Nojoto: Largest Storytelling Platform

Best ಕನ್ನಡ_ಪ್ರೀತಿ Shayari, Status, Quotes, Stories

Find the Best ಕನ್ನಡ_ಪ್ರೀತಿ Shayari, Status, Quotes from top creators only on Nojoto App. Also find trending photos & videos about 'ಕನ್ನಡ हिन्दी', 'ಕನ್ನಡ मराठी',

  • 1 Followers
  • 13 Stories

Shruthi U

ಬೇಲಿ ಕೊನೆಯ ಹೂವು #ಅಂತರಂಗದ_ಶ್ರುತಿ #ಕನ್ನಡ_ಪ್ರೀತಿ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada

read more
ಬೇಲಿ ಕೊನೆಯ ಹೂವು

ಅದು ಬೇಲಿ ಕೊನೆಯ ಕಾಗದ ಹೂವು. ಕೆನೆಹಾಲಿನ‌ಬಣ್ಣದ್ದು. ಮೂಲತಃ ಅದರ ಬಣ್ಣ ಅಚ್ಚಬಿಳುಪಾಗಿತ್ತೇನೋ! ಬೇಲಿಯಲ್ಲಿ ಬೆಳೆದ ಕಾಗದ ಹೂವಲ್ಲವೇ! ಎಲೆಗಳೇ ಹಚ್ಚ ಹಸುರಿಲ್ಲ; ಧೂಳಿನಿಂದಾಗಿ ಮಾಸಿಹೋದ ಬಣ್ಣ. ಆದರೂ ಆ ದಾರಿಯಾಗಿ ಹಾದು ಹೋಗುವಾಗಲೊಮ್ಮೆ ಇವಳಿಗೇನೋ ಒಂದು ನೆಮ್ಮದಿ. ಆ ಕಾಗದ ಹೂವುಗಳನ್ನೊಮ್ಮೆ ಕಣ್ತುಂಬಿಕೊಂಡು ನಿಟ್ಟುಸಿರು ಬಿಟ್ಟಾಗಲೊಮ್ಮೆ ಇವಳು ನಿರಾಳ. ಮನದ ಭಾರ ಇಳಿದು, ದುಗುಡ ಕಳೆದು ಹೊಸ ಚೈತನ್ಯದೊಂದಿಗೆ ಮುಂದೆ ಇವಳ ಪಯಣ.

ಬರಬರುತ್ತಾ ಇವಳಿಗೆ ಆ ಕಾಗದ ಹೂವನ್ನು ಕಂಡೊಡನೆಯೇ ವಿಚಿತ್ರ ಬಯಕೆಯೊಂದು ಮನದಲ್ಲಿ ಮೂಡಿ ಮರೆಯಾಗಲಾರಂಭಿಸಿತು. ಅದೆಷ್ಟೋ ಬಾರಿ ತಾನೂ ಸಹ ಇದೇ ಬೇಲಿ ಬದಿಯ ಕಾಗದ ಹೂವಿನಂತೆ ಯಾರ ಗಮನವೂ ಸೆಳೆಯದೆ, ಯಾರೊಂದಿಗೂ ಬೆರೆಯದೆ, ಮೌನಿಯಾಗಿ, ಯಾರೂ ಕಂಡರಿಯದ ಊರಿಗೆ ಹೋಗಿ ಜೀವಿಸಬೇಕು ಎಂದಂದುಕೊಂಡವಳಿವಳು. ಆದರೀಗ; ತೀರ ಇತ್ತೀಚೆಗೆ ಕಾಗದಹೂವಿನ ಟೊಂಗೆಯೊಂದನ್ನು ಕಿತ್ತು ಮನೆಗೆ ಹೊತ್ತೊಯ್ಯುವ ಅದಮ್ಯ ಬಯಕೆ! ಹಿತ್ತಲ ಖಾಲಿ ಜಾಗ ಕಂಡಾಗಲೆಲ್ಲ ಕಾಗದ ಹೂವಿನದೇ ನೆನಪು!

ಅಂತೂ ನಿನ್ನೆ ಮುಸ್ಸಂಜೆ ಇವಳ ಮನೆ ಹಿತ್ತಲಲ್ಲಿ ಕಾಗದ ಹೂವಿನ ಗಿಡ ಖುಷಿಯಲ್ಲಿ ತಲೆದೂಗುತ್ತಿತ್ತು.

