Nojoto: Largest Storytelling Platform

Best ಸಣ್ಣಕಥೆ Shayari, Status, Quotes, Stories

Find the Best ಸಣ್ಣಕಥೆ Shayari, Status, Quotes from top creators only on Nojoto App. Also find trending photos & videos about

  • 2 Followers
  • 7 Stories

Shruthi U

ನಿರಾಶೆ! ಮಧ್ಯಾಹ್ನದ ಊಟದ ನಂತರ ತನಗಾಗಿ ಕಾಯುತ್ತಿದ್ದ ಆ ಮೂಲೆಯ ಹಳೆಯ ಕಪಾಟಿನ ಮೇಲೆ ಸುಮ್ಮನೆ ಬಿದ್ದಿದ್ದ ದಪ್ಪ ಪುಸ್ತಕವನ್ನೋದುವ ಆಸೆಯಾಯಿತವಳಿಗೆ. ಎಟುಕಲಾರದು ಕೈಗೆ; ಎಷ್ಟು ತುದಿಗಾಲ ಮೇಲೆ ನಿಂತು, ಕೈ ಉದ್ದ ಚಾಚಿದರೂ. ಅದೇಕೋ ಈ ಬಾರಿ ಆ ಪುಸ್ತಕಕ್ಕೆ ಅವಳನ್ನು ಆಟವಾಡಿಸುವ ಮನಸಾಗಿದೆಯೇನೋ! ಪ್ರತಿಬಾರಿಯೂ ಅವಳು ಓದಲಿ ಎಂದು ಕೈಗೇ ತಾಕುತ್ತಿದ್ದ ಪುಸ್ತಕವದು. ಅಟ್ಟದ ಮೇಲೆ ಏನೋ ಹಳೆ ಪುಸ್ತಕಗಳನ್ನು ಕೆದಕುತ್ತಿದ್ದಾಗ ಇಲಿ ಹರಿದು ಚಿಂದಿ ಮಾಡಿದ ಅದೆಷ್ಟೋ ಪುಸ್ತಕಗಳ ನಡುವೆ, ಚೂರುಚೂರಾದ ಕಾಗದಗಳ ರಾಶಿಯೆಡೆಯಲ್ಲಿ ಇದೊಂದು ದಪ್ಪ ರಟ್ಟಿನ ದಪ್ಪ ಪುಸ್ತಕ ಕಂಡಿತ್ತವಳಿಗೆ. ಬೇರೆಲ್ಲಾ ಪುಸ್ತಕಗಳ ಆ ಚಿಂದಿ ಅವಸ್ಥೆಯೆ #yqkannada #yqjogi #ಸಣ್ಣಕಥೆ #imaginary_tale #ಕನ್ನಡ_ಪ್ರೀತಿ #ಅಂತರಂಗದ_ಶ್ರುತಿ

read more
ಮಧ್ಯಾಹ್ನದ ಊಟದ ನಂತರ ತನಗಾಗಿ ಕಾಯುತ್ತಿದ್ದ 
ಆ ಮೂಲೆಯ ಹಳೆಯ ಕಪಾಟಿನ ಮೇಲೆ ಸುಮ್ಮನೆ 
ಬಿದ್ದಿದ್ದ ದಪ್ಪ ಪುಸ್ತಕವನ್ನೋದುವ ಆಸೆಯಾಯಿತವಳಿಗೆ. 
ಎಟುಕಲಾರದು ಕೈಗೆ; ಎಷ್ಟು ತುದಿಗಾಲ ಮೇಲೆ ನಿಂತು, 
ಕೈ ಉದ್ದ ಚಾಚಿದರೂ. ಅದೇಕೋ ಈ ಬಾರಿ ಆ ಪುಸ್ತಕಕ್ಕೆ 
ಅವಳನ್ನು ಆಟವಾಡಿಸುವ ಮನಸಾಗಿದೆಯೇನೋ! 

(ಕ್ಯಾಪ್ಷನ್ನಲ್ಲಿ ಓದಿರಿ) ನಿರಾಶೆ!

ಮಧ್ಯಾಹ್ನದ ಊಟದ ನಂತರ ತನಗಾಗಿ ಕಾಯುತ್ತಿದ್ದ ಆ ಮೂಲೆಯ ಹಳೆಯ ಕಪಾಟಿನ ಮೇಲೆ ಸುಮ್ಮನೆ ಬಿದ್ದಿದ್ದ ದಪ್ಪ ಪುಸ್ತಕವನ್ನೋದುವ ಆಸೆಯಾಯಿತವಳಿಗೆ. ಎಟುಕಲಾರದು ಕೈಗೆ; ಎಷ್ಟು ತುದಿಗಾಲ ಮೇಲೆ ನಿಂತು, ಕೈ ಉದ್ದ ಚಾಚಿದರೂ. ಅದೇಕೋ ಈ ಬಾರಿ ಆ ಪುಸ್ತಕಕ್ಕೆ ಅವಳನ್ನು ಆಟವಾಡಿಸುವ ಮನಸಾಗಿದೆಯೇನೋ! ಪ್ರತಿಬಾರಿಯೂ ಅವಳು ಓದಲಿ ಎಂದು ಕೈಗೇ ತಾಕುತ್ತಿದ್ದ ಪುಸ್ತಕವದು. ಅಟ್ಟದ ಮೇಲೆ ಏನೋ ಹಳೆ ಪುಸ್ತಕಗಳನ್ನು ಕೆದಕುತ್ತಿದ್ದಾಗ ಇಲಿ ಹರಿದು ಚಿಂದಿ ಮಾಡಿದ ಅದೆಷ್ಟೋ ಪುಸ್ತಕಗಳ ನಡುವೆ, ಚೂರುಚೂರಾದ ಕಾಗದಗಳ ರಾಶಿಯೆಡೆಯಲ್ಲಿ ಇದೊಂದು ದಪ್ಪ ರಟ್ಟಿನ ದಪ್ಪ ಪುಸ್ತಕ ಕಂಡಿತ್ತವಳಿಗೆ. ಬೇರೆಲ್ಲಾ ಪುಸ್ತಕಗಳ ಆ ಚಿಂದಿ ಅವಸ್ಥೆಯೆ

Shruthi U

#ಅವಳು #ಸಣ್ಣಕಥೆ #ಅರೆಘಳಿಗೆ_ಹೊಳೆದ_ಸಾಲುಗಳು #aestheticthoughts #yqbaba #yqjogi #picquote #YourQuoteAndMine Collaborating with Aesthetic Thoughts

read more
 ಕಡೆಗೂ ಬಿಸಿಲ ಬೇಗೆ ತಣಿವ ಹೊತ್ತು ಸನ್ನಿಹಿತವಾಗಿತ್ತು. 
ಮನದ ದುಗುಡ ಕಳೆವ ಕಾಲವದು ಈಗ ಬಂದಿತ್ತು. 
ಅದೆಷ್ಟೋ ರಾತ್ರಿಗಳನ್ನು ನಿದ್ರೆಯಿರದೆ ಕಳೆದು, 
ಸಂದಿಗ್ಧತೆಯಲ್ಲೂ ನಿರಾಳಭಾವವನ್ನು ತಾಳಿ, 
ನಿಷ್ಕಲ್ಮಶ ಪ್ರೀತಿಯಿಂದ ಹಗಲಿರುಳು ಸೇವೆ ಮಾಡಿ, 
ಕಂಡ ಕಂಡ ದೇವರಿಗೆ ಹರಕೆ ಹೊತ್ತು, ಧೃತಿಗೆಡದೆ 
ಪ್ರತಿದಿನ ಮುಂಜಾನೆ ದೇವರಲ್ಲಿ ಮಾಡುತ್ತಿದ್ದ 
ಆ ಪ್ರಾರ್ಥನೆಗೆ ಫಲ ದೊರಕುವ ಸಮಯ 
ಬಂದೇಬಿಟ್ಟಿತ್ತು. ಸುಮಾರು ಐದು ವರುಷಗಳ 
ಹಿಂದೆ ಅಪಘಾತದ ಪರಿಣಾಮವಾಗಿ 
ಜೀವಚ್ಛವವಾಗಿಬಿಟ್ಟಿದ್ದ ಅವಳ ತಂದೆಯಲ್ಲಿ 
ಇಂದು ಮೊಟ್ಟಮೊದಲನೆ ಬಾರಿಗೆ ಜೀವದ 
ಸಂಚಲನವಾಗಿತ್ತು. ಚಿಕಿತ್ಸೆಗೆ ಸ್ಪಂದಿಸತೊಡಗಿದ 
ಅವಳ ತಂದೆಯು ಅಪಾಯದಿಂದ 
ಪಾರಾಗಿರುವರೆಂಬ ಸುದ್ದಿ ಕೇಳಿ 
ಅವಳು ಮತ್ತೆ ಅದೇ ಐದು ವರುಷ ಹಿಂದಿನ 
'ತಂದೆಯ ಪುಟ್ಟ ಮಗಳು' ಆಗಿದ್ದಳು. 
ಅವಳ ಸಂತಸ ಕಂಡ ಬಾನು ಆನಂದಭಾಷ್ಪ 
ಸುರಿಸಿತ್ತು; ಹೆಪ್ಪುಗಟ್ಟಿದ ದುಗುಡ 
ಹರಿದುಹೋಗುವಂತೆ. 
ಆ ಪ್ರತಿ ಮಳೆಹನಿಯಲ್ಲೂ ಸ್ವರ್ಗದ 
ಆಶೀರ್ವಾದವಿತ್ತು; 
ಅವಳ ತಾಯಿಯಿಂದ!  #ಅವಳು   #ಸಣ್ಣಕಥೆ #ಅರೆಘಳಿಗೆ_ಹೊಳೆದ_ಸಾಲುಗಳು
#aestheticthoughts 
#yqbaba  #yqjogi #picquote    #YourQuoteAndMine
Collaborating with Aesthetic Thoughts

Shruthi U

#ಧ್ರುವತಾರೆ-೪ #ಸಣ್ಣಕಥೆ #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada #ಕನ್ನಡ_ಪ್ರೀತಿ

read more
ಮುಂಜಾನೆಯ ಮುಸುಕು. ಕಡಲು ಮೊದಲಿನಂತೆ ಶಾಂತವಾಗಿತ್ತು. ಆಕೆ ಎಂದಿನಂತೆ ತನ್ನವನ ಬರುವಿಕೆಯ ನಿರೀಕ್ಷೆಯಲ್ಲಿ ಕಡಲತಡಿಯಲ್ಲಿ ನಿಂತು ದಿಗಂತವನ್ನೇ ದಿಟ್ಟಿಸುತ್ತಿದ್ದಳು. ಆಕೆಯ ಭುಜದಲ್ಲಿ ಮಗುವು ನಿದ್ರಿಸುತ್ತಿತ್ತು. ಆಗ ಕಂಡಳವಳು! ಕಡಲತಡಿಯಲ್ಲಿ ನೌಕೆಯೊಂದರ ಅವಶೇಷಗಳು. ಅದರತ್ತ ಬೆವರುತ್ತಾ ಭಯದ ಹೆಜ್ಜೆಯಿಕ್ಕಿದಳು. ಹೌದು! ಅದು ಅವನೇ! ಓಡಿಹೋಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವನ ತಲೆಯನ್ನು ತನ್ನ ಮಡಿಲಲ್ಲಿರಿಸಿ ಎಚ್ಚರಿಸಲು ಪ್ರಯತ್ನಿಸಿದಳು. ನಿಧಾನಕ್ಕೆ ಕಣ್ಣು ತೆರೆದನಾತ. ಆಗ ಎಚ್ಚೆತ್ತ ಮಗು ಅವನನ್ನು ಕಂಡು ತನ್ನ ಬೊಚ್ಚು ಬಾಯಿ ಬಿಟ್ಟು ನಗುತ್ತಿತ್ತು. ಸಂತಸದಲಿ ಕಡಲ ತೆರೆಗಳು ದಡವನ್ನಪ್ಪುತ್ತಿದ್ದವು. ಮುಂಜಾನೆಯ ಆಗಸದಲಿ ಇದಕ್ಕೆ ಸಾಕ್ಷಿಯೆಂಬಂತೆ ಹೊಳೆಯುತ್ತಿತ್ತು ಧ್ರುವ ತಾರೆ!             #ಧ್ರುವತಾರೆ-೪ #ಸಣ್ಣಕಥೆ  #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು
#yqjogi #yqkannada  
#ಕನ್ನಡ_ಪ್ರೀತಿ

Shruthi U

#ಧ್ರುವತಾರೆ-೩ #ಸಣ್ಣಕಥೆ #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada #ಕನ್ನಡ_ಪ್ರೀತಿ

read more
ತಾನಿನ್ನು ಮನೆ ಸೇರುವುದು ಕನಸಿನ ಮಾತು ಎಂದುಕೊಂಡನವನು. ನಿಸ್ಸಹಾಯಕನಾಗಿ ಜಡಿಮಳೆಯ ನಡುವೆಯೂ ತನ್ನ ಮನೆಯವರಿಗಾಗಿ, ತನ್ನವರಿಗಾಗಿ ಕಾಣದ ಶಕ್ತಿಯಲ್ಲಿ ಮೊರೆಯಿಟ್ಟನು. ಪ್ರಕೃತಿಯೆದುರು ಮಾನವ ತೃಣ ಸಮಾನ ಎಂಬ ಮಾತು ಅದೆಷ್ಟು ಸತ್ಯ! ಎನ್ನಿಸಿತವನಿಗೆ. ಪ್ರಕೃತಿಯನ್ನು ದೇವಿ ಎಂದು ಪೂಜಿಸುವ ಕುಲ ಅವನದು‌. ಅಂತಹ ಮಾತೆಯೊಡಲಲ್ಲಿ ಕಣ್ಮುಚ್ಚಿದರೂ ಅದು ಭಾಗ್ಯ ಎನ್ನುವ ಧೋರಣೆ ಅವನದು. ಇದೇ  ಕಡಲಿನ ಶಾಂತ ಸ್ವರೂಪವನ್ನೂ ಅವನು ಚೆನ್ನಾಗಿ ಬಲ್ಲನು. ಅದೆಷ್ಟು ಬಾರಿ ಈ ಕಡಲು ಅವನ ಹೊಟ್ಟೆಗೆ ಹಿಟ್ಟಿನ ದಾರಿ ನೀಡಿಲ್ಲ! ಅದೆಷ್ಟು ಬಾರಿ ಅವನ ಅದೆಷ್ಟೋ ದುಗುಡಗಳನ್ನು ಕಡಲತಡಿಯ ತಣ್ಣನೆಯ ಗಾಳಿ ತಣಿಸಿಲ್ಲ! ಅದೆಷ್ಟು ನಿದ್ರೆಯಿರದ ರಾತ್ರಿಗಳನ್ನು ಅವನು ಅದೇ ಕಡಲತಡಿಯ ಮರಳ ಮೇಲೆ ಕಳೆದಿಲ್ಲ! ಕದಡಿದ, ಭಾರವಾದ ಮನ ಹೊತ್ತು ಆ ತುದಿಯ ಹೆಬ್ಬಂಡೆಯ ಮೇಲೆ ಕುಳಿತು ಮೌನವಾಗಿ ಕಡಲ ಶಾಂತ ಅಲೆಗಳ ಹೊಯ್ದಾಟವನ್ನು ನೋಡನೋಡುತ್ತಾ ಆತ್ಮ ಮಂಥನ ನಡೆಸಿದ ದಿನಗಳೆಷ್ಟೋ! ಒಟ್ಟಿನಲ್ಲಿ ಕಡಲು ಅವನ ಜೀವ, ಜೀವನವೇ ಆಗಿತ್ತು. ಒಂದು ವೇಳೆ ತಾನು ಇಂತಹ ಮಾತೃ ಸಮಾನವಾದ ಕಡಲ ಒಡಲಲ್ಲಿ ಹೇಳಹೆಸರಿಲ್ಲದೆ ಗತಿಸಿದರೂ ಅದು ತನ್ನ ಪಾಲಿನ ಭಾಗ್ಯವೆಂದೇ ಅವನ ಭಾವ. ಕಣ್ಮುಚ್ಚಿ ಕೈಮುಗಿದು ನಿಂತನವನು ತನ್ನ ಸಾವನ್ನು ಸ್ವಾಗತಿಸಲೇನೋ ಎಂಬಂತೆ! 
 #ಧ್ರುವತಾರೆ-೩ #ಸಣ್ಣಕಥೆ  #ಹಾಗೆ_ಸುಮ್ಮನೆ  #ಅರೆಘಳಿಗೆ_ಹೊಳೆದ_ಸಾಲುಗಳು  
#yqjogi #yqkannada  
#ಕನ್ನಡ_ಪ್ರೀತಿ

Shruthi U

#ಧ್ರುವತಾರೆ-೨ #ಸಣ್ಣಕಥೆ #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada #ಕನ್ನಡ_ಪ್ರೀತಿ

read more
ದಿನಗಳುರುಳಿದವು. ಅದೊಂದು ದಿನ ತಣ್ಣಗೆ ಬೀಸುತ್ತಿತ್ತು ಗಾಳಿ. ಆಗಸದಿಂದ ಎಂದಿನಂತೆ ಸಣ್ಣ ಸಣ್ಣ ಹನಿಗಳು ಸಾಗರವನ್ನು ಸೇರಲೋ ಎಂಬಂತೆ ಪಟಪಟನೆ ಪೈಪೋಟಿ ನಡೆಸುತ್ತಾ ಬೀಳುತ್ತಿದ್ದವು. ಆತನೋ ಎಂದಿನಂತೆ ಧ್ರುವ ತಾರೆಯ ನಿರೀಕ್ಷೆಯಲಿ ಆಗಸವನೇ ದಿಟ್ಟಿಸುತ್ತಿದ್ದ. ಇದ್ದಕ್ಕಿದ್ದಂತೆ ಕಾರ್ಮೋಡವು ಇನ್ನಷ್ಟು ಕಪ್ಪಿಟ್ಟಿತು. ಸುತ್ತಲೂ ಕತ್ತಲಾವರಿಸಿತು. ನೋಡನೋಡುತ್ತಿದ್ದಂತೆ ತಣ್ಣನೆ ಬೀಸುತ್ತಿದ್ದ ಗಾಳಿ ರೌದ್ರಾವತಾರ ತಾಳಿತು. ಹನಿಗಳ ಪೈಪೋಟಿಯು ಎಲ್ಲೆ ಮೀರತೊಡಗಿತು. ಸಾಗರವನ್ನು ಸೇರುವ ತವಕ ತೀವ್ರವಾಗಿ ಮಧ್ಯೆಯಿರುವ ನೌಕೆಯನ್ನು ನುಂಗಲೇನೋ ಎಂಬಂತೆ ಸುರಿಯತೊಡಗಿತು ಜಡಿಮಳೆ. ನೌಕೆಯಂತೂ ಪ್ರಕೃತಿಯ ಈ ಅನಿರೀಕ್ಷಿತ ನಡೆಯಿಂದ ತತ್ತರಿಸತೊಡಗಿತು. ಸಾಗರದ ನೀರಿನ ಮಟ್ಟ ಮೇಲೇರುತ್ತಿದ್ದಂತೆ ತೋರಿತು. ನೀರಿನ ಏರಿಳಿತಗಳ ಸದ್ದು ಎಷ್ಟೋ ದಿನದಿಂದ ಹಸಿದು ಬಳಲಿದ ಮೃಗವೊಂದರ ಉಸಿರಿನ ಸದ್ದಿನಂತೆ ಭಾಸವಾಗತೊಡಗಿತು. ಜಡಿಮಳೆ; ಸುಂಟರಗಾಳಿ; ಕತ್ತಲೆ; ಅಲ್ಲೊಮ್ಮೆ ಇಲ್ಲೊಮ್ಮೆ ಆಗಸವನೇ ತುಂಡರಿಸುವಂತೆ ಕಂಡುಮರೆಯಾಗುವ ಕೋಲ್ಮಿಂಚು; ಸಾಗರದ ರೌದ್ರ ನರ್ತನ; ಗಿವಿಗಡಚಿಕ್ಕುವ ಗುಡುಗು; ಬೆಚ್ಚಿಬೀಳಿಸುವ ಸಿಡಿಲು...
 #ಧ್ರುವತಾರೆ-೨ #ಸಣ್ಣಕಥೆ #ಹಾಗೆ_ಸುಮ್ಮನೆ  #ಅರೆಘಳಿಗೆ_ಹೊಳೆದ_ಸಾಲುಗಳು
#yqjogi #yqkannada   
#ಕನ್ನಡ_ಪ್ರೀತಿ

Shruthi U

#ಧ್ರುವತಾರೆ-೧ #ಸಣ್ಣಕಥೆ #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada #ಕನ್ನಡ_ಪ್ರೀತಿ

read more
ನೌಕೆಯದೊಂದು ಒಬ್ಬಂಟಿಯಾಗಿ ನಿಧಾನವಾಗಿ ಸಾಗುತ್ತಿತ್ತು ವಿಶಾಲ ಸಾಗರದ ನಡುವಿನಲ್ಲಿ. ಎತ್ತೆತ್ತಲೂ ನೀರು! ಸುತ್ತಲೂ ಕಾಣುವುದು ನೀರೊಂದೇ. "ಇಂದಾದರೂ ನನ್ನೆಡೆಗೆ ಕೃಪೆ ತೋರೆಯಾ ಓ ತಾರೇ!!" ದಟ್ಟವಾಗಿ ಮುಸುಕಿದ್ದ ಕಾರ್ಮೋಡದ ನಡುವಿನ ಅದಾವುದೋ ಒಂದು ಚೈತನ್ಯದ ನಿರೀಕ್ಷೆಯಲ್ಲಿರುವ ಆತನ ಮನವು ನಿಸ್ಸಹಾಯಕತೆಯಿಂದ ನುಡಿದಾಗ ಅದೊಂದು ನಿಟ್ಟುಸಿರು ಭಾರವಾಗಿ ಹೊರಹೊಮ್ಮಿತು. ಕಣ್ಣೆದುರು ತನ್ನ ಮುದ್ದು ಹೆಂಡತಿಯ ಮುಖ ಕಂಡಿತು. ತಾನು ಊರು ಬಿಟ್ಟಾಗ ಆಕೆಗೆ ನಾಲ್ಕು ತಿಂಗಳು. ಈಗಾಗಲೇ ಆಕೆಯ ಮಡಿಲಲ್ಲಿ ತನ್ನ ಮಗು ನಗುತ್ತಿರಬಹುದು. ಹೇಗಿರಬಹುದು ಮಗು! ಹೊಳೆಯುವ ಕಣ್ಣುಗಳು, ಜೊಲ್ಲು ಸೂಸುವ ಪುಟ್ಟ ತುಟಿಗಳು, ಪುಟ್ಟ ಬೆರಳುಗಳು, ಒದೆಯುವ ತುಂಟ ಕಾಲುಗಳು.... ಆಹ್!! ತಾನ್ಯಾವಾಗ ಅದನ್ನೊಮ್ಮೆ ಎತ್ತಿ ಮನಸಾರೆ ಮುದ್ದಿಸುವೆನೋ ಎನ್ನಿಸಿತವನಿಗೆ. ಮರುಕ್ಷಣ ಆತನ ಮುಖ ಕಪ್ಪಿಟ್ಟಿತು. ಎಷ್ಟು ದಿನವೆಂದು ಹೀಗೆ ತಲೆಯೆತ್ತಿ ಆ ತಾರೆಗಾಗಿ ಹಂಬಲಿಸುವುದು! ಆಗಸವೂ ತನ್ನ ಬಾಳಿನಂತೆ! ಕಾರ್ಮೋಡ ಮುಸುಕಿ ಕತ್ತಲಾಗಿದೆ. ಎಂದೆಲ್ಲಾ ಯೋಚಿಸುತ್ತಾ ನಿಂತನವನು ಧ್ರುವ ತಾರೆಯ ನಿರೀಕ್ಷೆಯಲ್ಲಿ... #ಧ್ರುವತಾರೆ-೧  #ಸಣ್ಣಕಥೆ #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು 
#yqjogi #yqkannada 
#ಕನ್ನಡ_ಪ್ರೀತಿ

ರೇಣುಕೇಶ್ ಸದಾಶಿವಯ್ಯ

ನಮ್ಮೂರಿಗೆ ರಜೆಗೆಂದು‌ ಹೋಗಿದ್ದೆ. ಆಗ ಬಹುಶಃ ನಾನು ಐದು ಅಥವಾ ಆರನೇ ತರಗತಿಯಲ್ಲಿ ಓದುತ್ತಿದ್ದೆ ಅನ್ನಿಸುತ್ತೆ. ನಮ್ಮೂರು ಎಂದರೆ ಅಂತ ದೊಡ್ಡ ಊರೇನಲ್ಲ. ಸುಮಾರು ಒಂದೈವತ್ತು ಅರವತ್ತು ಮನೆಗಳ ಸಣ್ಣ‌ಹಳ್ಳಿ. ಆದರೆ ದೇಶದ ರಾಜಕೀಯವೆಲ್ಲಾ ಅಲ್ಲಿ ಚರ್ಚಿತವಾಗುತ್ತಿತ್ತು. ಜನ ಅನಕ್ಷರಸ್ಥರಾದರೂ ದಿಲ್ಲಿಯ ವಿಷಯಗಳನ್ನೂ ನಿರರ್ಗಳವಾಗಿ ಮಾತನಾಡುತ್ತಿದ್ದರು. ಆ ಹಳ್ಳಿಗೆ ಆಗ ವಿದ್ಯುತ್ ಸಂಪರ್ಕವಿರಲಿಲ್ಲ. ಪೆಟ್ರೊಮ್ಯಾಕ್ಸ್ ಇದ್ದವನೇ ಶ್ರೀಮಂತ. ಎಲ್ಲರ ಮನೆಗಳಲ್ಲಿಯೂ ಸೀಮೆಎಣ್ಣೆ ಬುಡ್ಡಿ. ಆ ಬುಡ್ಡಿಗೆ ಗಾಜಿನ ಹೊರಕವಚ. ಇಂತಿಪ್ಪ ಈ ಹಳ್ಳಿಯಲ್ಲಿ ಜಾತ್ರೆ, ಮನೆ ದೇವರ ಪರೇವು, ದಾಸಯ್ಯನ ಜಾತ್ರೆ, ಊರಿನ ಕೊಂಡ ಇತ #yrqtjogi #yrqtbaba #ಸಣ್ಣಕಥೆ

read more
ನಿಜ ಜೀವನದ ಹಾಸ್ಯ ಕತೆ
(ಅಡಕದಲ್ಲಿ ಓದಿ) ನಮ್ಮೂರಿಗೆ ರಜೆಗೆಂದು‌ ಹೋಗಿದ್ದೆ.  ಆಗ ಬಹುಶಃ ನಾನು ಐದು ಅಥವಾ ಆರನೇ ತರಗತಿಯಲ್ಲಿ ಓದುತ್ತಿದ್ದೆ ಅನ್ನಿಸುತ್ತೆ.  ನಮ್ಮೂರು ಎಂದರೆ ಅಂತ ದೊಡ್ಡ ಊರೇನಲ್ಲ.  ಸುಮಾರು ಒಂದೈವತ್ತು ಅರವತ್ತು ಮನೆಗಳ ಸಣ್ಣ‌ಹಳ್ಳಿ.  ಆದರೆ ದೇಶದ ರಾಜಕೀಯವೆಲ್ಲಾ ಅಲ್ಲಿ ಚರ್ಚಿತವಾಗುತ್ತಿತ್ತು.  ಜನ ಅನಕ್ಷರಸ್ಥರಾದರೂ ದಿಲ್ಲಿಯ ವಿಷಯಗಳನ್ನೂ ನಿರರ್ಗಳವಾಗಿ ಮಾತನಾಡುತ್ತಿದ್ದರು.  ಆ ಹಳ್ಳಿಗೆ ಆಗ ವಿದ್ಯುತ್ ಸಂಪರ್ಕವಿರಲಿಲ್ಲ.  ಪೆಟ್ರೊಮ್ಯಾಕ್ಸ್ ಇದ್ದವನೇ ಶ್ರೀಮಂತ.  ಎಲ್ಲರ ಮನೆಗಳಲ್ಲಿಯೂ ಸೀಮೆಎಣ್ಣೆ ಬುಡ್ಡಿ.  ಆ ಬುಡ್ಡಿಗೆ ಗಾಜಿನ ಹೊರಕವಚ.  ಇಂತಿಪ್ಪ ಈ ಹಳ್ಳಿಯಲ್ಲಿ ಜಾತ್ರೆ, ಮನೆ ದೇವರ ಪರೇವು, ದಾಸಯ್ಯನ ಜಾತ್ರೆ, ಊರಿನ ಕೊಂಡ ಇತ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile