Nojoto: Largest Storytelling Platform

Best ಅಂತರಂಗದ_ಶ್ರುತಿ Shayari, Status, Quotes, Stories

Find the Best ಅಂತರಂಗದ_ಶ್ರುತಿ Shayari, Status, Quotes from top creators only on Nojoto App. Also find trending photos & videos about

  • 1 Followers
  • 6 Stories

Shruthi U

ಬೇಲಿ ಕೊನೆಯ ಹೂವು #ಅಂತರಂಗದ_ಶ್ರುತಿ #ಕನ್ನಡ_ಪ್ರೀತಿ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada

read more
ಬೇಲಿ ಕೊನೆಯ ಹೂವು

ಅದು ಬೇಲಿ ಕೊನೆಯ ಕಾಗದ ಹೂವು. ಕೆನೆಹಾಲಿನ‌ಬಣ್ಣದ್ದು. ಮೂಲತಃ ಅದರ ಬಣ್ಣ ಅಚ್ಚಬಿಳುಪಾಗಿತ್ತೇನೋ! ಬೇಲಿಯಲ್ಲಿ ಬೆಳೆದ ಕಾಗದ ಹೂವಲ್ಲವೇ! ಎಲೆಗಳೇ ಹಚ್ಚ ಹಸುರಿಲ್ಲ; ಧೂಳಿನಿಂದಾಗಿ ಮಾಸಿಹೋದ ಬಣ್ಣ. ಆದರೂ ಆ ದಾರಿಯಾಗಿ ಹಾದು ಹೋಗುವಾಗಲೊಮ್ಮೆ ಇವಳಿಗೇನೋ ಒಂದು ನೆಮ್ಮದಿ. ಆ ಕಾಗದ ಹೂವುಗಳನ್ನೊಮ್ಮೆ ಕಣ್ತುಂಬಿಕೊಂಡು ನಿಟ್ಟುಸಿರು ಬಿಟ್ಟಾಗಲೊಮ್ಮೆ ಇವಳು ನಿರಾಳ. ಮನದ ಭಾರ ಇಳಿದು, ದುಗುಡ ಕಳೆದು ಹೊಸ ಚೈತನ್ಯದೊಂದಿಗೆ ಮುಂದೆ ಇವಳ ಪಯಣ.

ಬರಬರುತ್ತಾ ಇವಳಿಗೆ ಆ ಕಾಗದ ಹೂವನ್ನು ಕಂಡೊಡನೆಯೇ ವಿಚಿತ್ರ ಬಯಕೆಯೊಂದು ಮನದಲ್ಲಿ ಮೂಡಿ ಮರೆಯಾಗಲಾರಂಭಿಸಿತು. ಅದೆಷ್ಟೋ ಬಾರಿ ತಾನೂ ಸಹ ಇದೇ ಬೇಲಿ ಬದಿಯ ಕಾಗದ ಹೂವಿನಂತೆ ಯಾರ ಗಮನವೂ ಸೆಳೆಯದೆ, ಯಾರೊಂದಿಗೂ ಬೆರೆಯದೆ, ಮೌನಿಯಾಗಿ, ಯಾರೂ ಕಂಡರಿಯದ ಊರಿಗೆ ಹೋಗಿ ಜೀವಿಸಬೇಕು ಎಂದಂದುಕೊಂಡವಳಿವಳು. ಆದರೀಗ; ತೀರ ಇತ್ತೀಚೆಗೆ ಕಾಗದಹೂವಿನ ಟೊಂಗೆಯೊಂದನ್ನು ಕಿತ್ತು ಮನೆಗೆ ಹೊತ್ತೊಯ್ಯುವ ಅದಮ್ಯ ಬಯಕೆ! ಹಿತ್ತಲ ಖಾಲಿ ಜಾಗ ಕಂಡಾಗಲೆಲ್ಲ ಕಾಗದ ಹೂವಿನದೇ ನೆನಪು!

ಅಂತೂ ನಿನ್ನೆ ಮುಸ್ಸಂಜೆ ಇವಳ ಮನೆ ಹಿತ್ತಲಲ್ಲಿ ಕಾಗದ ಹೂವಿನ ಗಿಡ ಖುಷಿಯಲ್ಲಿ ತಲೆದೂಗುತ್ತಿತ್ತು.

 ಬೇಲಿ ಕೊನೆಯ ಹೂವು

#ಅಂತರಂಗದ_ಶ್ರುತಿ  #ಕನ್ನಡ_ಪ್ರೀತಿ #ಅರೆಘಳಿಗೆ_ಹೊಳೆದ_ಸಾಲುಗಳು 
 #yqjogi #yqkannada

Shruthi U

ಅದೆಷ್ಟೋ ದಿನಗಳ ಬಳಿಕ... #ಅಂತರಂಗದ_ಶ್ರುತಿ #ಕನ್ನಡ_ಪ್ರೀತಿ #ಅವನು_ಅವಳು #imaginary_tale #yqjogi #yqkannada #yqbaba

read more
ಕಲೆ!

ಕಾರಿರುಳ ಒಡಲಲ್ಲೊಂದು ಹಳೇ ಮನೆ. ಕಿಟಕಿ ಬಳಿಯ ಪುಟ್ಟ ದೀಪದ ಬೆಳಕು ಗಾಳಿಗೆ ಆಗೊಮ್ಮೆ ಈಗೊಮ್ಮೆ ಓಲಾಡುತ್ತಿದೆ. ಒಲವಿನ ಓಲೆಯೊಳಗದೊಂದು ಕಪ್ಪು ಕಲೆ. ಅದೇನೋ ಬರೆಯುವ ಅವಸರದಲ್ಲಿ ಬಿದ್ದ ಶಾಯಿಯ ಗುರುತಿರಬಹುದೇನೋ ಎಂದುಕೊಂಡಳವಳು. ಆದರೆ ಆ ಕಲೆ ಹೆಪ್ಪುಗಟ್ಟಿದ ನೆತ್ತರ ಉತ್ತರವೆಂಬ ಸತ್ಯವನರಿತವನು ಅವನು ಮಾತ್ರ. ಕಡೆಗೂ ಆ ಓಲೆಯೊಂದು ಅವಳ ಕೈಸೇರಿತೆಂದು ಅವನು ನಗುತ್ತಿರುವನೇನೋ ಅಮೂರ್ತನಾಗಿ ತೃಪ್ತಿಯಿಂದ. ಆದರೆ ಅವಳು ಹೇಗೆ ಅರಿತಾಳು ಅದವನ ಕಡೆಯ ಪತ್ರವೆಂದು!
 ಅದೆಷ್ಟೋ ದಿನಗಳ ಬಳಿಕ...





#ಅಂತರಂಗದ_ಶ್ರುತಿ  #ಕನ್ನಡ_ಪ್ರೀತಿ  #ಅವನು_ಅವಳು #imaginary_tale #yqjogi #yqkannada #yqbaba

Shruthi U

ನಿರಾಶೆ! ಮಧ್ಯಾಹ್ನದ ಊಟದ ನಂತರ ತನಗಾಗಿ ಕಾಯುತ್ತಿದ್ದ ಆ ಮೂಲೆಯ ಹಳೆಯ ಕಪಾಟಿನ ಮೇಲೆ ಸುಮ್ಮನೆ ಬಿದ್ದಿದ್ದ ದಪ್ಪ ಪುಸ್ತಕವನ್ನೋದುವ ಆಸೆಯಾಯಿತವಳಿಗೆ. ಎಟುಕಲಾರದು ಕೈಗೆ; ಎಷ್ಟು ತುದಿಗಾಲ ಮೇಲೆ ನಿಂತು, ಕೈ ಉದ್ದ ಚಾಚಿದರೂ. ಅದೇಕೋ ಈ ಬಾರಿ ಆ ಪುಸ್ತಕಕ್ಕೆ ಅವಳನ್ನು ಆಟವಾಡಿಸುವ ಮನಸಾಗಿದೆಯೇನೋ! ಪ್ರತಿಬಾರಿಯೂ ಅವಳು ಓದಲಿ ಎಂದು ಕೈಗೇ ತಾಕುತ್ತಿದ್ದ ಪುಸ್ತಕವದು. ಅಟ್ಟದ ಮೇಲೆ ಏನೋ ಹಳೆ ಪುಸ್ತಕಗಳನ್ನು ಕೆದಕುತ್ತಿದ್ದಾಗ ಇಲಿ ಹರಿದು ಚಿಂದಿ ಮಾಡಿದ ಅದೆಷ್ಟೋ ಪುಸ್ತಕಗಳ ನಡುವೆ, ಚೂರುಚೂರಾದ ಕಾಗದಗಳ ರಾಶಿಯೆಡೆಯಲ್ಲಿ ಇದೊಂದು ದಪ್ಪ ರಟ್ಟಿನ ದಪ್ಪ ಪುಸ್ತಕ ಕಂಡಿತ್ತವಳಿಗೆ. ಬೇರೆಲ್ಲಾ ಪುಸ್ತಕಗಳ ಆ ಚಿಂದಿ ಅವಸ್ಥೆಯೆ #yqkannada #yqjogi #ಸಣ್ಣಕಥೆ #imaginary_tale #ಕನ್ನಡ_ಪ್ರೀತಿ #ಅಂತರಂಗದ_ಶ್ರುತಿ

