂಬ ಅನುಮಾನ || 

ಮರಣದ ಕದವ ತಟ್ಟಿ ಮರಳಿಹೆ
ಕರುಣೆಯಿಲ್ಲದಿಹ ಲೋಕದೊಳಗೆ
ನರಕ ಜೀವನ ನೀಡಿ ಹರಸಿದವರಾರಂದೆನಗೆ |
ಕರೆಸಿಕೊಳ್ಳಲು ಇಲ್ಲ ಕಾರಣ
ಮರುಕವಿರಲಿಲ್ಲವಗೆ ಆ ಕ್ಷಣ
ಬರಡು ಬಾಳನು ಕಂಡು ಗಹಗಹಿಸುತಿಹನನುಕ್ಷಣ || ಭಾಮಿನೀ ಷಟ್ಪದಿ
ೲೲೲೲೲೲೲೲೲೲೲೲೲೲೲೲೲೲ
ಮುನಿದು ಕುಳಿತಿಹುದು ಮೌನದೊಳಗೆ
ಮನದ ಮಧುರತರ ಭಾವವಿಂದು
ಕೊನೆಯ ಉಸಿರಲಿ ಬೆರೆತು ಹೋಗುವ ಕನಸು ಕಾಣುತಲಿ |
ಅನುದಿನ ದಿನಮಣಿಯಿಂದ ನೀಗ
ದ ನಿಶೆ ಒಳಗಿರಲು ಶುರುವಾಗಿದೆ
ಜನುಮದಲಿಲ್ಲ ನಲುಮೆಯ ಕಿರಣವೆಂಬ ಅನುಮಾನ ||

ವಿಜಯ್

#ವಿಜಯ್_ಷಟ್ಪದಿ #ಕುಸುಮಷಟ್ಪದಿ #kvprakashquotes #ಆತ್ಮದೇವತೆ PC: Pinterest #yqaestheticthoughts

read more
ಕುಸುಮ ಷಟ್ಪದಿ
°°°°°°°°°°°°°°°°°°
ತಿಳಿಯಾದ ನಗುವಲ್ಲಿ
ಕಳೆದು ಹೋಯಿತು ದುಗುಡ
ಸೆಳೆದು ಸೆರೆಯಾಗಿಸುತ ಸೂರೆಗೊಳಲ |
ವಳೆನ್ಮನವನ್ನು ಪುಟಿ
ದೇಳುತಿಹುದೆನ್ನ ಎದೆ
ಯಾಳದಲಿ ಬಯಕೆಗಳ ಚಿಲುಮೆಯೊಂದು || #ವಿಜಯ್_ಷಟ್ಪದಿ
#ಕುಸುಮಷಟ್ಪದಿ
#kvprakashquotes
#ಆತ್ಮದೇವತೆ

PC: Pinterest 

#yqaestheticthoughts

ವಿಜಯ್

Dedicating a #testimonial to ನಯನ ಭಟ್ ಜಿ.ಎಸ್❣️ ನಯನ ಅವರೇ, ನಿಮ್ಮ ಪ್ರೊಫೈಲ್ ನಲ್ಲಿ ಒಂದೆರಡು ಸಾಲ್ಗಳನ್ನು ಬರೆದು ಬಿಡಬೇಕೆಂದು ಅನಿಸಿದ್ದಕ್ಕೆ ಈ ಸಾಹಸ ಮಾಡ್ತಿದ್ದೇನೆ. ವೈಕ್ಯೂಗೆ ಬಂದು ವರುಷ ಕಳೆದ ಬಳಿಕ ಇದೇ ಮೊದಲಬಾರಿಗೆ ಟೆಸ್ಟಿಮೋನಿಯಲ್ ಬರೆಯುತ್ತಿರುವುದು. ಪ್ರೀತಿ ಪ್ರೇಮದ ಲೋಕದಲ್ಲಿ ಅಲೆದಾಡುತ್ತಿದ್ದ ಸಮಯದಲ್ಲೂ ಒಬ್ಬ ವ್ಯಕ್ತಿಯ ಬಗ್ಗೆ ಒಂದೆರಡು ಸಾಲಗಳನ್ನು ಕೂಡ ಬರೆದಿರಲಿಲ್ಲ..😉 ಅಂಥಾದ್ರಲ್ಲಿ ಈಗ ಬರೆಯಬೇಕೆನ್ನುವ ಬಯಕೆಯನ್ನು ಹುಟ್ಟಿಸಿದ್ದು ನಿಮ್ಮ ನಿಸ್ವಾರ್ಥ ಸ್ನೇಹ..🤗 ಎಷ್ಟೋ ಸಲ ಟೆಸ್ಟಿಮೋನಿಯಲ್ ಬರೆಯಬೇಕೆನ್ನುವ ಯೋಚನೆ ಬಂದಾಗೆಲ್ಲಾ ಸ್ನೇಹ, ಗೌರವವನ್ನು ಬರೆದು ತಿಳಿಸುವ ಅವಶ್ಯಕತ #ಬಾಂಧವ್ಯ #ಮನದಮಾತು #ಸ್ನೇಹಸಂಬಂಧ #ವಿಜಯ್_ಷಟ್ಪದಿ

read more
ವಾರ್ಧಕ ಷಟ್ಪದಿಯಲ್ಲಿ ಕಿರುಪರಿಚಯ
ೲೲೲೲೲೲೲೲೲೲೲೲೲೲೲೲೲೲ
ಭಾವ ಗಂಭೀರ ಮಾತು ಸುಮಧುರ ಮನಸು ಮೃದು
ನೋವ ಮರೆತು ನಲಿವಳಿವಳೆಲ್ಲರೊಡಗೂಡುತ
ಸವಿಯಾದ ಭಾಷೆಯನ್ನಾಡುತಲಿ ನೆಲೆಗೊಂಡಿರುವಳು ಜನ ಮಾನಸದಲಿ.
ನವಿರಾದ ಪದಗಳಲಿ ಬರೆದುಬಿಡುವಳು ಭಾಷ್ಯ
ಅವಳ ಭಾವನೆಯಲ್ಲಿ ನಗು ಬೀರುವುದು ಹಾಸ್ಯ
ಆವರಿಸುವುದು ಮನವನು ಕಲ್ಪನೆಯ ವಿಸ್ಮಯ ವಿಷಯಗಳ ಒಳಾರ್ಥಗಳು.

ಹೃದಯದಾಳಕೆ ಇಳಿದು ಆತ್ಮೀಯಳಾದವಳು
ಮೃದುವಾದ ಮಾತಿಂದ ಮನವನ್ನು ಗೆದ್ದವಳು
ಸದ್ಭಾವದಿಂದ ಬಳಿ ಬಂದು ಒಲವ ಸಾಮ್ರಾಜ್ಯವನು ವಿಸ್ತರಿಸಿದವಳು.
ಮುದ ನೀಡುವ ಬರಹಗಳಲ್ಲಿ ಪಳಗಿರುವವಳು
ಮುದ್ದಾಗಿ ವರ್ಣನೆಯ ಮಾಡಲು ಕಲಿತಿರುವಳು
ಸದ್ದು ಮಾಡುವ ಲೇಖನವ ಬರೆದು ಸದ್ದು ಮಾಡದೆ ತಿರುಗಿ ಕುಳಿತಿರುವಳು. Dedicating a #testimonial to ನಯನ ಭಟ್ ಜಿ.ಎಸ್❣️

ನಯನ ಅವರೇ,
ನಿಮ್ಮ ಪ್ರೊಫೈಲ್ ನಲ್ಲಿ ಒಂದೆರಡು ಸಾಲ್ಗಳನ್ನು ಬರೆದು ಬಿಡಬೇಕೆಂದು ಅನಿಸಿದ್ದಕ್ಕೆ ಈ ಸಾಹಸ ಮಾಡ್ತಿದ್ದೇನೆ. 

ವೈಕ್ಯೂಗೆ ಬಂದು ವರುಷ ಕಳೆದ ಬಳಿಕ ಇದೇ ಮೊದಲಬಾರಿಗೆ ಟೆಸ್ಟಿಮೋನಿಯಲ್ ಬರೆಯುತ್ತಿರುವುದು. ಪ್ರೀತಿ ಪ್ರೇಮದ ಲೋಕದಲ್ಲಿ ಅಲೆದಾಡುತ್ತಿದ್ದ ಸಮಯದಲ್ಲೂ ಒಬ್ಬ ವ್ಯಕ್ತಿಯ ಬಗ್ಗೆ ಒಂದೆರಡು ಸಾಲಗಳನ್ನು ಕೂಡ ಬರೆದಿರಲಿಲ್ಲ..😉 ಅಂಥಾದ್ರಲ್ಲಿ ಈಗ ಬರೆಯಬೇಕೆನ್ನುವ ಬಯಕೆಯನ್ನು ಹುಟ್ಟಿಸಿದ್ದು ನಿಮ್ಮ ನಿಸ್ವಾರ್ಥ ಸ್ನೇಹ..🤗 

ಎಷ್ಟೋ ಸಲ ಟೆಸ್ಟಿಮೋನಿಯಲ್ ಬರೆಯಬೇಕೆನ್ನುವ ಯೋಚನೆ ಬಂದಾಗೆಲ್ಲಾ ಸ್ನೇಹ, ಗೌರವವನ್ನು ಬರೆದು ತಿಳಿಸುವ ಅವಶ್ಯಕತ

ವಿಜಯ್

ಆಂಜನೇಯನ ಸೀತಾನ್ವೇಷಣೆ: ವಾರ್ಧಕ ಷಟ್ಪದಿ ****************************** ಹುಡುಕುತ ಹೊರಟ ಪವನ ನಂದನನು ನಡುವಲ್ಲಿ ತಡವರಿಸಿದನು ಧರಣಿ ಪುತ್ರಿಯ ನೆಳವಿಲ್ಲದೆ ತೊಡಕಾಯ್ತು ಅಸುರನ ಅಗಣಿತ ಅರಸಿಯರ ಪಾಳಯವೇ ನೆರೆದಿರುವಾಗ | ಮಡಿವಂತಿಕೆಯ ಬಿಟ್ಟು ಮಣಿದಿರುವಳೇ ಸೀತೆ ನಡುವೆಯೊಮ್ಮೆ ಉದಿಸಿತ್ತು ಮನದೊಳಗೆ ಕುಚೋದ್ಯ ಬಡಿದುಕೊಂಡನು ಹಣೆಯ ತನ್ನ ಅವಿವೇಕವ ನೆನೆದು ಮತ್ತೆ ಪರಿತಪಿಸುತ || #kvprakashquotes #ವಿಜಯ್_ಷಟ್ಪದಿ #ವಾರ್ಧಕಷಟ್ಪದಿ

read more
ಆಂಜನೇಯನ ಸೀತಾನ್ವೇಷಣೆ: ವಾರ್ಧಕ ಷಟ್ಪದಿ
*************************************
ಹುಡುಕುತ ಹೊರಟ ಪವನ ನಂದನನು ನಡುವಲ್ಲಿ
ತಡವರಿಸಿದನು ಧರಣಿ ಪುತ್ರಿಯ ನೆಳವಿಲ್ಲದೆ
ತೊಡಕಾಯ್ತು ಅಸುರನ ಅಗಣಿತ ಅರಸಿಯರ ಪಾಳಯವೇ ನೆರೆದಿರುವಾಗ |
ಮಡಿವಂತಿಕೆಯ ಬಿಟ್ಟು ಮಣಿದಿರುವಳೇ ಸೀತೆ
ನಡುವೆಯೊಮ್ಮೆ ಉದಿಸಿತ್ತು ಮನದೊಳಗೆ ಕುಚೋದ್ಯ
ಬಡಿದುಕೊಂಡನು ಹಣೆಯ ತನ್ನ ಅವಿವೇಕವ ನೆನೆದು ಮತ್ತೆ ಪರಿತಪಿಸುತ || 

ಬಸವಳಿದನು ಅಂತಃಪುರದಲೆಲ್ಲಾ ಹುಡುಕಿ
ಅಶೋಕವನವನು ಹೊಕ್ಕನು ಬೇಸರವು ಇಣುಕಿ
ವಿಷಣ್ಣ ಮನದಿಂದಿರಲು ವಿದೂರದಲ್ಲಿ ಕಂಡನು ಅಯೋನಿಜೆಯನಲ್ಲಿ |
ಸಶಕ್ತ ಹನುಮನು ಶಿರವ ಬಾಗಿಸಿ ನಮಿಸುತಲಿ
ತುಸು ಹೆಚ್ಚು ಭಕುತಿಯಲಿ ತೋರಿದನು ಉಂಗುರವ
ನಸುನಗುತ ತನ್ನರಸನ ಕುರಿತೆಲ್ಲವ ತಿಳಿದು ಹರುಷಗೊಂಡಳು ಅವನಿಜೆ || ಆಂಜನೇಯನ ಸೀತಾನ್ವೇಷಣೆ: ವಾರ್ಧಕ ಷಟ್ಪದಿ
******************************
ಹುಡುಕುತ ಹೊರಟ ಪವನ ನಂದನನು ನಡುವಲ್ಲಿ
ತಡವರಿಸಿದನು ಧರಣಿ ಪುತ್ರಿಯ ನೆಳವಿಲ್ಲದೆ
ತೊಡಕಾಯ್ತು ಅಸುರನ ಅಗಣಿತ ಅರಸಿಯರ ಪಾಳಯವೇ ನೆರೆದಿರುವಾಗ |
ಮಡಿವಂತಿಕೆಯ ಬಿಟ್ಟು ಮಣಿದಿರುವಳೇ ಸೀತೆ
ನಡುವೆಯೊಮ್ಮೆ ಉದಿಸಿತ್ತು ಮನದೊಳಗೆ ಕುಚೋದ್ಯ
ಬಡಿದುಕೊಂಡನು ಹಣೆಯ ತನ್ನ ಅವಿವೇಕವ ನೆನೆದು ಮತ್ತೆ ಪರಿತಪಿಸುತ ||

ವಿಜಯ್

ಕುಸುಮ ಷಟ್ಪದಿ *********** ಏನು ಮಾಡಿದನೆಂದು ದಾನ ನೀಡಿದೆ ಜನುಮ ಮಾನವಿಲ್ಲದ ಬದುಕು ಮರಣಕೆ ಸಮ | ಬಾನೆತ್ತರ ಖ್ಯಾತಿ ದಾನದಲಿ ಶೂರನವ ಏನಿದ್ದರೇನು ಮಮತೆಯಿಲ್ಲದಿರೆ || #kvprakashquotes #ವಿಜಯ್_ಷಟ್ಪದಿ #ಕುಸುಮಷಟ್ಪದಿ

read more
ಕುಸುಮ ಷಟ್ಪದಿ
***********
ಏನು ಮಾಡಿದನೆಂದು
ದಾನ ನೀಡಿದೆ ಜನುಮ
ಮಾನವಿಲ್ಲದ ಬದುಕು ಮರಣಕೆ ಸಮ |
ಬಾನೆತ್ತರ ಖ್ಯಾತಿ
ದಾನದಲಿ ಶೂರನವ
ಏನಿದ್ದರೇನು ಮಮತೆಯಿಲ್ಲದಿರೆ ||

ಸಣ್ಣತನ ತೋರಿಸುತ
ಸಣ್ಣ ವಯಸಲಿ ದುಡುಕಿ
ಕರ್ಣನನು ದೂಡಿದೆ ನದಿಯಲಿ ನೀನು |
ಕ್ಷಣ ಕ್ಷಣ ಅಪಮಾನ
ಕರ್ಣಗಳಿಗೆ ಕಠೋರ
ಬಣ್ಣಗೆಡಿಸಿತು ಅವನ ಬದುಕಿನಲ್ಲಿ || ಕುಸುಮ ಷಟ್ಪದಿ
***********
ಏನು ಮಾಡಿದನೆಂದು
ದಾನ ನೀಡಿದೆ ಜನುಮ
ಮಾನವಿಲ್ಲದ ಬದುಕು ಮರಣಕೆ ಸಮ |
ಬಾನೆತ್ತರ ಖ್ಯಾತಿ
ದಾನದಲಿ ಶೂರನವ
ಏನಿದ್ದರೇನು ಮಮತೆಯಿಲ್ಲದಿರೆ ||

ವಿಜಯ್

ಪಿಡಿಪು: ಹಿಡಿತ, ಬಂಧನ ಕುಚಿತ: ಸಂಕುಚಿತ, ಅಲ್ಪ ಪಳಿವು: ಆರೋಪ °°°°°°°°°°°°°°° ರಾಧೆಯ ಅಳಲು: ವಾರ್ಧಕ ಷಟ್ಪದಿ ******************************** ಪರಿಣಯದ ಪಿಡಿಪನು ಬಯಸಲಾರೆನು ಮಾಧವ ಪರಿ ಪರಿಯ ಲೀಲೆಗಳ ಪುಳಕವಿದೆ ಮನದೊಳಗೆ #kvprakashquotes #ವಿಜಯ್_ಷಟ್ಪದಿ #ವಾರ್ಧಕಷಟ್ಪದಿ

read more
ರಾಧೆಯ ಅಳಲು: ವಾರ್ಧಕ ಷಟ್ಪದಿ
********************************
ಪರಿಣಯದ ಪಿಡಿಪನು ಬಯಸಲಾರೆನು ಮಾಧವ
ಪರಿ ಪರಿಯ ಲೀಲೆಗಳ ಪುಳಕವಿದೆ ಮನದೊಳಗೆ
ಸರಿದ ಸವಿ ಸಮಯದ ನೆನಪಿನ ಬುತ್ತಿಯಿದೆ ಹೃದಯದೊಳಗೆ ಹರುಷಗೊಳ್ಳಲು |
ಪರಿಶುದ್ಧ ಗೆಳೆತನಕ್ಕೆ ಪ್ರಣಯದ ಬಣ್ಣವು
ಪರಿಹರಿಸಲಾಗದ ವ್ಯಾಧಿ ಕುಚಿತ ಮನಸಿಗೆ
ಪರಿಮಳದ ಪುಷ್ಪದ ಘಮ, ಪಳಿವಿಗೆ ಕಳೆಗುಂದುವುದೇ ಹೇಳ್ ನೀ ಯಾದವ || 

ಮರಳಿ ಬಂದೆನು ಬಳಿಗೆ ಮರಣ ಕಾಲವು ಬರಲು
ಮುರಳಿಯಲಿ ಬೆರೆತ ನಿನ್ನುಸಿರನು ಸ್ಪರ್ಶಿಸಲು
ಕರಗಳನು ಪಿಡಿದು ಉದ್ಧರಿಸಿ ಮೋಕ್ಷದ ಹಾದಿಯ ತೋರಿಸಿದೆ ಅಂದೆನಗೆ |
ಮುರಿದು ಹಾಕಿದೆ ಯಾಕೆ ಕೊಳಲ ನೀನಾ ದಿನದಿ
ಮರೆತೆಯೇ ಆತ್ಮಗಳ ಯುಗ ಯುಗದ ಅನುಬಂಧ
ಮೆರೆಸಿದ ಕ್ಷಣಗಳನ್ನು ನಿನ್ನೆದೆ ಕಮಲದಲ್ಲಿ ಕುಳ್ಳಿರಿಸುತ ನನ್ನನು || ಪಿಡಿಪು: ಹಿಡಿತ, ಬಂಧನ
ಕುಚಿತ: ಸಂಕುಚಿತ, ಅಲ್ಪ
ಪಳಿವು: ಆರೋಪ
°°°°°°°°°°°°°°°
ರಾಧೆಯ ಅಳಲು: ವಾರ್ಧಕ ಷಟ್ಪದಿ
********************************
ಪರಿಣಯದ ಪಿಡಿಪನು ಬಯಸಲಾರೆನು ಮಾಧವ
ಪರಿ ಪರಿಯ ಲೀಲೆಗಳ ಪುಳಕವಿದೆ ಮನದೊಳಗೆ

ವಿಜಯ್

#ವಿಜಯ್_ಷಟ್ಪದಿ #ವಾರ್ಧಕಷಟ್ಪದಿ #kvprakashquotes #rzpicprompt2804 #yqrestzone #restzone #collabwithrestzone #YourQuoteAndMine Collaborating with Rest Zone

read more
[ವಾರ್ಧಕ ಷಟ್ಪದಿ]

ಮುದುಡಿದ್ದ ಮನದ ಮೌನಕೆ ಭಾಷ್ಯ ಬರೆದವಳು
ಚದುರಿದ್ದ ಭಾವಗಳಿಗೆ ಮರುಜನ್ಮ ನೀಡುತಿರೆ,
ಎದೆಯ ಕದವನು ತೆರೆದಿರಿಸಿದೆ ನನ್ನೆದುರಲಂದವಳು ನಿಂತಿರುವಾಗಲೇ |
ಮುದ ನೀಡುವ ಮಾತಿಂದ ಜೊತೆ ಸೇರಿದವಳೇ
ಬದುಕಿನ ರಸ ನಿಮಿಷಗಳಿಗೆ ಕಾರಣವು ನೀನು
ಹದಗೊಳಿಸು ಮನವನ್ನು ಅರಿತು ಬೆರೆತೆನ್ನ ಬಾಳನ್ನು ಬೆಳಗುತ ಈಗಲೇ || #ವಿಜಯ್_ಷಟ್ಪದಿ
#ವಾರ್ಧಕಷಟ್ಪದಿ
#kvprakashquotes

#rzpicprompt2804 #yqrestzone #restzone #collabwithrestzone #YourQuoteAndMine
Collaborating with Rest Zone

ವಿಜಯ್

ಈ ಸಾಲುಗಳು ಭಾಮಿನೀ ಷಟ್ಪದಿಯಲ್ಲಿವೆ. ಈ ಪ್ರಕಾರದಲ್ಲಿ ಗಣ ವಿಂಗಡನೆಯು ಈ ಕೇಳಗಿಂತಿರುತ್ತದೆ. ೩|೪|೩|೪ ೩|೪|೩|೪ ೩|೪|೩|೪|೩|೪|- °°°°°°°°°°°°°°°°°° ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು ಮೆಲ್ಲಗೆ ಕೊಡುವೆ ಅತಿ ಭಕುತಿಯಲಿ #kvprakashquotes #ವಿಜಯ್_ಷಟ್ಪದಿ #ಭಾಮಿನೀಷಟ್ಪದಿ

read more
ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು
ಮೆಲ್ಲಗೆ ಕೊಡುವೆ ಅತಿ ಭಕುತಿಯಲಿ
ಮೆಲ್ಲುತ ಬೆಣ್ಣೆಯ, ಬಾ ದೊರೆಯೇ; ನರಹರಿ ರೂಪನೇ |
ಹಲವಿಹುದು ಭಕುತಿಯಲಿ ಭಾವವು
ಒಲವಿನಲಿ ಭಜಿಸುವೆನು ನಿತ್ಯವು
ಗೆಲುವಿನ ಕ್ಷಣಗಳನು ಕೊಡೆನಗೆ; ಹೇ ಜಗದೊಡೆಯನೇ || 

ಚೋರನೆನಿಸಿದೆ ಕದ್ದು ಬೆಣ್ಣೆಯ
ಶೂರನೆನಿಸಿದೆ ಕೊಂದು ಕಂಸನ
ವೀರ ಸಾರಥಿಯಾದೆ ವಿಭುವೇ; ನರಹರಿ ರೂಪನೇ |
ಭಾರವಾಗಿದೆ ಮನವು ಈದಿನ
ಯಾರಲಿ ಹೇಳಲೆನ್ನ ನೋವನು
ಹರಸುತೆನ್ನ ಸಲಹೋ ಪ್ರಭುವೇ; ಹೇ ಜಗದೊಡೆಯನೇ || 

ನಿಷ್ಠೆಯಿಂದಲಿ ಭಜಿಪೆ ನಿನ್ನನು
ಕಷ್ಟವನು ಹೊಡೆದಟ್ಟುವ ಬಗೆಯ
ಇಷ್ಟದಲಿ ಹೇಳೆನ್ನ ಯಾದವ; ನರಹರಿ ರೂಪನೇ |
ನಷ್ಟವಾಗುವ ಮೊದಲು ಜೀವವು
ದುಷ್ಟ ಭಾವವ ತೊರೆದು ಬದುಕಲು
ಪುಷ್ಟಿಕೊಡು ಮನಕೆ ನೀ ಮಾಧವ; ಹೇ ಜಗದೊಡೆಯನೇ || ಈ ಸಾಲುಗಳು ಭಾಮಿನೀ ಷಟ್ಪದಿಯಲ್ಲಿವೆ. ಈ ಪ್ರಕಾರದಲ್ಲಿ ಗಣ ವಿಂಗಡನೆಯು ಈ ಕೇಳಗಿಂತಿರುತ್ತದೆ.

೩|೪|೩|೪
೩|೪|೩|೪
೩|೪|೩|೪|೩|೪|-
°°°°°°°°°°°°°°°°°°
ಗೊಲ್ಲರ ಗೊಲ್ಲನಿಗೆ ಸಿಹಿಮುತ್ತು
ಮೆಲ್ಲಗೆ ಕೊಡುವೆ ಅತಿ ಭಕುತಿಯಲಿ

ವಿಜಯ್

ಭಾಮಿನೀ ಷಟ್ಪದಿ: ಮೊದಲ ಪ್ರಯತ್ನ ಷಟ್ಪದಿಯ ಈ ಪ್ರಕಾರಕ್ಕೆ ಭಾಮಿನೀ ಷಟ್ಪದಿ ಎಂದು ಕರೆಯುತ್ತಾರೆ. ಷಟ್ಪದಿಯ ಆರು ಪಾದಗಳಲ್ಲಿ ಕೆಳಗಿನಂತೆ ಗಣವಿಂಗಡನೆಯನ್ನು ಮಾಡಲಾಗುತ್ತದೆ. ೩|೪|೩|೪ ೩|೪|೩|೪ ೩|೪|೩|೪|೩|೪|- ೩|೪|೩|೪ #ಆತ್ಮದೇವತೆ #ವಿಜಯ್_ಷಟ್ಪದಿ #ಭಾಮಿನೀಷಟ್ಪದಿ #kvprakashquotes 

read more
ಭಾಮಿನೀ ಷಟ್ಪದಿ: ಮೊದಲ ಪ್ರಯತ್ನ
°°°°°°°°°°°°°°°°°°°°°°°°°°°°°°
ಒಲವು ತುಂಬಿದ ಕಣ್ಣಿನಿಂದಲಿ
ಚೆಲುವು ಸೂಸುತ ಸೆಳೆದು ನನ್ನನು
ಗೆಲುವು ತಂದಳು ಜೊತೆಗೆ ನಿಲ್ಲುತ ಬಾಳ ಪಯಣದಲಿ |
ಸಲುಗೆಯಿಂದಲಿ ಮನವ ಗೆದ್ದಳು
ಬಲವನಿತ್ತಳು ಬಳಸಿ ತೋಳಲಿ
ಛಲದಿ ನಡೆವ ಪರಿಯನರುಹಿದಳು ಜಗದ ಸಂತೆಯಲಿ || 

ದಿನವು ಕಾಡುವ ಸೊಬಗು ಅವಳದು
ಜನುಮ ಜನುಮದ ಬಂಧ ನಮ್ಮದು
ತನುವಿನೊಳಗಿನ ಜೀವವಾದಳು ಗೆಳತಿಯಾಗುತಲಿ |
ಮನವು ಮೆಚ್ಚಿದ ಮಡದಿಯಾದಳು
ಮನೆಯ ಬೆಳಗುವ ದೀಪವಾದಳು
ಕೊನೆಯ ತನಕ ಇರುವೆನು ಎಂದಳು ಬದುಕ ಯಾತ್ರೆಯಲಿ || ಭಾಮಿನೀ ಷಟ್ಪದಿ: ಮೊದಲ ಪ್ರಯತ್ನ 

ಷಟ್ಪದಿಯ ಈ ಪ್ರಕಾರಕ್ಕೆ ಭಾಮಿನೀ ಷಟ್ಪದಿ ಎಂದು ಕರೆಯುತ್ತಾರೆ. ಷಟ್ಪದಿಯ ಆರು ಪಾದಗಳಲ್ಲಿ ಕೆಳಗಿನಂತೆ ಗಣವಿಂಗಡನೆಯನ್ನು ಮಾಡಲಾಗುತ್ತದೆ. 

೩|೪|೩|೪
೩|೪|೩|೪
೩|೪|೩|೪|೩|೪|- 
೩|೪|೩|೪

ವಿಜಯ್

ಇದು ಷಟ್ಪದಿ ಬರೆಯುವ ನನ್ನ ಮೊದಲ ಪ್ರಯತ್ನ..❣️ ಅದಕ್ಕೆ ಪ್ರೇರಣೆಯಾದವರಿಗೆ ಕೃತಜ್ಞತೆಗಳನ್ನು ತಿಳಿಸಲೇಬೇಕಲ್ವಾ. ಆ ಎರಡು ಹೆಸರುಗಳು... Archana Kannantha ಹಾಗೂ ನಯನ ಭಟ್ ಜಿ.ಎಸ್❣️ #yqrestzone #rzpicprompt2975 #ಆತ್ಮದೇವತೆ #kvprakashquotes #ವಿಜಯ್_ಷಟ್ಪದಿ #ಭೋಗಷಟ್ಪದಿ

read more
ಭೋಗ ಷಟ್ಪದಿ: ಮೊದಲ ಪ್ರಯತ್ನ
****************************
ಕಣ್ಣ ಅಂಚು ನುಡಿದ ಪದಕೆ
ಸಣ್ಣದೊಂದು ಆಸೆ ಚಿಗುರಿ
ಎಣ್ಣೆ ಸುರಿದ ಹಣತೆಯಂತೆ ಆಯಿತಲ್ಲವೇ |
ಬಣ್ಣಗೆಟ್ಟ ಬಾಳಿನಲ್ಲಿ
ಕ್ಷಣದಿ ಬೆರೆತ ಭಾವದಲಿ
ತೃಣದ ಬದುಕು ಒಲವಿನಿಂದ ಬೆಳಗಿತಲ್ಲವೇ ||

ಭಾವ ಲೋಕದಲ್ಲಿ ನಿನ್ನ
ಆವರಿಸಿದೆ ಪದಗಳಿಂದ
ಸಾವಧಾನವಾಗಿ ನೆಲೆಸು ಆತ್ಮದೇವತೆ |
ಯಾವ ಜನ್ಮದ ಅನುರಾಗ
ನೋವ ಮರೆವುದೀಗ ಸರಳ
ಜೀವನಕೆ ಬೆಳಕಾಗು ನೀ ಆತ್ಮಬಂಧುವೇ || ಇದು ಷಟ್ಪದಿ ಬರೆಯುವ ನನ್ನ ಮೊದಲ ಪ್ರಯತ್ನ..❣️ 

ಅದಕ್ಕೆ ಪ್ರೇರಣೆಯಾದವರಿಗೆ ಕೃತಜ್ಞತೆಗಳನ್ನು ತಿಳಿಸಲೇಬೇಕಲ್ವಾ.

ಆ ಎರಡು ಹೆಸರುಗಳು...
Archana Kannantha
ಹಾಗೂ
ನಯನ ಭಟ್ ಜಿ.ಎಸ್❣️
loader
Home
Explore
Events
Notification
Profile