 ಬೇಲಿ ಕೊನೆಯ ಹೂವು

#ಅಂತರಂಗದ_ಶ್ರುತಿ  #ಕನ್ನಡ_ಪ್ರೀತಿ #ಅರೆಘಳಿಗೆ_ಹೊಳೆದ_ಸಾಲುಗಳು 
 #yqjogi #yqkannada

Shruthi U

ಅದೆಷ್ಟೋ ದಿನಗಳ ಬಳಿಕ... #ಅಂತರಂಗದ_ಶ್ರುತಿ #ಕನ್ನಡ_ಪ್ರೀತಿ #ಅವನು_ಅವಳು #imaginary_tale #yqjogi #yqkannada #yqbaba

read more
ಕಲೆ!

ಕಾರಿರುಳ ಒಡಲಲ್ಲೊಂದು ಹಳೇ ಮನೆ. ಕಿಟಕಿ ಬಳಿಯ ಪುಟ್ಟ ದೀಪದ ಬೆಳಕು ಗಾಳಿಗೆ ಆಗೊಮ್ಮೆ ಈಗೊಮ್ಮೆ ಓಲಾಡುತ್ತಿದೆ. ಒಲವಿನ ಓಲೆಯೊಳಗದೊಂದು ಕಪ್ಪು ಕಲೆ. ಅದೇನೋ ಬರೆಯುವ ಅವಸರದಲ್ಲಿ ಬಿದ್ದ ಶಾಯಿಯ ಗುರುತಿರಬಹುದೇನೋ ಎಂದುಕೊಂಡಳವಳು. ಆದರೆ ಆ ಕಲೆ ಹೆಪ್ಪುಗಟ್ಟಿದ ನೆತ್ತರ ಉತ್ತರವೆಂಬ ಸತ್ಯವನರಿತವನು ಅವನು ಮಾತ್ರ. ಕಡೆಗೂ ಆ ಓಲೆಯೊಂದು ಅವಳ ಕೈಸೇರಿತೆಂದು ಅವನು ನಗುತ್ತಿರುವನೇನೋ ಅಮೂರ್ತನಾಗಿ ತೃಪ್ತಿಯಿಂದ. ಆದರೆ ಅವಳು ಹೇಗೆ ಅರಿತಾಳು ಅದವನ ಕಡೆಯ ಪತ್ರವೆಂದು!
 ಅದೆಷ್ಟೋ ದಿನಗಳ ಬಳಿಕ...





#ಅಂತರಂಗದ_ಶ್ರುತಿ  #ಕನ್ನಡ_ಪ್ರೀತಿ  #ಅವನು_ಅವಳು #imaginary_tale #yqjogi #yqkannada #yqbaba

Shruthi U

ನಿರಾಶೆ! ಮಧ್ಯಾಹ್ನದ ಊಟದ ನಂತರ ತನಗಾಗಿ ಕಾಯುತ್ತಿದ್ದ ಆ ಮೂಲೆಯ ಹಳೆಯ ಕಪಾಟಿನ ಮೇಲೆ ಸುಮ್ಮನೆ ಬಿದ್ದಿದ್ದ ದಪ್ಪ ಪುಸ್ತಕವನ್ನೋದುವ ಆಸೆಯಾಯಿತವಳಿಗೆ. ಎಟುಕಲಾರದು ಕೈಗೆ; ಎಷ್ಟು ತುದಿಗಾಲ ಮೇಲೆ ನಿಂತು, ಕೈ ಉದ್ದ ಚಾಚಿದರೂ. ಅದೇಕೋ ಈ ಬಾರಿ ಆ ಪುಸ್ತಕಕ್ಕೆ ಅವಳನ್ನು ಆಟವಾಡಿಸುವ ಮನಸಾಗಿದೆಯೇನೋ! ಪ್ರತಿಬಾರಿಯೂ ಅವಳು ಓದಲಿ ಎಂದು ಕೈಗೇ ತಾಕುತ್ತಿದ್ದ ಪುಸ್ತಕವದು. ಅಟ್ಟದ ಮೇಲೆ ಏನೋ ಹಳೆ ಪುಸ್ತಕಗಳನ್ನು ಕೆದಕುತ್ತಿದ್ದಾಗ ಇಲಿ ಹರಿದು ಚಿಂದಿ ಮಾಡಿದ ಅದೆಷ್ಟೋ ಪುಸ್ತಕಗಳ ನಡುವೆ, ಚೂರುಚೂರಾದ ಕಾಗದಗಳ ರಾಶಿಯೆಡೆಯಲ್ಲಿ ಇದೊಂದು ದಪ್ಪ ರಟ್ಟಿನ ದಪ್ಪ ಪುಸ್ತಕ ಕಂಡಿತ್ತವಳಿಗೆ. ಬೇರೆಲ್ಲಾ ಪುಸ್ತಕಗಳ ಆ ಚಿಂದಿ ಅವಸ್ಥೆಯೆ #yqkannada #yqjogi #ಸಣ್ಣಕಥೆ #imaginary_tale #ಕನ್ನಡ_ಪ್ರೀತಿ #ಅಂತರಂಗದ_ಶ್ರುತಿ

read more
ಮಧ್ಯಾಹ್ನದ ಊಟದ ನಂತರ ತನಗಾಗಿ ಕಾಯುತ್ತಿದ್ದ 
ಆ ಮೂಲೆಯ ಹಳೆಯ ಕಪಾಟಿನ ಮೇಲೆ ಸುಮ್ಮನೆ 
ಬಿದ್ದಿದ್ದ ದಪ್ಪ ಪುಸ್ತಕವನ್ನೋದುವ ಆಸೆಯಾಯಿತವಳಿಗೆ. 
ಎಟುಕಲಾರದು ಕೈಗೆ; ಎಷ್ಟು ತುದಿಗಾಲ ಮೇಲೆ ನಿಂತು, 
ಕೈ ಉದ್ದ ಚಾಚಿದರೂ. ಅದೇಕೋ ಈ ಬಾರಿ ಆ ಪುಸ್ತಕಕ್ಕೆ 
ಅವಳನ್ನು ಆಟವಾಡಿಸುವ ಮನಸಾಗಿದೆಯೇನೋ! 

(ಕ್ಯಾಪ್ಷನ್ನಲ್ಲಿ ಓದಿರಿ) ನಿರಾಶೆ!

ಮಧ್ಯಾಹ್ನದ ಊಟದ ನಂತರ ತನಗಾಗಿ ಕಾಯುತ್ತಿದ್ದ ಆ ಮೂಲೆಯ ಹಳೆಯ ಕಪಾಟಿನ ಮೇಲೆ ಸುಮ್ಮನೆ ಬಿದ್ದಿದ್ದ ದಪ್ಪ ಪುಸ್ತಕವನ್ನೋದುವ ಆಸೆಯಾಯಿತವಳಿಗೆ. ಎಟುಕಲಾರದು ಕೈಗೆ; ಎಷ್ಟು ತುದಿಗಾಲ ಮೇಲೆ ನಿಂತು, ಕೈ ಉದ್ದ ಚಾಚಿದರೂ. ಅದೇಕೋ ಈ ಬಾರಿ ಆ ಪುಸ್ತಕಕ್ಕೆ ಅವಳನ್ನು ಆಟವಾಡಿಸುವ ಮನಸಾಗಿದೆಯೇನೋ! ಪ್ರತಿಬಾರಿಯೂ ಅವಳು ಓದಲಿ ಎಂದು ಕೈಗೇ ತಾಕುತ್ತಿದ್ದ ಪುಸ್ತಕವದು. ಅಟ್ಟದ ಮೇಲೆ ಏನೋ ಹಳೆ ಪುಸ್ತಕಗಳನ್ನು ಕೆದಕುತ್ತಿದ್ದಾಗ ಇಲಿ ಹರಿದು ಚಿಂದಿ ಮಾಡಿದ ಅದೆಷ್ಟೋ ಪುಸ್ತಕಗಳ ನಡುವೆ, ಚೂರುಚೂರಾದ ಕಾಗದಗಳ ರಾಶಿಯೆಡೆಯಲ್ಲಿ ಇದೊಂದು ದಪ್ಪ ರಟ್ಟಿನ ದಪ್ಪ ಪುಸ್ತಕ ಕಂಡಿತ್ತವಳಿಗೆ. ಬೇರೆಲ್ಲಾ ಪುಸ್ತಕಗಳ ಆ ಚಿಂದಿ ಅವಸ್ಥೆಯೆ

Shruthi U

ಅವಳು... Thank you for the poke Shivani U.S 😊😊 and Preethi Bhat 😊😊 #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #ಕನ್ನಡ_ಪ್ರೀತಿ #ಅವಳು #yqjogi #yqkannada #imaginary_tale #ಅಂತರಂಗದ_ಶ್ರುತಿ

read more
ಮನದಂಗಳದಲಿ ಹೊಂಬೆಳಕೊಂದ ಕಂಡು,
ಬೆಳದಿಂಗಳಿನ ಇರುಳದೊಂದ ನೆನೆದು,
ಒಳಗೊಳಗೇ ಮರುಳು ಮನವ ಹಳಿದು,
ಕೊಳದ ಬಳಿಯ ಆ ನೀಳ ನೆರಳ ಬರಸೆಳೆವ 
ಕನಸ ಕಾಣುತ್ತಿದ್ದಳವಳು. 
ಕೊಳದೊಳಗಿನ ಚಳಿ ನೀರಿನ ಮೀನದೊಂದು 
ತಳದಿಂದ ಬಂದು ಪಾದತಳದಿ ಕಚಗುಳಿಯಿಡಲು 
ಸಣ್ಣಗೆ ನಡುಗಿ ಎಚ್ಚೆತ್ತಳವಳು ತುಂಟ ನಗೆಯೊಂದಿಗೆ.
 ಅವಳು...

Thank you for the poke Shivani U.S 😊😊 and Preethi Bhat 😊😊

#ಹಾಗೆ_ಸುಮ್ಮನೆ
 #ಅರೆಘಳಿಗೆ_ಹೊಳೆದ_ಸಾಲುಗಳು  #ಕನ್ನಡ_ಪ್ರೀತಿ #ಅವಳು 
#yqjogi #yqkannada  
#imaginary_tale

Shruthi U

#ಒಳಗಣ್ಣು #yqkannada #yqjogi #ಕನ್ನಡ_ಪ್ರೀತಿ

read more
ಕಣ್ಣ ಹೊಳಪು ಹೇಳುವುದದೇನನ್ನೋ...
ಏನದು ಅರಿಯಲು ತೆರೆಯಬೇಕು ಒಳಗಣ್ಣು... #ಒಳಗಣ್ಣು #yqkannada #yqjogi 
#ಕನ್ನಡ_ಪ್ರೀತಿ

Shruthi U

#ಅರೆಘಳಿಗೆ_ಹೊಳೆದ_ಸಾಲುಗಳು #ದೂರ_ದೂರ #ಪಯಣ #yqjogi #yqkannada #ಕನ್ನಡ_ಪ್ರೀತಿ

read more
ಸಾಗುತ್ತಾ ದೂರ ದೂರ... 
ಕತ್ತಲೆ ತುಂಬಿ ಕುರುಡನಾಗಿರುವೆ ನಾನು. ನಿಶೆಯ ನಶೆಯಲ್ಲಿ ದಿಶೆಯನರಸುತ್ತಾ ನಶಿಸುತ್ತಿರುವೆ ನಾನು. ಇನ್ನು ಉಷೆಯ ಕಿರಣಗಳ ಸೈರಿಸಿ ಖುಷಿಯ ಸೋಗನು ಮರೆಸಿ ಅರೆನಿಮಿಷ ಜೀವಿಸುವ ಆಶಯವಿಲ್ಲ ನನಗೆ. ಪಯಣವದು ಎಂದಾದರೊಂದು ದಿನ ಅಂತ್ಯವಾಗಲೇಬೇಕು‌. ಅದು ಇಂದೋ ನಾಳೆಯೋ ಬಲ್ಲವರಾರು?!? #ಅರೆಘಳಿಗೆ_ಹೊಳೆದ_ಸಾಲುಗಳು #ದೂರ_ದೂರ #ಪಯಣ #yqjogi #yqkannada #ಕನ್ನಡ_ಪ್ರೀತಿ

Shruthi U

#ಮೌನ #ಅರೆಘಳಿಗೆ_ಹೊಳೆದ_ಸಾಲುಗಳು #ಮನದ_ಮಾತು #yqjogi #yqkannada #ಕನ್ನಡ_ಪ್ರೀತಿ

read more
ಮೌನವೆಂಬುದು ಮನಕ್ಕೆ ತೀರ ಹಿತ ನೀಡುತ್ತದೆ. ಒಮ್ಮೊಮ್ಮೆ ನಿರಾಳ ಭಾವವಾಗಿ; ಮತ್ತೊಮ್ಮೊಮ್ಮೆ ಮನದ ಮಂಥನಕ್ಕೆ ಇಂಬು ನೀಡುವ ಶಕ್ತಿಯಾಗಿ; ಮಗದೊಮ್ಮೆ ಭೋರ್ಗರೆದು ಚಿಮ್ಮಲಣಿಯಾಗಿರುವ ಮನದ ಲಾವಾರಸದ ಸಂಕೇತವಾಗಿ. ಮೌನದ ಮಾತು ಮೌನವಾಗಿದ್ದರೇ ಅರಿಯಲು ಸಾಧ್ಯವೇನೋ! #ಮೌನ #ಅರೆಘಳಿಗೆ_ಹೊಳೆದ_ಸಾಲುಗಳು  #ಮನದ_ಮಾತು #yqjogi #yqkannada   #ಕನ್ನಡ_ಪ್ರೀತಿ

Shruthi U

#ಅವನ_ಸ್ವಗತ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada #ಕನ್ನಡ_ಪ್ರೀತಿ

read more
ಅದೊಂದು ಸೋಮವಾರ. ಜನರಿಂದ ತುಂಬಿ ತುಳುಕುತ್ತಿದ್ದ ಬಸ್ಸೊಂದು ನನ್ನೆದುರು ನಿಂತಿತು. ಇಲ್ಲದ ಜಾಗವನ್ನರಸಿ ಬಸ್ಸು ಹತ್ತಿದೆ. ನೂರೆಂಟು ಆಲೋಚನೆಗಳು ತಲೆಯನ್ನು ಮುತ್ತಿದ್ದವು. ಬಸ್ಸಿನ ನೂಕುನುಗ್ಗಲು, ನಿರ್ವಾಹಕನ ಬಿರುನುಡಿಗಳ ನಡುವೆಯೂ ತನ್ನ ಸುತ್ತಲಿನ ಪರಿವೆಯಿಲ್ಲದೆ ಜೋರಾಗಿ ತನ್ನ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಮಧ್ಯವಯಸ್ಕ, ಅವನ ಸಂಭಾಷಣೆಯ ಸಾರವನ್ನರಿತು ಕಿಸಕ್ಕನೆ ನಗುವ ಕೆಲವು ಶಾಲಾ ಬಾಲಕಿಯರು, ತಮ್ಮ ಮೊಬೈಲಿನೊಳಗೆ ಹೊಸ ಪ್ರಪಂಚವನ್ನೇ ತೆರೆದು ಅಲ್ಲಿ ವ್ಯಸ್ತವಾದ ಯುವ ಮನಸುಗಳು, ಅಲ್ಲೊಂದು ಇಲ್ಲೊಂದು ಕಿಟಕಿಯ ಬಳಿ ಕಿವಿಗೆ ಇಯರ್ ಫೋನ್ ಸಿಕ್ಕಿಸಿ ತಮ್ಮ ನಿದ್ರಾ ಪ್ರಪಂಚದಲ್ಲಿ ಕನಸು ಕಾಣುವ ಹುಡುಗ-ಹುಡುಗಿಯರು, ತಾಯಿಯ ಮಡಿಲಲ್ಲಿ ಬೆಚ್ಚಗೆ ಮಲಗಿದ ಕೆಲ ಮುಗ್ಧ ಪುಟಾಣಿಗಳು, ಅದೆಷ್ಟೋ ಗಾಳಿಸುದ್ದಿಗಳನ್ನು ಸಾರವತ್ತಾಗಿ ವಿವರಿಸುವ ಹೆಂಗಳೆಯರು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಟೀಕೆ ಮಾಡುವ ಹಿರಿಯರು...... ಹೀಗೆ ಒಂದು ಬಸ್ಸಿನಲ್ಲಿ ಹಲವಾರು ಪ್ರಪಂಚಗಳೇ ಕಾಣಸಿಗುವಂತಿತ್ತು. ಹೀಗೆ ಕಣ್ಣಾಡಿಸುತ್ತಾ ಒಂದೂವರೆ ಕಾಲಿನಲ್ಲಿ ನಿಂತು ತೂಕಡಿಸುತ್ತಿದ್ದಾಗ... ಅವಳು ಕಂಡಳು. ಕಿಟಕಿ ಬಳಿ, ಮುಗ್ಧಳಂತೆ ಕಣ್ಣು ಮುಚ್ಚಿ ನಿದ್ರಿಸಿದ್ದಳು. ಅವಳ ಮುಂಗುರುಳುಗಳು ಕೆನ್ನೆಗೆ ಮುತ್ತಿಡುತ್ತಿದ್ದವು‌. ತೀಡಿದ ಹುಬ್ಬುಗಳು, ಕಪ್ಪು ರೆಪ್ಪೆಗಳು, ನುಣುಪಾದ ಕೆನ್ನೆ.... ನನ್ನ ತೂಕಡಿಕೆ ಹಾರಿಹೋಗಿತ್ತು. ಅಷ್ಟು ಹೊತ್ತು ಹುಡುಗಿಯೊಬ್ಬಳನ್ನು ನೋಡಿದ ನನ್ನ ಬಗ್ಗೆ ನನಗೆ ನಾಚಿಕೆಯಾಯಿತು. ತಲೆ ಕೊಡವಿಕೊಂಡು ನಕ್ಕೆ. #ಅವನ_ಸ್ವಗತ  #ಅರೆಘಳಿಗೆ_ಹೊಳೆದ_ಸಾಲುಗಳು  
#yqjogi #yqkannada 
#ಕನ್ನಡ_ಪ್ರೀತಿ

Shruthi U

#ಧ್ರುವತಾರೆ-೪ #ಸಣ್ಣಕಥೆ #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada #ಕನ್ನಡ_ಪ್ರೀತಿ

read more
ಮುಂಜಾನೆಯ ಮುಸುಕು. ಕಡಲು ಮೊದಲಿನಂತೆ ಶಾಂತವಾಗಿತ್ತು. ಆಕೆ ಎಂದಿನಂತೆ ತನ್ನವನ ಬರುವಿಕೆಯ ನಿರೀಕ್ಷೆಯಲ್ಲಿ ಕಡಲತಡಿಯಲ್ಲಿ ನಿಂತು ದಿಗಂತವನ್ನೇ ದಿಟ್ಟಿಸುತ್ತಿದ್ದಳು. ಆಕೆಯ ಭುಜದಲ್ಲಿ ಮಗುವು ನಿದ್ರಿಸುತ್ತಿತ್ತು. ಆಗ ಕಂಡಳವಳು! ಕಡಲತಡಿಯಲ್ಲಿ ನೌಕೆಯೊಂದರ ಅವಶೇಷಗಳು. ಅದರತ್ತ ಬೆವರುತ್ತಾ ಭಯದ ಹೆಜ್ಜೆಯಿಕ್ಕಿದಳು. ಹೌದು! ಅದು ಅವನೇ! ಓಡಿಹೋಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವನ ತಲೆಯನ್ನು ತನ್ನ ಮಡಿಲಲ್ಲಿರಿಸಿ ಎಚ್ಚರಿಸಲು ಪ್ರಯತ್ನಿಸಿದಳು. ನಿಧಾನಕ್ಕೆ ಕಣ್ಣು ತೆರೆದನಾತ. ಆಗ ಎಚ್ಚೆತ್ತ ಮಗು ಅವನನ್ನು ಕಂಡು ತನ್ನ ಬೊಚ್ಚು ಬಾಯಿ ಬಿಟ್ಟು ನಗುತ್ತಿತ್ತು. ಸಂತಸದಲಿ ಕಡಲ ತೆರೆಗಳು ದಡವನ್ನಪ್ಪುತ್ತಿದ್ದವು. ಮುಂಜಾನೆಯ ಆಗಸದಲಿ ಇದಕ್ಕೆ ಸಾಕ್ಷಿಯೆಂಬಂತೆ ಹೊಳೆಯುತ್ತಿತ್ತು ಧ್ರುವ ತಾರೆ!             #ಧ್ರುವತಾರೆ-೪ #ಸಣ್ಣಕಥೆ  #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು
#yqjogi #yqkannada  
#ಕನ್ನಡ_ಪ್ರೀತಿ

Shruthi U

#ಧ್ರುವತಾರೆ-೩ #ಸಣ್ಣಕಥೆ #ಹಾಗೆ_ಸುಮ್ಮನೆ #ಅರೆಘಳಿಗೆ_ಹೊಳೆದ_ಸಾಲುಗಳು #yqjogi #yqkannada #ಕನ್ನಡ_ಪ್ರೀತಿ

read more
ತಾನಿನ್ನು ಮನೆ ಸೇರುವುದು ಕನಸಿನ ಮಾತು ಎಂದುಕೊಂಡನವನು. ನಿಸ್ಸಹಾಯಕನಾಗಿ ಜಡಿಮಳೆಯ ನಡುವೆಯೂ ತನ್ನ ಮನೆಯವರಿಗಾಗಿ, ತನ್ನವರಿಗಾಗಿ ಕಾಣದ ಶಕ್ತಿಯಲ್ಲಿ ಮೊರೆಯಿಟ್ಟನು. ಪ್ರಕೃತಿಯೆದುರು ಮಾನವ ತೃಣ ಸಮಾನ ಎಂಬ ಮಾತು ಅದೆಷ್ಟು ಸತ್ಯ! ಎನ್ನಿಸಿತವನಿಗೆ. ಪ್ರಕೃತಿಯನ್ನು ದೇವಿ ಎಂದು ಪೂಜಿಸುವ ಕುಲ ಅವನದು‌. ಅಂತಹ ಮಾತೆಯೊಡಲಲ್ಲಿ ಕಣ್ಮುಚ್ಚಿದರೂ ಅದು ಭಾಗ್ಯ ಎನ್ನುವ ಧೋರಣೆ ಅವನದು. ಇದೇ  ಕಡಲಿನ ಶಾಂತ ಸ್ವರೂಪವನ್ನೂ ಅವನು ಚೆನ್ನಾಗಿ ಬಲ್ಲನು. ಅದೆಷ್ಟು ಬಾರಿ ಈ ಕಡಲು ಅವನ ಹೊಟ್ಟೆಗೆ ಹಿಟ್ಟಿನ ದಾರಿ ನೀಡಿಲ್ಲ! ಅದೆಷ್ಟು ಬಾರಿ ಅವನ ಅದೆಷ್ಟೋ ದುಗುಡಗಳನ್ನು ಕಡಲತಡಿಯ ತಣ್ಣನೆಯ ಗಾಳಿ ತಣಿಸಿಲ್ಲ! ಅದೆಷ್ಟು ನಿದ್ರೆಯಿರದ ರಾತ್ರಿಗಳನ್ನು ಅವನು ಅದೇ ಕಡಲತಡಿಯ ಮರಳ ಮೇಲೆ ಕಳೆದಿಲ್ಲ! ಕದಡಿದ, ಭಾರವಾದ ಮನ ಹೊತ್ತು ಆ ತುದಿಯ ಹೆಬ್ಬಂಡೆಯ ಮೇಲೆ ಕುಳಿತು ಮೌನವಾಗಿ ಕಡಲ ಶಾಂತ ಅಲೆಗಳ ಹೊಯ್ದಾಟವನ್ನು ನೋಡನೋಡುತ್ತಾ ಆತ್ಮ ಮಂಥನ ನಡೆಸಿದ ದಿನಗಳೆಷ್ಟೋ! ಒಟ್ಟಿನಲ್ಲಿ ಕಡಲು ಅವನ ಜೀವ, ಜೀವನವೇ ಆಗಿತ್ತು. ಒಂದು ವೇಳೆ ತಾನು ಇಂತಹ ಮಾತೃ ಸಮಾನವಾದ ಕಡಲ ಒಡಲಲ್ಲಿ ಹೇಳಹೆಸರಿಲ್ಲದೆ ಗತಿಸಿದರೂ ಅದು ತನ್ನ ಪಾಲಿನ ಭಾಗ್ಯವೆಂದೇ ಅವನ ಭಾವ. ಕಣ್ಮುಚ್ಚಿ ಕೈಮುಗಿದು ನಿಂತನವನು ತನ್ನ ಸಾವನ್ನು ಸ್ವಾಗತಿಸಲೇನೋ ಎಂಬಂತೆ! 
 #ಧ್ರುವತಾರೆ-೩ #ಸಣ್ಣಕಥೆ  #ಹಾಗೆ_ಸುಮ್ಮನೆ  #ಅರೆಘಳಿಗೆ_ಹೊಳೆದ_ಸಾಲುಗಳು  
#yqjogi #yqkannada  
#ಕನ್ನಡ_ಪ್ರೀತಿ
loader
Home
Explore
Events
Notification
Profile