read more
ಮಧ್ಯಾಹ್ನದ ಊಟದ ನಂತರ ತನಗಾಗಿ ಕಾಯುತ್ತಿದ್ದ 
ಆ ಮೂಲೆಯ ಹಳೆಯ ಕಪಾಟಿನ ಮೇಲೆ ಸುಮ್ಮನೆ 
ಬಿದ್ದಿದ್ದ ದಪ್ಪ ಪುಸ್ತಕವನ್ನೋದುವ ಆಸೆಯಾಯಿತವಳಿಗೆ. 
ಎಟುಕಲಾರದು ಕೈಗೆ; ಎಷ್ಟು ತುದಿಗಾಲ ಮೇಲೆ ನಿಂತು, 
ಕೈ ಉದ್ದ ಚಾಚಿದರೂ. ಅದೇಕೋ ಈ ಬಾರಿ ಆ ಪುಸ್ತಕಕ್ಕೆ 
ಅವಳನ್ನು ಆಟವಾಡಿಸುವ ಮನಸಾಗಿದೆಯೇನೋ! 

(ಕ್ಯಾಪ್ಷನ್ನಲ್ಲಿ ಓದಿರಿ) ನಿರಾಶೆ!

ಮಧ್ಯಾಹ್ನದ ಊಟದ ನಂತರ ತನಗಾಗಿ ಕಾಯುತ್ತಿದ್ದ ಆ ಮೂಲೆಯ ಹಳೆಯ ಕಪಾಟಿನ ಮೇಲೆ ಸುಮ್ಮನೆ ಬಿದ್ದಿದ್ದ ದಪ್ಪ ಪುಸ್ತಕವನ್ನೋದುವ ಆಸೆಯಾಯಿತವಳಿಗೆ. ಎಟುಕಲಾರದು ಕೈಗೆ; ಎಷ್ಟು ತುದಿಗಾಲ ಮೇಲೆ ನಿಂತು, ಕೈ ಉದ್ದ ಚಾಚಿದರೂ. ಅದೇಕೋ ಈ ಬಾರಿ ಆ ಪುಸ್ತಕಕ್ಕೆ ಅವಳನ್ನು ಆಟವಾಡಿಸುವ ಮನಸಾಗಿದೆಯೇನೋ! ಪ್ರತಿಬಾರಿಯೂ ಅವಳು ಓದಲಿ ಎಂದು ಕೈಗೇ ತಾಕುತ್ತಿದ್ದ ಪುಸ್ತಕವದು. ಅಟ್ಟದ ಮೇಲೆ ಏನೋ ಹಳೆ ಪುಸ್ತಕಗಳನ್ನು ಕೆದಕುತ್ತಿದ್ದಾಗ ಇಲಿ ಹರಿದು ಚಿಂದಿ ಮಾಡಿದ ಅದೆಷ್ಟೋ ಪುಸ್ತಕಗಳ ನಡುವೆ, ಚೂರುಚೂರಾದ ಕಾಗದಗಳ ರಾಶಿಯೆಡೆಯಲ್ಲಿ ಇದೊಂದು ದಪ್ಪ ರಟ್ಟಿನ ದಪ್ಪ ಪುಸ್ತಕ ಕಂಡಿತ್ತವಳಿಗೆ. ಬೇರೆಲ್ಲಾ ಪುಸ್ತಕಗಳ ಆ ಚಿಂದಿ ಅವಸ್ಥೆಯೆ

Shruthi U

ಅವನು - ಅವಳು ಮನ - ಮೌನ . . . . . #ಕನ್ನಡಪ್ರೀತಿ #ಅವನು_ಅವಳು #ಮನ_ಮೌನ #yqkannada #yqjogi #imaginary_tales #ಅಂತರಂಗದ_ಶ್ರುತಿ #ಅರೆಘಳಿಗೆ_ಹೊಳೆದ_ಸಾಲುಗಳು

read more
ಅವನೆನ್ನಲಿ ಎಂದು ಅವಳು, ಅವಳೆನ್ನಲಿ ಎಂದು ಅವನು ಮನದ ಮಾತನ್ನಾಡದೇ ಮೌನದಲ್ಲೇ ಖುಷಿ ಕಂಡಿದ್ದರು. ವರುಷಗಳ ನಂತರ ಅರಿವಾಗಿತ್ತು - ಪ್ರೀತಿ ಸತ್ತಿತ್ತು.
 ಅವನು - ಅವಳು 
ಮನ - ಮೌನ 
.
.
.
.
.
#ಕನ್ನಡಪ್ರೀತಿ #ಅವನು_ಅವಳು #ಮನ_ಮೌನ #yqkannada #yqjogi #imaginary_tales #ಅಂತರಂಗದ_ಶ್ರುತಿ #ಅರೆಘಳಿಗೆ_ಹೊಳೆದ_ಸಾಲುಗಳು

Shruthi U

ಹೊಸ ವರ್ಷದ ಹಾರ್ದಿಕ ಶುಭಾಶಯಗಳು.... . . . . . . #ಅಂತರಂಗದ_ಶ್ರುತಿ #yqkannada #yqjogi

read more
ಪ್ಲವವು
ದಣಿದ ದೇಹಕ್ಕೆ ಉತ್ಸಾಹದ ಸಿಂಚನದಂತೆ
ನೊಂದ ಮನಕ್ಕೆ ನಲಿವಿನಾಲಿಂಗನದಂತೆ 
ಸೋತ ಹೃದಯಕ್ಕೆ ಗೆಲುವಿನ ಚೇತನದಂತೆ
ಅನಾರೋಗ್ಯ, ಆಲಸ್ಯ ತೊಲಗಿ ಆರೋಗ್ಯ, ಉಲ್ಲಾಸ ಒಡಗೂಡಿ ಸಂತಸವ ಹರಡುವಂತೆ ವರವಾಗಲಿ ಎಂದು ಹಾರೈಸುತ್ತಾ ಎಲ್ಲರಿಗೂ ಚಾಂದ್ರಮಾನ ಯುಗಾದಿಯ ಹಾರ್ದಿಕ ಶುಭಾಶಯಗಳು. ಹೊಸ ವರ್ಷದ ಹಾರ್ದಿಕ ಶುಭಾಶಯಗಳು....
.
.
.
.
.
.
#ಅಂತರಂಗದ_ಶ್ರುತಿ #yqkannada #yqjogi

Shruthi U

ಅವಳು... Thank you for the poke Shivani U.S 😊😊 and Preethi Bhat 😊😊 #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #ಕನ್ನಡ_ಪ್ರೀತಿ #ಅವಳು #yqjogi #yqkannada #imaginary_tale #ಅಂತರಂಗದ_ಶ್ರುತಿ

read more
ಮನದಂಗಳದಲಿ ಹೊಂಬೆಳಕೊಂದ ಕಂಡು,
ಬೆಳದಿಂಗಳಿನ ಇರುಳದೊಂದ ನೆನೆದು,
ಒಳಗೊಳಗೇ ಮರುಳು ಮನವ ಹಳಿದು,
ಕೊಳದ ಬಳಿಯ ಆ ನೀಳ ನೆರಳ ಬರಸೆಳೆವ 
ಕನಸ ಕಾಣುತ್ತಿದ್ದಳವಳು. 
ಕೊಳದೊಳಗಿನ ಚಳಿ ನೀರಿನ ಮೀನದೊಂದು 
ತಳದಿಂದ ಬಂದು ಪಾದತಳದಿ ಕಚಗುಳಿಯಿಡಲು 
ಸಣ್ಣಗೆ ನಡುಗಿ ಎಚ್ಚೆತ್ತಳವಳು ತುಂಟ ನಗೆಯೊಂದಿಗೆ.
 ಅವಳು...

Thank you for the poke Shivani U.S 😊😊 and Preethi Bhat 😊😊

#ಹಾಗೆ_ಸುಮ್ಮನೆ
 #ಅರೆಘಳಿಗೆ_ಹೊಳೆದ_ಸಾಲುಗಳು  #ಕನ್ನಡ_ಪ್ರೀತಿ #ಅವಳು 
#yqjogi #yqkannada  
#imaginary_tale


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile